ರಾಮನಗರ: ವಿಧಾನಸಭಾ ಚುನಾವಣಾ ರಣಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಘೋಷಣೆಗೂ ಮುನ್ನ ಟಿಕೆಟ್ ಗಿಟ್ಟಿಸಿಕೊಳ್ಳುವು ದರಲ್ಲೇ ಬ್ಯುಸಿಯಾಗಿದ್ದು, ಇದೀಗ ಟಿಕೆಟ್ ಘೋಷಣೆಯಾಗಿದೆ.
ನಾಮಪತ್ರ ಸಲ್ಲಿಕೆಗೆ ಸದ್ದಿಲ್ಲದೆ ದಿನಾಂಕ ನಿಗದಿಪಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಆದರ ನಡುವೆ ಪ್ರಚಾರದ ಭರಟೆ ಹೆಚ್ಚಾಗದೆ, ಇನ್ನೂ ತಣ್ಣಗೆ ಸಾಗುತ್ತಿರುವುದು ವಿಶೇಷ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಪ್ರಚಾರ ಇನ್ನೂ ಭರಾಟೆ ಪಡೆದುಕೊಂಡಿಲ್ಲ. ಇನ್ನು ಇದೀಗ ಅಭ್ಯರ್ಥಿಗಳ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಬಿರುಸಿನ ಪ್ರಚಾರ ಕೈಗೊಳ್ಳುವ ಚಿಂತನೆ ನಡೆದಿದೆ.
ಸದ್ದಿಲ್ಲದೆ ಒಳಗೊಳಗೆ ಪ್ರಚಾರ: ತೀವ್ರ ಕುತೂಹಲ ಕೆರಳಿಸಿದ್ದ ರಾಮನಗರ ಕ್ಷೇತ್ರಕ್ಕೆ ಡಾ, ಸಿಎನ್ ಅಶ್ವತ್ಥ್ ನಾರಾಯಣಗೆ ಟಿಕೆಟ್ ನೀಡುತ್ತದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅದರ ನಡುವೆಯೂ ಗೌತಮ್ ಗೌಡರಿಗೆ ಟಿಕೆಟ್ ನೀಡಿದ್ದು, ಇದೀಗ ಚುನಾವಣಾ ಕಣ ರಂಗೇರಿದೆ. ಜೆಡಿಎಸ್ ನಿಖೀಲ್ ಕುಮಾರಸ್ವಾಮಿ ಅಭ್ಯರ್ಥಿಯಾ ಗಿದ್ದಾರೆ. ಅವರ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್ ಸ್ಪರ್ಧೆ ಮಾಡಲಿದ್ದು, ಈವರೆಗೆ ತಾವ, ಡೈನಿಂಗ್ ಸೆಟ್ ನೀಡುವ ಮೂಲಕ ಯಾತ್ರೆ ಮಾಡಿ ಸುವ ಬಿರುಸಿನಲ್ಲಿದ್ದ ಕಾಂಗೆಸ್ ಅಭ್ಯರ್ಥಿ ಸದ್ಯ ಪ್ರಚಾ ರದ ವೇಗ ಕಡಿಮೆ ಮಾಡಿದಂತಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೂಡ ಯಾತ್ರೆ ಮಾಡಿಸಿದ್ದು ಆ ಯ್ತು, ಇದೀಗ ಅವರು ಕೂಡ ಗ್ರಾಮಗಳ ಭೇಟಿ ನಡೆಸುತ್ತಿದ್ದು ವಿರೋಧ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆ ಬಳಿಕ ಚುರುಕುಗೊಳ್ಳಬೇಕಿದ್ದ ಚುನಾವಣಾ ಪ್ರಚಾರ ಸದ್ದಿಲ್ಲದೆ ಒಳಗೊಳಗೆ ನಡೆಯುತ್ತಿದೆ.
ಪ್ರಚಾರ ಕಾರ್ಯ ಇನ್ನೂ ಆರಂಭಿಸಿಲ್ಲ: ರಾಜಕೀಯ ಪಡಸಾಲೆಯಲ್ಲಿ ಆರ್. ಅಶೋಕ್ ಕೂಡ ಒಕ್ಕಲಿಗ ಕೋಮಿಗೆ ಸೇರಿದ್ದು, ಒಕ್ಕಲಿಗ ಸಮುದಾಯದ ಮತಗಳಿಗೆ ಲಗ್ಗೆಯಿಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ಜೊತೆಗೆ ಸಹಜವಾಗಿಯೇ ಲಿಂಗಾಯಿತ ಸಮುದಾಯ ಬಿಜೆಪಿಗೆ ಕೈಜೋಡಿಸುವುದು ಇನ್ನುಳಿದಂತೆ ಹಿಂದುಳಿದ ದಲಿತ ಮತ ಬ್ಯಾಂಕ್‌ಗೆ ಲಗ್ಗೆಯಿಟ್ಟು ಡಿಕೆಶಿ ಬ್ರದರ್ ನಾಗಾಲೋಟಕ್ಕೆ ಕಡಿವಾಣ ಹಾಕಬಹುದೇನೋ ಎನ್ನುವ ಲೆಕ್ಕಾಚಾರ ಕೂಡ ಚರ್ಚೆಯ ವಿಷಯ ವಾಗಿದೆ. ಈ ನಡುವೆ ಜೆಡಿಎಸ್ ಕೂಡ ಅಭ್ಯರ್ಥಿಯನ್ನಾಗಿ ಸ್ಥಳೀಯ ಕಾರ್ಯಕರ್ತ ನಾಗರಾಜು ಅವರನ್ನ ಘೋಷಣೆ ಮಾಡಿದ್ದು, ಜೆಡಿಎಸ್‌ಗೆ ಇಲ್ಲಿ ಮತ ಬ್ಯಾಂಕ್ ಎನ್ನುವಂತೆ ಸಹಜವಾಗಿ 45 ರಿಂದ 50 ಸಾವಿರ ಮತಗಳಿವೆ. ಆದರೆ, ಮೂವರು ಕೂಡ ಇನ್ನೂ ಮತಯಾಚನೆ ಪ್ರಚಾರ ನಡೆಸಲು ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಅಖಾಡಕ್ಕಿಳಿಯುವ ಮೂವರ ವೇಗ ಮತ್ತು ಮತ ದಾರರ ಮನವೊಲಿಕೆಯ ಪ್ರಯತ್ನ ಎಷ್ಟರ ಮಟ್ಟಿಗೆ ಎನ್ನುವುದು ಸೋಲು-ಗೆಲುವು ನಿರ್ಧರಿಸಲಿದೆ.
ಆರ್. ಅಶೋಕ್ ಸ್ಪರ್ಧೆಯಿಂದ ಹೆಚ್ಚಿಸಿದ ಉತ್ಸಾಹ : ಕನಕಪುರ ವಿಧಾನಸಭಾ ಕ್ಷೇತ್ರವಾದ ಬಳಿಕ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯದ ಪ್ರಭಾವಿ ಚಾಣಾಕ್ಯ ನಾಯಕ ಆರ್.ಅಶೋಕ್‌ಗೆ ಟಿಕೆಟ್ ನೀಡುವ ಮೂಲಕ ಅನಿರೀಕ್ಷಿತ ಹೆಜ್ಜೆಯನ್ನಿಟ್ಟಿರುವ ಬಿಜೆಪಿ ಮತ್ಯಾವ ಗಾಳ ಉರುಳಿಸಲಿದೆ ಎಂದು ಎಲ್ಲರ ಗಮನ ಸೆಳೆದಿದೆ. ಇನ್ನೊಂದು ಮೂಲದ ಪ್ರಕಾರ ಡಿ.ಕೆ. ಶಿವಕುಮಾರ್ ಕೂಡ ಒಕ್ಕಲಿಗ ಕೋಮಿನ ನಾಯಕರಾಗಿದ್ದು, ಬಿಜೆಪಿಗೆ ಇಲ್ಲಿ ಅಷ್ಟೊಂ ದು ಅಸ್ಥಿತ್ವ ಇರಲಿಲ್ಲ. ಅಲ್ಲದೆ, ಇದು ಮಠಗಳನ್ನ ಹೊಂದಿರುವ ಕ್ಷೇತ್ರ. ಜೊತೆಗೆ ಇಲ್ಲಿ ಒಕ್ಕಲಿಗ ಕೋಮು ಪ್ರಭಾವ ಹೆಚ್ಚಾಗಿದ್ದು, ಡಿ,ಕೆ ಬ್ರದರ್ರನ್ನ ಮಣಿಸಲು ಸ್ಥಳೀಯ ನಾಯಕರ ಕೈಯಲ್ಲಿ ಅಸಾಧ್ಯ ಎಂದರಿತ ಅಮಿತ್ ಶಾ ಮತ್ತು ಕೇಂದ್ರದ ಚುನಾವಣಾ ಸಂಸದೀಯ ಮಂಡಳಿ ನಿರ್ಧಾರ ಒಂದು ಹಂತದಲ್ಲಿ ಅಶೋಕ್‌ಗೂ ಕೂಡ ಅಚ್ಚರಿಯಂತೆ ಆದರೂ ಇಲ್ಲಿ ಡಿಕೆ ಬ್ರದರ್ ಕಟ್ಟಿ ಹಾಕಲು ರಾಜ್ಯದಲ್ಲಿ ಹೋರಾಟದ ವೇಗ ಕುಗ್ಗಿಸಲು ಆರ್. ಅಶೋಕ್ ಅವರನ್ನ ಸ್ಪರ್ಧೆಗಿಳಿಸಿದ್ದಾರೆ ಎನ್ನುವ ಮಾತುಗಳ ನಡುವೆಯೂ, ಯಾರೇ ಬಂದ್ರೂ ತಲೆ ಕೆಡಿಸಿಕೊಳ್ಳೊದಿಲ್ಲ ಮಿಲಿಟರಿ ಹೋಟೆಲ್‌ಗಳು ಹೈಟೆಕ್ ಆಗಿವೆ. ತಿಂದುಂಡು ಹೋಗಬೇಕಷ್ಟೇ ಎನ್ನುವ ಉತ್ತರವನ್ನ ಡಿಕೆ ಶಿವಕುಮಾರ್ ನೀಡುವ ಮೂಲಕ ಬಿಜೆಪಿಯ ತಂತ್ರ ಇಲ್ಲಿ ಏನೂ ನಡೆಯದು ಎನ್ನುವ ನೇರ ಉತ್ತರ ರವಾನಿಸಿದ್ದಾರೆ.
– ಎಂ.ಎಚ್.ಪ್ರಕಾಶ, ರಾಮನಗರ