ಮೈಸೂರು : ನಂಜನಗೂಡು ಮತ್ತು ಗುಂಡ್ಲು ಪೇಟೆ ಕ್ಷೇತ್ರಗಳ ಚುನಾವಣಾ ಕಾವು ಏರತೊಡಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡುವೆ ವಾಕ್ಸಮರ ಮುಂದುವರಿದದೆ.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ನಾವು ಸಿದ್ದರಾಮಯ್ಯ ಅವರ ದುರಾಡಳಿತ, ಅಧರ್ಮ, ದರೋಡೆ ಮತ್ತು ಲೂಟಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ನಂಜನಗೂಡಿನಲ್ಲಿ ಮೋದಿ ಅಲೆ ಇದೆಯೋ ಇಲ್ಲವೋ ಜನ ನಿರ್ಧರಿಸುತ್ತಾರೆ ಎಂದರು.
ಯಡಿಯೂರಪ್ಪ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಏನು ಧರ್ಮಾಧಿಕಾರಿಯೋ ? ಅವರು ಮಾಡಿದ ಪಾಪ ಇನ್ನೊಂದು ಜನ್ಮದಲ್ಲೂ ಪರಿಹಾರವಾಗುವುದು ಕಷ್ಟ ಎಂದು ಕೆಂಡಾಮಂಡಲರಾದರು.
ಬಿಜೆಪಿ ಉಪಚುನಾವಣೆ ವೇಳೆ ಬಜೆಟ್ ಮಂಡನೆಗೆ ತಕಾರರು ತೆಗೆಯುತ್ತಿದೆ. ಅವರಿಗೆ ಕಾಮನ್ ಸೆನ್ಸ್ ಇಲ್ಲವೇ ? ಕೇಂದ್ರ ಸರ್ಕಾರ ಪಂಚರಾಜ್ಯಗಳ ಚುನಾವಣೆಯ ವೇಳೆಯೇ ಬಜೆಟ್ ಮಂಡಿಸಿದೆ ನಾವು ಮಂಡಿಸಬಾರದೇ ಎಂದರು.
ಸು
ತ್ತೂರು ಮಠಕ್ಕೆ ಭೇಟಿ
ಸಾಮಾನ್ಯವಾಗಿ ಜಾತ್ರೆ ಸಂದರ್ಭದಲ್ಲಿ ಮಾತ್ರ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿದ್ದ ಸಿದ್ದರಾಮಯ್ಯ ಅವರ ಇಂದಿನ ಸುತ್ತೂರು ಮಠಕ್ಕೆ ನೀಡಿದ ಭೇಟಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.