Advertisement

ಎಲೆಕ್ಷನ್‌ ಆಗುತ್ತಾ ದುಬಾರಿ?

12:30 AM Feb 23, 2019 | Team Udayavani |

ವಾಷಿಂಗ್ಟನ್‌: ಮುಂದಿನ ಲೋಕಸಭೆ ಚುನಾವಣೆಗೆ ಅತಿ ಹೆಚ್ಚು ವೆಚ್ಚವಾಗಲಿದ್ದು, ಇದು ಜಗತ್ತಿನ ಯಾವುದೇ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಚುನಾವಣಾ ವೆಚ್ಚಕ್ಕೆ ಸಾಟಿಯಾಗುವುದಿಲ್ಲ. ಅಂದರೆ, ಭಾರತದ ಲೋಕಸಭೆ ಚುನಾವಣೆ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಚುನಾವಣೆ ಎಂಬ ಹಣೆಪಟ್ಟಿಗೆ ಒಳಗಾಗಲಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಕಾರ್ನಿಜ್‌ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಮತ್ತು ದಕ್ಷಿಣ ಏಷ್ಯಾಕ್ಕಾಗಿರುವ ಹಿರಿಯ ಫೆಲೋ ಮಿಲಾನ್‌ ವೈಷ್ಣವ್‌ ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.

Advertisement

2016ರಲ್ಲಿ ಅಮೆರಿಕದ ಸಂಸತ್‌ಗೆ ಮತ್ತು ಅಧ್ಯಕ್ಷೀಯ ಚುನಾವಣೆಗೆ ಒಟ್ಟಾಗಿ ವೆಚ್ಚ ವಾಗಿದ್ದು 6.5 ಬಿಲಿಯನ್‌ ಡಾಲರ್‌. 2014ರಲ್ಲಿ ಲೋಕಸಭೆ ಚುನಾವಣೆಗೆ ಆದದ್ದು 5 ಅಮೆರಿಕನ್‌ ಬಿಲಿಯನ್‌ ಡಾಲರ್‌ ಎಂದು ವಿಶ್ಲೇಷಿಸಿದರೆ, ಹಾಲಿ ವರ್ಷ ನಡೆಯಲಿರುವ ಚುನಾವಣೆಗೆ ಅದಕ್ಕಿಂತ ಹೆಚ್ಚಿನ ವೆಚ್ಚವೇ ಆಗಲಿದೆ ಎಂದು ಅವರು ಹೇಳಿದ್ದಾರೆ. 2014ರ ಚುನಾವಣೆಗೆ ಖರ್ಚಾದ ಮೊತ್ತವನ್ನು ನಿಖರ ಎಂದು ಅವರು ಹೇಳಿಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ಫ‌ಲಿತಾಂಶ ಏನಾಗಲಿದೆ ಎಂದು ಇನ್ನೂ ಗೊತ್ತಿಲ್ಲವಾದರೂ, ಭಾರತದಲ್ಲಿ ಶೀಘ್ರವೇ ನಡೆಯಲಿರುವ ಚುನಾವಣೆ ಯಾವುದೇ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಇದುವರೆಗೆ ನಡೆದ ಚುನಾವಣೆ ಪ್ರಕ್ರಿಯೆಯ ಪೈಕಿ ಅತ್ಯಂತ ವೆಚ್ಚದಾಯಕವಾಗಲಿದೆ ಎಂದು ವೈಷ್ಣವ್‌ ಸಂಸ್ಥೆಗಾಗಿ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ. ರಾಜಕೀಯ ದೇಣಿಗೆಗಳಿಗೆ ಸಂಬಂಧಿಸಿ ಭಾರತದಲ್ಲಿ ಯಾವುದೇ ರೀತಿಯಲ್ಲಿ ಪಾರದರ್ಶಕತೆ ಇಲ್ಲ ಎಂದಿದ್ದಾರೆ.

2016ರಲ್ಲಿ ಅಮೆರಿಕ ಚುನಾವಣೆಗೆ ವೆಚ್ಚವಾದದ್ದು 6.5 ಬಿಲಿಯನ್‌ ಅಮೆರಿಕನ್‌ ಡಾಲರ್‌
ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ದೇಣಿಗೆ ಬಗ್ಗೆ ಪಾರದರ್ಶಕತೆ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next