Advertisement

ಚುನಾವಣೆ: ಬಿಜೆಪಿ ಮಾದರಿ ಸಂಘಟನೆಗೆ ಕಾಂಗ್ರೆಸ್‌ ಸಿದ್ಧ

12:02 AM Jun 26, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಮಾದರಿಯಲ್ಲಿ ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಜತೆಗೆ ಯುವ ಹಾಗೂ ಮಹಿಳಾ ನಾಯಕರ ಸೃಷ್ಟಿಗೆ ಕಾಂಗ್ರೆಸ್‌ ಮುಂದಾಗಿದೆ.

Advertisement

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಘಟನೆ ಮಾಡದೆ ಸಮುದಾಯ ಅಥವಾ ಜಾತಿ ಬಿಟ್ಟು ವಿಷಯಾವಾರು ಆಧಾರಿತವಾಗಿ ಯುವ ಮತ್ತು ಮಹಿಳಾ ಸಮೂಹವನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ.

ಕಾಂಗ್ರೆಸ್‌ನ ಮತಬ್ಯಾಂಕ್‌ ಬೇರೆ ಪಕ್ಷಗಳಿಗೆ ವರ್ಗಾವಣೆಗೊಂಡಿದೆ. ಈಗ ಅದನ್ನು ಮತ್ತೆ ಸೆಳೆಯುವ ಜತೆಗೆ ಎಲ್ಲ ವರ್ಗದ ಯುವ ಮತ್ತು ಮಹಿಳಾ ವರ್ಗದಲ್ಲಿ ವಿಶ್ವಾಸ ಮೂಡಿಸಿ ಬೂತ್‌ ಮಟ್ಟದಲ್ಲಿ ನಾಯಕತ್ವ ನೀಡಬೇಕೆಂಬ ಬಗ್ಗೆ ಇತ್ತೀಚೆಗೆ ನಡೆದ ಸಂಕಲ್ಪ ಶಿಬಿರದಲ್ಲೂ ಚರ್ಚೆಯಾಗಿದ್ದು, ಇದಕ್ಕಾಗಿ ನೀಲನಕ್ಷೆ ರೂಪಿಸಲಾಗಿದೆ ಎನ್ನಲಾಗಿದೆ.

2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಹಾಗೂ ಅನಂತರ ನಡೆದ ಉಪ ಚುನಾವಣೆಗಳ ಫ‌ಲಿತಾಂಶದ ಆಧಾರದಲ್ಲಿ ಈಗಾಗಲೇ ಎರಡು ಮೂರು ಬಾರಿ ಸಮೀಕ್ಷೆ ವರದಿ ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್‌ಗೆ ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗ ಹೊರತುಪಡಿಸಿ ಕರಾವಳಿ ಮತ್ತು ಮಲೆನಾಡಿನಲ್ಲಿ ಸುಸಜ್ಜಿತ ತಂಡ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಾದ್ಯಂತ ಯುವಜನರು ಹಾಗೂ ಮಹಿಳೆಯರ ಬಗ್ಗೆ ಹೆಚ್ಚು ಗಮನಹರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರು ಪ್ರಿಯಾಂಕಾ ಗಾಂಧಿ ಅವರ “ಮೈ ಲಡಿR ಹೂಂ ಲಡ್‌ ಸಕ್ತೀ ಹೂಂ’ ಘೋಷಣೆಯಡಿ “ನಾ ನಾಯಕಿ’ ಕಾರ್ಯಕ್ರಮ ರೂಪಿಸಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಸಾವಿರ ಮಹಿಳೆಯರ ಸಂಘಟನೆ ಮತ್ತು ಅವರಿಗೆ ಅಧಿಕಾರ ನೀಡುವ ಕಾರ್ಯಕ್ರಮ ರೂಪಿಸಿದ್ದಾರೆ.

Advertisement

ಇದೇ ಮಾದರಿಯಲ್ಲಿ ಯುವ ಜನರನ್ನು ಸೆಳೆಯಲು ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಆಯಾ ಕ್ಷೇತ್ರ ಅಥವಾ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಕೇಂದ್ರಿತವಾಗಿ ಸಂವಾದ, ಸಮಾಲೋಚನೆ ಆಯೋಜಿಸಿ ಯುವ ಗ್ರೂಪ್‌ ರಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಹೊಸಬರ ತಂಡ ರಚನೆ
ಕಾಂಗ್ರೆಸ್‌ನಲ್ಲಿ ಶಾಸಕರು ಅಥವಾ ಮಾಜಿ ಶಾಸಕರು, ಇಲ್ಲವೇ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಸದಸ್ಯರಲ್ಲೇ ಪಕ್ಷದ ಅಧಿಕಾರವೂ ಕೇಂದ್ರೀಕೃತ ವಾಗಿರುತ್ತದೆ. ಹೊಸಬರು ಹಾಗೂ ಯುವಕರಿಗೆ ಅವಕಾಶವೇ ದೊರೆಯು ತ್ತಿಲ್ಲ. ಯುವಕರನ್ನು ಪಕ್ಷದ ಕೆಲಸಕ್ಕೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ, ಆದರೆ ಅಧಿಕಾರ ಇನ್ನೂ ಸಿಕ್ಕಿಲ್ಲ ಎಂಬ ಅಸಮಾಧಾನವೂ ಪಕ್ಷದ ವಲಯದಲ್ಲಿದೆ. ಆದ್ದರಿಂದ ಯುವಕರು ಹಾಗೂ ಮಹಿಳೆಯರಿಗೆ ಬೂತ್‌ಮಟ್ಟದಲ್ಲಿ ನಾಯಕತ್ವ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ತಂಡ ರಚಿಸಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ. ಆಗಸ್ಟ್‌ ಅಂತ್ಯದೊಳಗೆ ಈ ಕಾರ್ಯ ಮುಗಿಸಲು ನಿರ್ಧರಿಸಲಾಗಿದೆ.

ದೇಶದಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೆ ಶಕ್ತಿ ತುಂಬಿದ್ದೇ ಕಾಂಗ್ರೆಸ್‌. ಈ ಎರಡೂ ವರ್ಗ ದೇಶದ ಆಸ್ತಿ. ಹೀಗಾಗಿ ನಾವು ಬೂತ್‌ ಮಟ್ಟದಲ್ಲಿ ಅವರಿಗೆ ನಾಯಕತ್ವ ಕೊಡಲು ತೀರ್ಮಾನಿಸಿದ್ದೇವೆ. ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಿದ್ದೇವೆ. ಈಗಾಗಲೇ “ನಾ ನಾಯಕಿ’ ಕಾರ್ಯಕ್ರಮ ನಡೆಯುತ್ತಿದೆ. ವಿಷಯಾಧಾರಿತವಾಗಿ ಯುವ ಸಮೂಹ ಕಾಂಗ್ರೆಸ್‌ನತ್ತ ಆಕರ್ಷಿಸಲು ಯೋಜನೆ ಹಾಕಿಕೊಂಡಿದ್ದೇವೆ.
– ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next