Advertisement

ಮಗನ ಕುಡಿತ ನಿಲ್ಲಿಸಿದ ವೃದ್ಧ ಅಪ್ಪ, ಕಡಿದು ಕೊಂದು ಪರಾರಿಯಾದ ಮಗ

09:01 AM Jun 19, 2019 | Sathish malya |

ಬಂಡಾ, ಉತ್ತರ ಪ್ರದೇಶ : ತನ್ನ ಶರಾಬು ಕುಡಿತವನ್ನು ಬಲವಂತದಿಂದ ನಿಲ್ಲಿಸಿದ 70ರ ಹರೆಯದ ಅಪ್ಪನನ್ನು ಕಡಿದು ಕೊಂದ ಮಗ ಪರಾರಿಯಾಗಿದ್ದು ಪೊಲೀಸರೀಗ ಆತನ ಶೋಧದಲ್ಲಿದ್ದಾರೆ.

Advertisement

ಮಹೋಬಾ ಜಿಲ್ಲೆಯ ಗುಡಾ ಗ್ರಾಮದಲ್ಲಿ ನಿನ್ನೆ ಸೋಮವಾರ ತಡ ರಾತ್ರಿ ಈ ಘಟನೆ ನಡೆಯಿತೆಂದು ಸರ್ಕಲ್‌ ಆಫೀಸರ್‌ ಅವಧ್‌ ಸಿಂಗ್‌ ತಿಳಿಸಿದರು.

ಮೃತ ವ್ಯಕ್ತಿಯನ್ನು ಧರಮ್‌ಜಿತ್‌ ಎಂದು ಗುರುತಿಸಲಾಗಿದೆ. ಈತನನ್ನು ಕಡಿದು ಕೊಲ್ಲಲು ಪುತ್ರ ಕರಣ್‌ ಸಿಂಗ್‌ ಬಳಸಿದ್ದ ಕೈಕೊಡಲಿ ಪೊಲೀಸರಿಗೆ ಸಿಕ್ಕಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next