Advertisement

Election: ಚುನಾವಣ ಘೋಷಣೆಗಳು ಆಮಿಷ ಭ್ರಷ್ಟಾಚಾರ ಆಗದು: ಹೈಕೋರ್ಟಿಗೆ ಜಮೀರ್‌

11:00 PM Oct 06, 2023 | Team Udayavani |

ಬೆಂಗಳೂರು, ಅ. 6: ಚುನಾವಣ ಪ್ರಣಾಳಿಕೆ ವ್ಯಕ್ತಿಗತವಾಗಿರುವುದಿಲ್ಲ. ಅದು ಇಡೀ ಪಕ್ಷಕ್ಕೆ ಸಂಬಂಧಿಸಿದ್ದು. ಅಲ್ಲದೆ, ಪ್ರಣಾಳಿಕೆಯಲ್ಲಿನ ಭರವಸೆಗಳು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123ರ ಚುನಾವಣ ಅಕ್ರಮ ಅಥವಾ ಭ್ರಷ್ಟಾಚಾರದ ಅರ್ಥ ವ್ಯಾಪ್ತಿಗೆ ಬರುವುದಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೈಕೋರ್ಟ್‌ ಮುಂದೆ ಹೇಳಿದ್ದಾರೆ.

Advertisement

ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಆ ಮೂಲಕ ಚುನಾವಣ ಅಕ್ರಮವೆಸಗಿ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್‌ ಅಹ್ಮದ್‌ಖಾನ್‌ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಶಶಾಂಕ್‌ ಜೆ.ಶ್ರೀಧರ್‌ ಸಲ್ಲಿಸಿರುವ ಚುನಾ ವಣ ತಕರಾರು ಅರ್ಜಿಯನ್ನು ನ್ಯಾ| ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಜಮೀರ್‌ ಅಹ್ಮದ್‌ ಪರ ವಕೀಲ ಇಸ್ಮಾಯಿಲ್‌ ಜಬಿವುಲ್ಲಾ ಅವರು ಸುದೀರ್ಘ‌ 70 ಪುಟಗಳ ಲಿಖೀತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದರಲ್ಲಿ ಅರ್ಜಿದಾರರ ಎಲ್ಲ ಆರೋಪಗಳನ್ನು ಅಲ್ಲಗಳೆಯಲಾಗಿದೆ. ಅಲ್ಲದೆ, ಸೂಕ್ತ ಸಾಕ್ಷಿ- ಪುರಾವೆ ಮತ್ತು ದಾಖಲೆಗಳಿಲ್ಲದೆ ಈ ಅರ್ಜಿ ಸಲ್ಲಿಸಲಾಗಿದ್ದು, ಯಾವ ಹಂತದಲ್ಲೂ ಅರ್ಜಿ ವಿಚಾರಣೆಗೆ ಅರ್ಹವಾ ಗಿಲ್ಲ. ಅರ್ಜಿದಾರರ ಯಾವ ಮನವಿಯನ್ನೂ ನ್ಯಾಯಾಲಯ ಪರಿಗಣಿಸಬಾರದು ಎಂದು ಲಿಖೀತ ಹೇಳಿಕೆ ಯಲ್ಲಿ ಮನವಿ ಮಾಡಲಾಗಿದೆ.

ಈ ಲಿಖೀತ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಇದಕ್ಕೆ ಪ್ರತ್ಯುತ್ತರ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅ.11ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next