Advertisement

ಚುನಾವಣೆ ಎಫೆಕ್ಟ್: ವ್ಯಾಪಾರಕ್ಕೆ ಹೊಡೆತ

11:15 AM May 17, 2018 | Team Udayavani |

ಬಜಪೆ: ಚುನಾವಣೆ ನಡೆದು ಫ‌ಲಿತಾಂಶ ಹೊರಬಿದ್ದಿದೆ. ಈಗ ಎಲ್ಲರದ್ದೂ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲಿರುವ ಸರಕಾರದದ್ದೇ ಮಾತು. ಈ ಬಿಸಿ ಮಾರುಕಟ್ಟೆಗೂ ತಟ್ಟಿದೆ. ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ.

Advertisement

ಮೌಡ್ಯ ಮೇ 15ರಿಂದ ಆರಂಭಗೊಂಡಿದ್ದು ಇದರ ಮೊದಲೇ ಮದುವೆ ಹಾಗೂ ಇತರ ಸಮಾರಂಭಗಳು ಮುಗಿಯಬೇಕೆಂದು ಅದರ ಮುಂದಿನ ದಿನ ಎಲ್ಲೆಡೆ ಒಮ್ಮೆಲೇ ಸಮಾರಂಭಗಳು ನಡೆದು ಹೋದವು. ವಿದೇಶ ಹಾಗೂ ಇತರೆಡೆಯಿಂದ ಬಂದ ಸಂಬಂಧಿಕರು ಮರಳಿ ತೆರಳಿದ್ದಾರೆ. ಇದರಿಂದ ಈಗ ಗೌಜಿಗದ್ದಲ ಕಡಿಮೆಯಾಗಿದೆ.

ಚುನಾವಣೆಯಿಂದಾಗಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಂದ ಬರುವ ತರಕಾರಿ ಹಾಗೂ ಹಣ್ಣು ಹಂಪಲುಗಳು ಸಮರ್ಪಕವಾಗಿ ಮಾರುಕಟ್ಟೆಗೆ ಬರುವುದಿಲ್ಲ. ಕಾರ್ಮಿಕರು ಹಾಗೂ ವ್ಯಾಪಾರಿಗಳು ಅದಕ್ಕೆ ಹೆಚ್ಚು ಗಮನ ಕೊಟ್ಟ ಕಾರಣ ಕೊಂಚ ಮಟ್ಟಿಗೆ ಕೊರತೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ದರ ಏರಿಕೆ
ಮಾರುಕಟ್ಟೆಯಲ್ಲಿ ಹಣ್ಣು- ಹಂಪಲು, ತರಕಾರಿ ದರಗಳು ಕೊಂಚ ಏರಿಕೆಯಾಗಿವೆ. ಮಾವು ದರ ತುಸು ಇಳಿಕೆ ಕಂಡಿದೆ. ಸ್ಥಳೀಯ ಹಾಗೂ ಇತರೆಡೆಯಿಂದ ಬರುವ ವಿವಿಧ ಬಗೆಯ ಮಾವು ಗಳು ಮಾರುಕಟ್ಟೆಗೆ ಸಲೀಸಾಗಿ ಆಗಮಿಸುವುದು ಇದಕ್ಕೆ ಕಾರಣ. ಮೇ 17ರಿಂದ ಮುಸ್ಲಿಂ ಬಾಂಧವರಿಗೆ ರಮ್ಜಾನ್‌ ಹಬ್ಬ ಆರಂಭವಾಗುವುದರಿಂದ ತರಕಾರಿ ಹಾಗೂ ಹಣ್ಣು ಹಂಪಲುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಚುನಾವಣೆ ಕಾರ್ಯ
ಬೆಂಗಳೂರು ಹಾಗೂ ಇತರೆಡೆಯಿಂದ ಕೆಲವೇ ಕೆಲವು ಲಾರಿಗಳು ಈಗ ಆಗಮಿಸುತ್ತಿವೆ. ಅಲ್ಲಿನ ವ್ಯಾಪಾರಿಗಳು, ಕಾರ್ಮಿಕರು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದು ಸರಕಾರ ರಚನೆಯಾದ ಮೇಲೆ ವ್ಯಾಪಾರ ಕುದುರಬಹುದು.
– ಅನ್ವರ್‌, ವ್ಯಾಪಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next