Advertisement

ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ್ ಶಿಂಧೆ, ಡಿಸಿಎಂ ಆಗಿ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ

08:00 PM Jun 30, 2022 | Team Udayavani |

ಮುಂಬಯಿ : ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಶಿವಸೇನಾ ನಾಯಕ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್(ಮಾಜಿ ಮುಖ್ಯಮಂತ್ರಿ)  ಗುರುವಾರ ಸಂಜೆ 7.30 ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು

Advertisement

ಫಡ್ನವೀಸ್ ಮಹಾರಾಷ್ಟ್ರದ ಹೊಸ ಸರ್ಕಾರದ ಭಾಗವಾಗಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.

58 ರ ಹರೆಯದ ಮರಾಠ ಸಮುದಾಯದ ಪ್ರಭಾವಿ ನಾಯಕ ಏಕನಾಥ್ ಶಿಂಧೆ ದೇವರ ಹೆಸರಿನಲ್ಲಿ ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ಬಾಳಾಸಾಹೇಬ್ ಠಾಕ್ರೆ ಗೆ ಜೈಕಾರ

ಪ್ರಮಾಣವಚನದ ವೇಳೆ ರಾಜಭವನದಲ್ಲಿ ಆಮಂತ್ರಿತ ಗಣ್ಯರಿದ್ದರೂ ಬಾಳಾಸಾಹೇಬ್ ಠಾಕ್ರೆ ಅವರಿಗೆ ಜೈಕಾರ ಹಾಕಿದರೂ. ಶಿಂಧೆ ಪ್ರಮಾಣ ವಚನ ಸ್ವೀಕಾರದ ನಂತರ ಶಿವಸೇನಾ ಪ್ರಮುಖ್ ಬಲ ಸಾಹೇಬ್ ಠಾಕ್ರೆ , ಶಿವಾಜಿ ಮಹಾರಾಜ್ ಕಿ ಜೈ ಎಂಬ ಘೋಷಣೆಗಳು ಮೊಳಗಿದವು.

Advertisement

ಯಶಸ್ವಿಯಾದ ನಡ್ಡಾ!

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಕೋರಿಕೆಯ ಮೇರೆಗೆ, ದೊಡ್ಡ ಹೃದಯ ವೈಶಾಲ್ಯತೆ ತೋರಿಸಿರುವ ದೇವೇಂದ್ರ ಫಡ್ನವೀಸ್  ಅವರು ಮಹಾರಾಷ್ಟ್ರ ರಾಜ್ಯ ಮತ್ತು ಜನರ ಹಿತಾಸಕ್ತಿಯಿಂದ ಸರ್ಕಾರದ ಭಾಗವಾಗಲು ನಿರ್ಧರಿಸಿದ್ದಾರೆ. ಈ ನಿರ್ಧಾರವು ಮಹಾರಾಷ್ಟ್ರದ ಬಗ್ಗೆ ಅವರ ನಿಜವಾದ ನಿಷ್ಠೆ ಮತ್ತು ಸೇವೆಯ ಸಂಕೇತವಾಗಿದೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next