Advertisement
ನಮಗೆ ರಸ್ತೆ, ನೀರು, ತುರ್ತು ವೈದ್ಯಕೀಯ ಸೇವೆ, ದೂರವಾಣಿ ಸಂಪರ್ಕ, ಸರಕಾರಿ ಬಸ್ ಸೌಕರ್ಯಗಳು ಇಲ್ಲ. ಚುನಾವಣೆಗೂ ಮುನ್ನ ರಾಜಕಾರಣಿಗಳು ಭರವಸೆ ನೀಡಿ ಗೆದ್ದ ಬಳಿಕ ಇತ್ತ ಮುಖ ಮಾಡದೇ ಈ ಭಾಗವನ್ನು ಕಡೆಗಣಿಸಿದ್ದಾರೆ. ಸೀತಾನದಿ, ಕೂಡ್ಲು ಭಾಗದಲ್ಲಿ ಕಡಿಮೆ ಮತದಾರರು ಇರುವುದರಿಂದ ಈ ಭಾಗಕ್ಕೆ ಮಂಜೂರಾದ ಅನುದಾನವನ್ನು ಬೇರೆಡೆ ವರ್ಗಾಯಿಸಿ ಈ ಭಾಗದ ಜನತೆಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ಮೂಲಸಮಸ್ಯೆಗಳ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ರಮೇಶ್ ಅವರು ಹೇಳಿದರು. ಗ್ರಾಮಸ್ಥರಾದ ನಾರಾಯಣ ಭಟ್, ನವೀನ್ ಶೆಟ್ಟಿ, ಬಾಬು ಶೆಟ್ಟಿ, ಸುಜಾತಾ ಹೆಗ್ಡೆ, ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Related Articles
ಊರಿನ ಪ್ರಸಿದ್ಧ ಪ್ರವಾಸಿತಾಣವಾದ ಕೂಡ್ಲು ಜಲಪಾತದಲ್ಲಿ ವರ್ಷಕ್ಕೆ 10 ಲಕ್ಷ ರೂ. ಆದಾಯ ಬರುತ್ತದೆ. ಇದನ್ನು ನಮ್ಮೂರಿನ ಅಭಿವೃದ್ಧಿಗೆ ಬಳಸಿದರೆ ಸರಕಾರದ ಯಾವುದೇ ಅನುದಾನದ ಅಗತ್ಯವಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ಮೌನವಾಗಿದ್ದಾರೆ ಎಂದು ಗುಲ್ಕಾಡು ಭಾಸ್ಕರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
Advertisement