ಶ್ರೀನಗರ : ಭಾರತೀಯ ಚುನಾವಣಾ ಆಯೋಗ ಈಗ ಬಿಜೆಪಿಯ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಧಾರ್ಮಿಕ ಪ್ರಚಾರದ ಆಧಾರದ ಮೇಲೆ ಪ್ರಚಾರ ನಡೆಸಿದಾಗ ಚುನಾವಣಾ ಆಯೋ ಮೌನವಾಗಿದೆ. ಚುನಾವಣಾ ಆಯೋಗ ಮೊದಲಿನಂತೆ ಸ್ವತಂತ್ರವಾಗಿಲ್ಲ. ಬಿಜೆಪಿಯ ಸೂಚನೆಯ ಮೇರೆಗೆ ಚುನಾವಣೆ ನಡೆಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಬಿಜೆಪಿ ಕಾಶ್ಮೀರಿ ಪಂಡಿತರನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಮುಫ್ತಿ ಹೇಳಿದ್ದಾರೆ. ”ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಜಮ್ಮುವಿಗೆ ವರ್ಗಾವಣೆ ಮಾಡುವಂತೆ ಕೇಳುತ್ತಿದ್ದಾರೆ, ಆದರೆ ಸರಕಾರವು ಕೆಲವೊಮ್ಮೆ ಅವರ ಸಂಬಳ ಮತ್ತು ಪಡಿತರವನ್ನು ನಿಲ್ಲಿಸುತ್ತಿದೆ. ಕಾಶ್ಮೀರಿ ಪಂಡಿತರು ಅಥವಾ ಯಾರೇ ಆಗಲಿ ಬಿಜೆಪಿಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ” ಎಂದು ಹೇಳಿದ್ದಾರೆ.