Advertisement

ಚುನಾವಣೆ ಸ್ಪರ್ಧೆ: ಕಾರ್ಯಕರ್ತರ ತೀರ್ಮಾನ ಅಂತಿಮ

07:26 AM Mar 15, 2019 | Team Udayavani |

ಅರಕಲಗೂಡು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ವ್ಯಾಪ್ತಿಯ ಕಾರ್ಯಕರ್ತರು,ಅಭಿಮಾನಿಗಳು ಹಾಗೂ ಹಿರಿಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಲುವಾಗಿ ಸಭೆಯನ್ನು ಕರೆದು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು. ಗುರುವಾರ ಪಟ್ಟಣದಲ್ಲಿ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಎ.ಮಂಜು ಅಭಿಮಾನಿಗಳು,ಹಿತೈಷಿಗಳು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Advertisement

ಸೋಲಿನ ರುಚಿ ತೋರಿಸಿ: ಮೈಸೂರಿನ ಚಾಮುಂಡೇಶ್ವರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಿತೂರಿಯ ಕಾರ್ಯತಂತ್ರವನ್ನು ದೇವೇಗೌಡರು ರೂಪಿಸಿದ್ದರೋ.ಅದೇ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಕಾರ್ಯಕರ್ತರು ತೊಡಗಿಕೊಂಡು ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು,ಮೊಮ್ಮಕ್ಕಳನ್ನು ಸೋಲಿಸುವ ಮೂಲಕ ಸಮಾಜಕ್ಕೆ ಹೊಸ ಭರವಸೆಯ ರಾಜಕೀಯ ಇತಿಹಾಸ ನಿರ್ಮಿಸಬೇಕೆಂದು ಕಾರ್ಯಕರ್ತರಲ್ಲಿ ಕೈಮುಗಿದು ವಿನಂತಿಮಾಡಿದರು.

ಕುಟುಂಬದ ರಾಜಕಾರಣ: ನಿಯಮದಂತೆ ಸರಕಾರಿ,ಅರೆ ಸರಕಾರಿ ನೌಕರನಿಗೆ ಹಂತ ಹಂತವಾಗಿ ಬಡ್ತಿ ಸಿಗುತ್ತದೆ.ಆದರೆ ದೇವೇಗೌಡರ ಕುಟುಂಬದಲ್ಲಿ ಮಾತ್ರ ಅದು ವಿರುದ್ಧವಾಗಿರುತ್ತದೆ. ಹಾಸನ ಮತ್ತು ಮಂಡ್ಯದಲ್ಲಿ ಮೊಮ್ಮಕ್ಕಳಿಗೆ ಸೀಟು ಕೊಡಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಕೆಂಡಕಾರಿದರು.

ಕಣ್ಣೀರಿಗೆ ವ್ಯಂಗ್ಯ: ಮಾಜಿ ಪ್ರಧಾನಿ ದೇವೇಗೌಡ,ಸಚಿವ ರೇವಣ್ಣ,ಮೊಮ್ಮಗ ಪ್ರಜ್ವಲ್‌ ರೇವಣ್ಣ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ.ಮನುಷ್ಯ ಕಷ್ಟಬಂದಾಗ ಕಣ್ಣೀರು ಹಾಕುತ್ತಾನೆ. ಆದರೆ ಎಲ್ಲಾ ರಾಜಕೀಯ ಅಧಿಕಾರ ಅನುಭವಿಸಿ ವೇದಿಕೆಯಲ್ಲಿ ಕಣ್ಣೀರು ಹಾಕುವ ದೇವೇಗೌಡರ ನಡೆ ಸರಿಯಿಲ್ಲ. ಈ ವೇಳೆ ದೇವೇಗೌಡರ ಮಗ ಸಚಿವ ರೇವಣ್ಣ,ಮೊಮ್ಮಗ,ಸೊಸೆ ಸಹ ವೇದಿಕೆಯಲ್ಲಿದ್ದು, ಕಣ್ಣೀರು ಹಾಕಿದ್ದಾರೆ ವಿನಃ ನಿವೇ ಹಾಸನದಲ್ಲಿ ನಿಂತುಕೊಳ್ಳಿ ಎಂದು ವೇದಿಕೆಯಲ್ಲಿ ಹೇಳಿದ್ದರೇ ಅದನ್ನು ಒಪ್ಪಬಹುದಿತ್ತು ಎಂಧರು.

ನಾನು ಮತ್ತೂಮ್ಮೆ ಹೇಳುತ್ತೇನೆ.ದೇವೇಗೌಡ್ರೆ ಹಾಸನದಿಂದ ಸ್ಪರ್ಧಿಸಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ವೇದಿಕೆಯಲ್ಲಿ ಪುನರುಚ್ಚರಿಸಿದರು. ಅಳುವ ಮೂಲಕ ಮೊಮ್ಮಕ್ಕಳಿಗೆ ಸಹಾಯಮಾಡಿ ಎಂಬ ನಾಟಕದಿಂದ ದೇವೇಗೌಡ ಕಣ್ಣೀರು ಹಾಕುತ್ತಾರೆ ವಿನಃ ಅದು ಸಂಕಷ್ಟದ ಕಣ್ಣೀರು ಅಲ್ಲ ಎಂದು ಅವರು ವ್ಯಂಗ್ಯವಾಡಿದರು.

Advertisement

ಕಾಂಗ್ರೆಸ್‌ ಕಾರ್ಯಕರ್ತರ ನಿರ್ಲಕ್ಷ್ಯ: ಜಿಲ್ಲಾ ಕಾಂಗ್ರೆಸ್‌ ಮುಖಂಡ ನಾರಾಯಣಗೌಡ,ಹಳ್ಳಿ ಮೈಸೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಾಂಭಶಿವಪ್ಪ,ಜಿಪಂ ಸದಸ್ಯ ರೇವಣ್ಣ,ಕಾಂಗ್ರೆಸ್‌ ಮುಖಂಡ ಮುನಿಸ್ವಾಮಿ,ಎಂಡಿ ಹಾಸಂ ಮಾತನಾಡಿ,ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬಂದಾಗಿನಿಂದ ಕಾಂಗ್ರೆಸ್‌ ಕಾರ್ಯಕರ್ತರು,ಮುಖಂಡರನ್ನು ಕೇಳುವವರಿಲ್ಲ.ಮಾಜಿ ಸಚಿವ ಮಂಜು ಅವರು ಲೋಕಸಭೆ ಚುನಾವಣೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಸ್ವಾಗತಿಸಿ ಅವರ ಬೆಂಬಲಕ್ಕೆ ನಿಲ್ಲುವ ಭರವಸೆಯನ್ನು ನೀಡಿದರು.

ವೇದಿಕೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಕಂಬೇಗೌಡ,ಕಾಂಗ್ರೆಸ್‌ ಮುಖಂಡ ರಾಜೇಗೌಡ,ಕಮಲಮ್ಮ,ಪ್ರಸನ್ನಕುಮಾರ್‌,ರಂಗೇಗೌಡ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next