Advertisement

ಲಸಿಕೆ ಹಾಕಿಸಿಕೊಳ್ಳ ಲು ಹಿರಿಯರ ಹಿಂದೇಟುಲಸಿಕೆ ಹಾಕಿಸಿಕೊಳ್ಳ ಲು ಹಿರಿಯರ ಹಿಂದೇಟು

08:47 PM Mar 15, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕನ್ನು ನಿಯಂತ್ರಿಸುವ ಮೂರನೇಯ ಹಂತದ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳುವಲ್ಲಿ ಹಿರಿಯ ನಾಗರಿಕರು ಹಿಂಜರಿಯುತ್ತಿದ್ದು, ಕಳೆದ 12 ದಿನಗಳಲ್ಲಿ ಜಿಲ್ಲೆಯಾದ್ಯಂತ ಶೇ. 10ರಷ್ಟು ಜನರು ಸಹ ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಜಾಗೃತಿ ಕೊರತೆಯೋ ಅಥವಾ ಲಸಿಕೆ ಹಾಕಿಸಿಕೊಳ್ಳುವಲ್ಲಿ ಹಿಂಜರಿಕೆಯಿಂದಲೋ ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.

Advertisement

ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್‌ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಕೋವಿಶೀಲ್ಡ್‌ ಲಸಿಕೆಯನ್ನು ಜಾರಿಗೆ ತಂದಿದ್ದು, ಮೊದಲ ಹಂತದಲ್ಲಿ ಕೋವಿಡ್‌ ವಾರಿಯರ್, ಸರ್ಕಾರಿ ನೌಕರರಿಗೆ ಲಸಿಕೆಯನ್ನು ಹಾಕಲಾಗಿದೆ. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡು 28 ದಿನಗಳನ್ನು ಪೂರೈಸಿದವರು ಈಗಾಗಲೇ ಎರಡನೇ ಹಂತದ ಡೋಸ್‌ನ್ನು ಸಹ ಪಡೆಯುತ್ತಿದ್ದಾರೆ.

ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ಹಾಕಲು ಮಾ.1ರಿಂದ ಚಾಲನೆ ನೀಡಲಾಗಿದೆ. ಆದರೆ, ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹಿರಿಯ ನಾಗರಿಕರು ಮುಂದೆ ಬಂದು ಲಸಿಕೆಯನ್ನು ಪಡೆಯುತ್ತಿಲ್ಲ. 15 ಸಾವಿರ ಜನರಿಗೆ ಲಸಿಕೆ: ರಾಜ್ಯ ಸರ್ಕಾರ ಆರೋಗ್ಯ ಇಲಾಖೆಗೆ ನೀಡಿದ ಮಾಹಿತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ 5.8 ಲಕ್ಷ ಹಿರಿಯ ನಾಗರಿಕರು ಇದ್ದಾರೆ.

ಈ ಪೈಕಿ ಆರೋಗ್ಯ ಇಲಾಖೆ 1.83 ಲಕ್ಷ ಹಿರಿಯ ನಾಗರಿಕರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮಾರ್ಚ್‌ 1ರಿಂದ ಮಾ. 12ರವರೆಗೆ ಬಳ್ಳಾರಿ ತಾಲೂಕು (ಕುರುಗೋಡು ಸೇರಿ) ಅತಿ ಹೆಚ್ಚು 6270 ಹಿರಿಯ ನಾಗರಿಕರು ಲಸಿಕೆಯನ್ನು ಪಡೆದಿದ್ದರೆ, ಹಡಗಲಿ ತಾಲೂಕು ಅತಿ ಕಡಿಮೆ ಕೇವಲ 313 ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೊಸಪೇಟೆ (ಕಂಪ್ಲಿ ಸೇರಿ) ತಾಲೂಕು 2527, ಸಂಡೂರು ತಾಲೂಕು 1445, ಹರಪನಹಳ್ಳಿ 1444, ಹಗರಿಬೊಮ್ಮನಹಳ್ಳಿ 1399, ಕೂಡ್ಲಿಗಿ (ಕೊಟ್ಟೂರು ಸೇರಿ) 1273, ಸಿರುಗುಪ್ಪ ತಾಲೂಕು 1191 ಸೇರಿ ಒಟ್ಟು 15862 ಜನ ಹಿರಿಯ ನಾಗರಿಕರು ಮಾತ್ರ ಮುಂದೆ ಬಂದು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

ಆದರೆ ನಿಗದಿತ ಗುರಿಯಲ್ಲಿ ಶೇ. 10ರಷ್ಟು ಪೂರ್ಣಗೊಂಡಿಲ್ಲ. ಮುಂದೆ ಬಾರದ ಹಳ್ಳಿಗರು: ಕೋವಿಡ್‌ ಲಸಿಕೆಯನ್ನು ಪಡೆಯಲು ಗ್ರಾಮೀಣ ಭಾಗದಲ್ಲಿ ಹಿರಿಯ ನಾಗರಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಹಾಗಂತ ಅವರಿಗೆ ಬಲವಂತವಾಗಿಯೂ ಲಸಿಕೆಯನ್ನು ಹಾಕುವಂತಿಲ್ಲ. ಲಸಿಕೆಯನ್ನು ಪಡೆಯುವಂತೆ ಗ್ರಾಮೀಣ ಭಾಗದಲ್ಲಿಯೂ ಜಿಲ್ಲಾಡಳಿತದ ವತಿಯಿಂದ ಜಾಗೃತಿ ಮೂಡಿಸಲಾಗಿದೆ.

Advertisement

ಆದರೂ ಲಸಿಕೆಯನ್ನು ಹಾಕಿಸಿಕೊಳ್ಳುವಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂದೆ ಬರುತ್ತಿಲ್ಲ. ನಗರ ಪ್ರಮಾಣದಲ್ಲಿ ಒಂದಷ್ಟು ಪರವಾಗಿಲ್ಲ ಎಂದು ಆರೋಗ್ಯ ಇಲಾಖೆಯ ವೈದ್ಯಾಧಿ ಕಾರಿಗಳು ತಿಳಿಸುತ್ತಾರೆ.

ಯಾರಿಗೂ ಅಡ್ಡಪರಿಣಾಮವಿಲ್ಲ: ಮಾ. 1ರಿಂದ ಆರಂಭವಾದ ಮೂರನೇ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ 60 ವರ್ಷ ಮೇಲ್ಪಟ್ಟ 15862 ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹಾಕಲಾಗಿದೆ. ಲಸಿಕೆ ಪಡೆದ ಹಿರಿಯ ನಾಗರಿಕರನ್ನು ಅರ್ಧ ಗಂಟೆಗಳ ಕಾಲ ಕೇಂದ್ರದಲ್ಲೇ ಉಳಿಸಿಕೊಂಡು ನಿಗಾವಹಿಸಲಾಗುತ್ತದೆ. ಜ್ವರ, ಮೈಕೈ ನೋವು ಸೇರಿ ಇನ್ನಿತರೆ ಕಾಯಿಲೆಗಳು ಕಂಡುಬಂದಲ್ಲಿ ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈವರೆಗೂ ಯಾವೊಬ್ಬರಿಗೂ ಅಡ್ಡಪರಿಣಾಮಗಳು ಕಂಡುಬಂದಿಲ್ಲ.

ಲಸಿಕೆ ಪಡೆದ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಆರ್‌ಸಿಎಚ್‌ ಅಧಿ ಕಾರಿ ಡಾ| ಅನೀಲ್‌ಕುಮಾರ್‌ ತಿಳಿಸಿದರು. ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದ್ದು, ಹಿರಿಯ ನಾಗರಿಕರು ಸ್ವಯಂ ಪ್ರೇರಣೆಯಿಂದ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next