Advertisement

Maharashtra;16 ಶಾಸಕರು ಅನರ್ಹರಾದರೂ ಶಿಂಧೆ ಸರ್ಕಾರ ಉರುಳಲ್ಲ..: ಅಜಿತ್ ಪವಾರ್

11:08 AM May 16, 2023 | Team Udayavani |

ಮುಂಬೈ: ಒಂದು ವೇಳೆ 16 ಮಂದಿ ಶಾಸಕರು ಅನರ್ಹರಾದರೂ ಏಕನಾಥ ಶಿಂಧೆ ಸರ್ಕಾರವು ಉರುಳುವುದಿಲ್ಲ ಎಂದು ಎನ್ ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

Advertisement

ಶಿಂಧೆ ಪಾಳೆಯದ 16 ಶಾಸಕರ ಅನರ್ಹತೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೋರಿ ಶಿವಸೇನೆಯ (ಯುಬಿಟಿ) ನಿಯೋಗವು ಮಹಾರಾಷ್ಟ್ರ ಉಪ ಸ್ಪೀಕರ್‌ ಗೆ 79 ಪುಟಗಳ ಪತ್ರವನ್ನು ಹಸ್ತಾಂತರಿಸಿದೆ. ಇದರ ಹಿನ್ನೆಲೆಯಲ್ಲಿ ಪವಾರ್ ಈ ಹೇಳಿಕೆ ನೀಡಿದ್ದಾರೆ.

“ಒಂದು ವೇಳೆ 16 ಶಾಸಕರು ಅನರ್ಹರಾದರೂ ಶಿಂಧೆ- ಫಡ್ನವೀಸ್ ಸರ್ಕಾರವು ಉರುಳುವುದಿಲ್ಲ. ಈ ಸರ್ಕಾರಕ್ಕೆ ಯಾವುದೇ ಭಯವಿಲ್ಲ. 288 ಸದಸ್ಯಬಲದ ವಿಧಾನಸಭೆಯಲ್ಲಿ 16 ಮಂದಿ ಶಾಸಕರ ಅನರ್ಹತೆಯಿಂದ ಸರ್ಕಾರಕ್ಕೆ ನಷ್ಟವಿಲ್ಲ” ಎಂದಿದ್ದಾರೆ.

ಶಿಂಧೆ ಪಾಳಯದ 16 ಶಾಸಕರ ಅನರ್ಹತೆಯನ್ನು ಸ್ಪೀಕರ್ ತೀರ್ಪು ನೀಡಬಹುದು ಎಂದು ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಠಾಕ್ರೆ ಬಣದ ಸೇನೆಯ ನಿಯೋಗವು ಸ್ಪೀಕರ್‌ಗೆ ಪತ್ರವನ್ನು ಸಲ್ಲಿಸಿದೆ ಎಂದು ಶಿವಸೇನೆಯ (ಠಾಕ್ರೆ) ಸಚೇತಕ ಸುನಿಲ್ ಪ್ರಭು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next