Advertisement

ಆಕೆಗೆ 72 ವರ್ಷ ಆತನಿಗೆ 78 ವರ್ಷ: ಭೇಟಿಯಾದ ಗ್ರೋಸರಿ ಸ್ಟೋರ್‌ ನಲ್ಲೇ ಮದುವೆಯಾದ ಜೋಡಿ.!

03:52 PM Nov 28, 2022 | Team Udayavani |

ವಾಷಿಂಗ್ಟನ್‌ : ದಾಂಪತ್ಯ ಅಂದರೆ ಜೀವನದ ಮಹತ್ವದ ಘಟ್ಟ. ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು. ಪ್ರೀ ವೇಡ್ಡಿಂಗ್‌, ಪೋಸ್ಟ್‌ ವೇಡ್ಡಿಂಗ್‌ ಶೂಟ್‌ ಮಾಡಿಕೊಳ್ಳಬೇಕೆಂದು ಎಷ್ಟೋ ಮಂದಿ ಕನಸು ಇಟ್ಟುಕೊಳ್ಳುತ್ತಾರೆ. ಇಲ್ಲೊಂದು ಹಿರಿಯ ಜೋಡಿ ತಾವು ಭೇಟಿಯಾದ ಮೊದಲ ಜಾಗದಲ್ಲೇ ವಿವಾಹ ಮಾಡಿಕೊಂಡಿದ್ದಾರೆ.

Advertisement

ಅಮೆರಿಕಾದ ಅರಿಜೋನಾ ಮೂಲದ 72 ವರ್ಷದ ಮಹಿಳೆ ಬ್ರೆಂಡಾ ವಿಲಿಯಮ್ಸ್, 78 ವರ್ಷದ  ಡೆನ್ನಿಸ್ ಡೆಲ್ಗಾಡೊ ಪ್ರೀತಿ ಬಂಧಕ್ಕೆ ವಯಸ್ಸಿನ ನಂಟಿಲ್ಲ. ಇಬ್ಬರು ಪರಸ್ಪರ ಪ್ರೀತಿಸಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆ.3,2021 ರಂದು  ಕಾಸಾ ಗ್ರಾಂಡೆ ಪ್ರದೇಶದ ಆಹಾರ ಹಾಗೂ ಔಷಧಿ ಅಂಗಡಿಯಲ್ಲಿ ಮೊದಲ ಬಾರಿ ಇಬ್ಬರು ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಇಬ್ಬರಲ್ಲೂ ಮಾತು ಆರಂಭವಾಗಿತ್ತು. ಸ್ವಲ್ಪ ಸಮಯ ಹಾಗೆಯೇ ಮಾತನಾಡಿದ ಬಳಿಕ ಇಬ್ಬರು ಫೋನ್‌ ನಂಬರ್‌ ಪಡೆದುಕೊಂಡಿದ್ದಾರೆ. ಬಳಿಕ ಡೇಟಿಂಗ್‌ ಮಾಡಿಕೊಂಡಿದ್ದವರು ಏಪ್ರಿಲ್‌ (2022) ನಲ್ಲಿ ಎಂಗೇಜ್‌ ಮೆಂಟ್‌ ಕೂಡ ಮಾಡಿಕೊಂಡಿದ್ದಾರೆ. ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದು ಅಂದರೆ ರಿಂಗ್‌ ಹಾಕಿದ್ದು ಮತ್ತದೇ ಮೊದಲ ಬಾರಿ ಭೇಟಿಯಾದ ಗ್ರೋಸರಿ ಸ್ಟೋರ್‌ ನಲ್ಲೇ ಎನ್ನುವುದು ವಿಶೇಷ.

ಮೊದಲ ಬಾರಿ ಭೇಟಿಯಾದ ಗ್ರೋಸರಿ ಸ್ಟೋರ್‌ ನಲ್ಲೇ ಮದುವೆಯನ್ನೂ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಅದೃಷ್ಟಕ್ಕೆ ಗ್ರೋಸರಿ ಮಾಲೀಕ ಇದನ್ನು ಒಪ್ಪುತ್ತಾನೆ. ಮೊದಲ  ಬಾರಿ ಗ್ರೋಸರಿಗೆ ಬ್ರೆಂಡಾ ವಿಲಿಯಮ್ಸ್ ಮದುವೆ ಉಡುಗೊರೆ ತೊಟ್ಟು ಬರುತ್ತಾರೆ. ಎಲ್ಲರ ಸುಮ್ಮುಖದಲ್ಲಿ ಇಬ್ಬರು ಮದುವೆ ಆಗುತ್ತಾರೆ. ಡೆನ್ನಿಸ್ ಹಾಗೂ ಬ್ರೆಂಡಾ ವಿಲಿಯಮ್ಸ್ ಇಬ್ಬರ ಸಂಗಾತಿಗಳು ನಿಧನರಾಗಿದ್ದು, ಒಂಟಿಯಾಗಿಯೇ ಜೀವನವನ್ನು ನಡೆಸುತ್ತಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next