ತೋಟವೊಂದರಲ್ಲಿ ನೀರು ಕಣ್ಣಿಗೆ ಬೀಳುತ್ತಿ ದ್ದಂತೆಯೇ ಮೊದಲು ತಾಯಿ ಆನೆ ಹಳ್ಳಕ್ಕೆ ಇಳಿಯಿತು. ನೀರಿದ್ದ ಜಾಗ ಕೆಸರುಗುಂಡಿಯಾದ್ದರಿಂದ ದಢೂತಿ ಆನೆ ಇಳಿಯುತ್ತಿದ್ದಂತೆ ಹೂತು ಕೊಂಡಿತು. ಸುಮಾರು 25 ವರ್ಷದ ಹೆಣ್ಣಾನೆಗೆ ಮೊದಲೇ ಕಾಲಿಗೆ
ಪೆಟ್ಟಾಗಿದ್ದರಿಂದ ಎಷ್ಟೇ ಹೋರಾಟ ಮಾಡಿದ್ರೂ ಮೇಲೇಳಲು ಸಾಧ್ಯವಾಗಿರಲಿಲ್ಲ. ಸ್ಥಳೀಯರಿಂದ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಸಿಬ್ಬಂದಿ ಸಹಾಯದಿಂದ ಹರಸಾಹಸ ಪಟ್ಟರೂ ಮೇಲೆತ್ತಲು ಆಗಲೇ ಇಲ್ಲ.
Advertisement
ಈ ಹಿನ್ನೆಲೆಯಲ್ಲಿ ದುಬಾರೆ ಅರಣ್ಯದಿಂದ 2 ಪಳಗಿದ ಆನೆ, ಹಿಟಾಚಿ ಹಾಗೂ ಬಂಡಿಪುರದಿಂದ ವೈದ್ಯರನ್ನು ಕರೆಸಿಕೊಂಡ ಅರಣ್ಯಾಧಿಕಾರಿಗಳು ಹಾಗೂ ವೈದ್ಯರ ತಂಡ ಮಂಗಳವಾರ ಬೆಳಗ್ಗೆಯಿಂದ ನಿರಂತರ ಕಾರ್ಯಾಚರಣೆ ನಡೆಸಿ ಕೆಸರಲ್ಲಿ ಹೂತು ನರಳುತ್ತಿದ್ದ ಆನೆಯನ್ನು ಪಾರು ಮಾಡಿದರು. ನಿತ್ರಾಣವಾಗಿರುವ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ, ಮರಿಯಾನೆ, ತಾಯಿಪಕ್ಕದಲ್ಲೇ ಇದ್ದರೆ ಮೇಲೆತ್ತುವ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಅದನ್ನು ಪಕ್ಕದ ಮರಕ್ಕೆ ಕಟ್ಟಿ ಹಾಕಲಾಗಿತ್ತು.