Advertisement
ಅದರಲ್ಲೂ ಒಂದು ಹೆಜ್ಜೆಮುಂದಿಟ್ಟಿರುವ ಬಿಜೆಪಿ ಚುನಾವಣೆ ಸಂಬಂಧಕಾರ್ಯಕರ್ತರ ಪೂರ್ವಭಾವಿ ಸಭೆಗಳನ್ನು ಮಾಡುವಮೂಲಕ ನಾವು ಚುನಾವಣೆಗೆ ಸಿದ್ಧ ಎಂಬ ಸಂದೇಶರವಾನಿಸಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲ 58ವಾರ್ಡ್‌ಗಳಿಗೆ ಎರಡು ವರ್ಷದ ನಂತರ ಚುನಾವಣೆನಡೆಯುತ್ತಿದೆ.
Related Articles
Advertisement
ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಗಳ ಮೇಲೆಕೇಳಿಬರುವ ಆರೋಪಗಳಿಂದ ಮುಕ್ತವಾಗಬೇಕುಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪಕ್ಷಆಧಾರಿತ ಚುನಾವಣೆಯ ಮಾತು ಕೇಳಿಬರುತ್ತಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿಯಚುನಾವಣೆಯನ್ನು ಬಹಳ ಪ್ರತಿಷ್ಠೆಯನ್ನಾಗಿತೆಗೆದುಕೊಂಡಿರು ವುದರಿಂದಚುನಾವಣೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.ಎರಡೂ ಪಕ್ಷಗಳಿಗೆ ಇದು ಒಂದುರೀತಿಯ ಸತ್ವ ಪರೀಕ್ಷೆಯ ಕಾಲ. ಯಾರ ಶಕ್ತಿಎಷ್ಟಿದೆ ಎಂಬುದನ್ನು ತೋರಿಸಲು ಇದು ಒಳ್ಳೆಯಸಮಯ. ಹೀಗಾಗಿ ಎರಡೂ ಪಕ್ಷಗಳಲ್ಲಿ ಬಿರುಸಿನರಾಜಕೀಯ ಚಟುವಟಿಕೆ ಕಾಣುತ್ತಿದೆ.
ರಾಜಕೀಯತಂತ್ರಗಳು, ಹೊಂದಾಣಿಕೆ ರಾಜಕಾರಣ, ಮನವೊಲಿಕೆಪ್ರಯತ್ನಗಳು ತೆರೆಮರೆಯಲ್ಲಿ ಆರಂಭವಾಗಿವೆ.ಈ ಬಾರಿಯ ಚುನಾವಣೆಯನ್ನು ಪಕ್ಷದಚಿಹ್ನೆಯ ಮೇಲೆ ಎದುರಿಸಬೇಕು ಎಂಬುದನ್ನುಮೊದಲೇ ನಿರ್ಧರಿಸಿದ್ದ ಬಿಜೆಪಿ ಅದಕ್ಕಾಗಿ ಒಂದುವರ್ಷದಿಂದಲೇ ತಯಾರಿ ನಡೆಸಿದೆ. ಈಗ ಚುನಾವಣೆದಿನಾಂಕ ಘೋಷಣೆಯಾಗಿದ್ದರಿಂದ ಚುನಾವಣಾಉಸ್ತುವಾರಿಯನ್ನು ಸಹ ಪ್ರಕಟಿಸಿದ್ದು ಜಿಲ್ಲಾಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂಸ್ಥಳೀಯ ಶಾಸಕ ಅಭಯ ಪಾಟೀಲ ಅವರ ಹೆಗಲಿಗೆಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ.
ಇನ್ನೊಂದು ಕಡೆ ಸ್ಥಳೀಯ ಮುಖಂಡರು ಹಾಗೂಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯಲುಆಲೋಚಿಸಿರುವ ಕಾಂಗ್ರೆಸ್ ಚುನಾವಣೆಯಹೊಣೆಯನ್ನು ಮಾಜಿ ಸಚಿವ ಎಂ.ಬಿ. ಪಾಟೀಲಅವರಿಗೆ ವಹಿಸಿದೆ. ಎಂ.ಬಿ. ಪಾಟೀಲ ನೇತೃತ್ವದ ತಂಡಸೋಮವಾರ ಬೆಳಗಾವಿಯಲ್ಲಿ ಸಭೆ ನಡೆಸಿ ಮುಂದಿನನಿರ್ಧಾರ ಕೈಗೊಳ್ಳಲಿದೆ.ಇಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ಥಳೀಯ ಶಾಸಕರಿಗೆನಿಜವಾಗಿಯೂ ಅವರ ಸಾಮರ್ಥ್ಯ ಪರೀಕ್ಷಿಸುವಸಮಯ ಎಂದರೆ ತಪ್ಪಿಲ್ಲ. ಅದರಲ್ಲಿಯೂ ಬಿಜೆಪಿಯಶಾಸಕರಾದ ಅಭಯ ಪಾಟೀಲ ಮತ್ತು ಅನಿಲಬೆನಕೆ ಅವರಿಗೆ ಈ ಪಾಲಿಕೆ ಚುನಾವಣೆ ಅಕ್ಷರಶಃಅಗ್ನಿಪರೀಕ್ಷೆ. ಪಾಲಿಕೆಯ ಒಂದೆರಡು ವಾರ್ಡ್‌ಗಳನ್ನುಬಿಟ್ಟರೆ ಉಳಿದ ಎಲ್ಲ ಕ್ಷೇತ್ರಗಳು ಬೆಳಗಾವಿ ದಕ್ಷಿಣಹಾಗೂ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಬರುವುದರಿಂದ ಬಿಜೆಪಿ ಶಾಸಕರಿಗೆ ತಮ್ಮ ಸಾಮರ್ಥ್ಯತೋರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀಹೆಬ್ಟಾಳಕರ ಅವರಿಗೆ ಈ ಪಾಲಿಕೆ ಚುನಾವಣೆಯಿಂದಹೆಚ್ಚಾಗಿ ಕಳೆದುಕೊಳ್ಳುವುದು ಅಥವಾಗಳಿಸುವುದೇನಿಲ್ಲ. ಆದರೆ ನಗರದ ರಾಜಕಾರಣದಮೇಲೆ ತಮ್ಮ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಈಶಾಸಕದ್ವಯರಿಗೂ ಸಹ ಪಾಲಿಕೆ ಚುನಾವಣೆ ಅಷ್ಟೇಪ್ರತಿಷ್ಠೆಯಾಗಿದೆ.ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ತಂತ್ರಈ ರೀತಿಯಾದರೆ ಇನ್ನು ಪಾಲಿಕೆಯ ಗದ್ದುಗೆ ಮೇಲೆಕಣ್ಣಿಟ್ಟಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತುಶಿವಸೇನೆ ಅಭಿವೃದ್ಧಿಯ ಬದಲು ಭಾವನಾತ್ಮಕವಾಗಿಮತದಾರರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ.ಇದಕ್ಕೆ ಮತ್ತೂಮ್ಮೆ ಮಹಾರಾಷ್ಟ್ರದ ಮುಖಂಡರಸಹಾಯದ ಕಡೆ ಮುಖ ಮಾಡಿವೆ.
ಕೇಶವ ಆದಿ