ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಗಿಯುತ್ತಿದ್ದಂತೆ ಮಾಸಾಂತ್ಯಕ್ಕೆ ತೆರವಾಗಲಿರುವ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂ. 29ಕ್ಕೆ ಚುನಾವಣೆ ಘೋಷಣೆಯಾಗಿದೆ.
ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳು ಸಕ್ರಿಯರಾಗಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಕಾಂಗ್ರೆಸ್‌ನ ನಸೀರ್ ಅಹಮ್ಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಎಚ್.ಎಂ. ರೇವಣ್ಣ, ಜೆಎಡಿಎಸ್‌ನ ಟಿ.ಎ. ಶರವಣ ಮತ್ತು ಪಕ್ಷೇತರ ಯು.ಡಿ. ಮಲ್ಲಿಕಾರ್ಜುನ್ ಅವರ ಪರಿಷತ್ ಸದಸ್ಯತ್ವ ಅವಧಿ ಜೂ. 30ಕ್ಕೆ ಮುಕ್ತಾಯವಾಗಲಿದ್ದು, ಈ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಸದ್ಯ ವಿಧಾನಸಭೆಯಲ್ಲಿ 221 ಶಾಸಕರಿದ್ದಾರೆ. ಈ ಪೈಕಿ ಆಡಳಿತಾರೂಢ ಬಿಜೆಪಿಯು ಸ್ಪೀಕರ್ ಸೇರಿ 117 ಶಾಸಕ ಬಲ ಹೊಂದಿದೆ. ಕಾಂಗ್ರೆಸ್‌ನ 68, ಜೆಡಿಎಸ್‌ನ 34, ಪಕ್ಷೇತರ 2 ಮತ್ತು ಬಿಎಸ್‌ಪಿಯ ಒಬ್ಬರು ಶಾಸಕರಿದ್ದಾರೆ.
ವಿಧಾನಸಭೆಯ ಹಾಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ಅದರಂತೆ ಈಗಿರುವ ಸಂಖ್ಯಾಬಲದಡಿ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಸ್ಥಾನ ಪಡೆಯಲು ಅವಕಾಶವಿದೆ.
ಬಿಜೆಪಿಯಲ್ಲಿ ಭಾರೀ ಪೈಪೋಟಿ
ವಿಧಾನ ಪರಿಷತ್‌ನ 4 ಸ್ಥಾನ ಗೆಲ್ಲಲು ಅವಕಾಶವಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಸಚಿವ ಆರ್. ಶಂಕರ್ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಅಪಸ್ವರವಿದ್ದಂತಿಲ್ಲ.
ಜೂ. 29ಕ್ಕೆ ಚುನಾವಣೆ
– ಜೂ. 11 – ಅಧಿಸೂಚನೆ ಪ್ರಕ ಟ
– ಜೂ. 18 – ನಾಮಪತ್ರ ಸಲ್ಲಿಕೆಗೆ ಕಡೇ ದಿನ
– ಜೂ. 19- ನಾಮಪತ್ರ ಪರಿಶೀಲನೆ
– ಜೂ.22 – ನಾಮ ಪತ್ರ ಹಿಂದೆಗೆ ತಕ್ಕೆ ಕಡೇ ದಿನ
– ಜೂ. 29ಕ್ಕೆ ಮತದಾನ, ಸಂಜೆಯೇ ಫಲಿತಾಂಶ