ಮಂಗಳೂರು: ಚುನಾವಣೆ ದಿನಾಂಕ ಘೋಷಣೆಯಾಗಿ ಅಭ್ಯರ್ಥಿಗಳು ಪ್ರಚಾರಕ್ಕೆ ಇಳಿಯುವ ಹೊತ್ತು ಸನಿಹವಾದರೂ ಕರಾವಳಿಯ ಕ್ಷೇತ್ರಗಳಲ್ಲಿ ಇನ್ನೂ ಪ್ರಮುಖ ಪಕ್ಷಗಳ ಸ್ಪರ್ಧಾಳುಗಳೇ ಅಂತಿಮಗೊಂಡಿಲ್ಲ.
ಕರಾವಳಿಯಲ್ಲಿ ಕಾಂಗ್ರೆಸ್ ತನ್ನ ಹಿಂದಿನ ಅಭ್ಯಾಸ ಕೈಬಿಟ್ಟು ದಕ್ಷಿಣ ಕನ್ನಡ 5 ಮತ್ತು ಉಡುಪಿಯ 3 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ 7, ಉಡುಪಿಯ 5 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವ ಬಿಜೆಪಿ ಯಾವುದೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿ ಸಿಲ್ಲ. ಹಾಗಾಗಿ ಬಿಜೆಪಿ ಆಕಾಂಕ್ಷಿಗಳಲ್ಲಿ ತಳಮಳ ಮುಂದುವರಿದಿದೆ.
ಬಿಜೆಪಿ ಶಾಸಕರ ಪೈಕಿ ಕೆಲವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಸಿಗಲಿದೆ. ಅದೇ ಬೆನ್ನಿಗೆ ಒಂದಿಷ್ಟು ಮಂದಿಗೆ ಟಿಕೆಟ್ ಕೈ ತಪ್ಪುವ ಭೀತಿಯೂ ಇದೆ. ಆ ಹಿನ್ನೆಲೆಯಲ್ಲಿ ಈಗಲೇ ಟಿಕೆಟ್ ಘೋಷಿಸಿದರೆ ಸಮಸ್ಯೆ ಸೃಷ್ಟಿ ಯಾದೀ ತೆಂದು ಪಕ್ಷದ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡು ತ್ತಿದ್ದಾರೆ. ಸದ್ಯ ಹಾಲಿ ಶಾಸಕರು ಅಲ್ಲಲ್ಲಿ ಪ್ರಚಾರ ದಲ್ಲಿ ತೊಡಗಿದ್ದರೂ ಹೆಸರು ಘೋಷಣೆ
ಯಾದ ಮೇಲೆ ಸಂಪೂರ್ಣ ವೇಗ ದೊರಕಲಿದೆ.
ಪುತ್ತೂರು, ಸುಳ್ಯ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬಗ್ಗೆ ವಿರೋಧ, ಚುನಾವಣೆ ಬಹಿಷ್ಕಾರದ ಘೋಷಣೆ ಎಲ್ಲವೂ ನಡೆಯುತ್ತಿದೆ. ಅಮಿತ್ ಶಾ ಬರುವ ವೇಳೆಗೆ ತೀವ್ರಗೊಂಡಿದ್ದ ಈ ಬೆಳವಣಿಗೆ, ಇನ್ನೂ ಶಮನಗೊಂಡಿಲ್ಲ. ಉಳಿದಂತೆ ಮೂಡುಬಿದಿರೆ, ಮಂಗಳೂರು ಉತ್ತರ ಕ್ಷೇತ್ರದಲ್ಲೂ ಒಂದಷ್ಟು ಬದಲಾವಣೆಯ ಸುದ್ದಿ ದಟ್ಟವಾಗಿದೆ.
Related Articles
ಯಾರಿಗೂ ಟಿಕೆಟ್ ಖಚಿತಗೊಂಡಿಲ್ಲ, ಸಂಸದೀಯ ಮಂಡಳಿಯಲ್ಲಿ ಘೋಷಣೆ ಯಾಗುವುದೇ ಅಧಿಕೃತ ಎನ್ನುವುದು ಬಿಜೆಪಿ ಹಿರಿಯ ನಾಯಕರ ಹೇಳಿಕೆ.
ಕಾಂಗ್ರೆಸ್ ತುಸು ನಿರಾಳ
ಈಗಾಗಲೇ 8 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಿರುವ ಕಾಂಗ್ರೆಸ್ ಬಹುತೇಕ ನಿರಾಳವಾಗಿದ್ದು, ಪ್ರಚಾರ ಆರಂಭಿಸಿದೆ.
ಸುಳ್ಯದಲ್ಲಿ ಮಾತ್ರ ಜಿ.ಕೃಷ್ಣಪ್ಪ ವಿರುದ್ಧ ನಂದ ಕುಮಾರ್ ಬಣದವರು ಸಿಡಿದು, ಮಂಗಳೂರಿ ನಲ್ಲಿ ಪಕ್ಷದ ಕಚೇರಿ ಎದುರು ಪ್ರತಿಭಟಿಸಿದ್ದಾರೆ. ಆದರೆ ಪಕ್ಷದ ನಾಯಕರ ಪ್ರಕಾರ ಕೇಂದ್ರೀಯ ಚುನಾವಣ ಸಮಿತಿಯ ಆಯ್ಕೆಯನ್ನು ಕೆಪಿಸಿಸಿ ಯಿಂದಲೂ ಬದಲಾಯಿಸುವುದು ಕಷ್ಟ. ಆದರೆ ಉಳಿದಿರುವ ಮೂರೂ ಕ್ಷೇತ್ರಗಳಲ್ಲಿ ಆಯ್ಕೆ ತೀರಾ ಕ್ಲಿಷ್ಟಕರ. ಮಂಗಳೂರು ನಗರ ದಕ್ಷಿಣದಲ್ಲಿ ಕ್ರೈಸ್ತರಿಗೋ ಅಥವಾ ಬಿಲ್ಲವ ರಿಗೋ ಎಂಬ ಸಂಗತಿ ಮುನ್ನೆಲೆಯಲ್ಲಿದೆ.ಕ್ರೈಸ್ತರಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಐವನ್ ಡಿ’ಸೋಜ ಆಕಾಂಕ್ಷಿಗಳಾಗಿದ್ದರೆ ಬಿಲ್ಲವರಿಂದ ಆರ್. ಪದ್ಮರಾಜ್ ಹೆಸರು ಕೇಳಿಬರ ತೊಡಗಿದೆ. ಮಂಗಳೂರು ಉತ್ತರದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಎಂದಿದ್ದರೂ ಮಾಜಿ ಶಾಸಕ ಮೊದಿನ್ ಬಾವ ಹಾಗೂ ಇನಾಯತ್ ಅಲಿ ಮಧ್ಯೆ ಪೈಪೋಟಿ ತೀವ್ರ ಗೊಂಡಿದೆ. ಪುತ್ತೂರಿನಲ್ಲಿ ಬಿಲ್ಲವ, ಬಂಟ ಹಾಗೂ ಒಕ್ಕಲಿಗರ ನಡುವೆ ಸ್ಪರ್ಧೆ ಇದೆ. ಶಕುಂತಲಾ ಶೆಟ್ಟಿ, ಅಶೋಕ್ ರೈ, ಹೇಮನಾಥ ಶೆಟ್ಟಿ, ಧನಂಜಯ ಅಡ³ಂಗಾಯ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಬಿಜೆಪಿಯಿಂದ ಇಂದು ಅಭಿಪ್ರಾಯ ಸಂಗ್ರಹ
ಲಭ್ಯ ಮಾಹಿತಿ ಪ್ರಕಾರ ಎರಡೆರಡು ಬಾರಿ ಆಂತರಿಕ ಸಮೀಕ್ಷೆಗಳನ್ನು ನಡೆಸಿರುವ ಬಿಜೆಪಿ, ಕೊನೆಯದಾಗಿ ಶಕ್ತಿ ಕೇಂದ್ರ ಮೇಲ್ಪಟ್ಟ ನಾಯಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಇದಕ್ಕಾಗಿ ರಾಜ್ಯ ಮಟ್ಟದ ನಾಯಕರ ತಂಡ ಆಗಮಿಸಿ ಒಂದೇ ದಿನ ಎಲ್ಲಾ ಶಕ್ತಿ ಕೇಂದ್ರಗಳಿಗೆ ತೆರಳಿ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸುವರು. ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ , ಅವರ ಗೆಲುವಿನ ಸಾಧ್ಯಾಸಾಧ್ಯತೆ, ಗುಣದೋಷಗಳ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸುವರು. ಇದಾದ ಬಳಿಕ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ಬಿಜೆಪಿ ನಾಯಕರು. ಕೆಲ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ತಮ್ಮ ಫೇವರಿಟ್ ನಾಯಕರನ್ನು ಹಿಡಿದುಕೊಂಡು ದಿಲ್ಲಿ ತನಕವೂ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.
ಬಿಜೆಪಿ
01ಅಭ್ಯರ್ಥಿ ಘೋಷಣೆ ಆಗದ ಕಾರಣ ಪ್ರಚಾರಕ್ಕೆ ಹಿನ್ನಡೆ
02ಟಿಕೆಟ್ ಕೈ ತಪ್ಪುವ ಆತಂಕ ಯಾರನ್ನೂ ಬಿಟ್ಟಿಲ್ಲ
03ಅಭಿಪ್ರಾಯ ಆಧರಿಸಿಯೇ ಟಿಕೆಟ್ ಹಂಚಿಕೆಗೆ ಕ್ರಮ
ಕಾಂಗ್ರೆಸ್
01 ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ
02ಕೆಲವೆಡೆ ವಿರೋಧ ಬಂದರೂ ಉಳಿದೆಡೆ ನಿರಾಳ
03ಉಳಿದ ಐದು ಕ್ಷೇತ್ರಗಳ ಹಂಚಿಕೆ ಸುಲಭದ ತುತ್ತಲ್ಲ.
- ವೇಣುವಿನೋದ್ ಕೆ.ಎಸ್.