Advertisement

ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು

08:55 AM Apr 22, 2019 | Team Udayavani |

ಕೊಲಂಬೋ: ಈಸ್ಟರ್‌ ಆಚರಣೆಯ ವೇಳೆ ಶ್ರೀಲಂಕಾ ರಾಜಧಾನಿ ಕೊಲಂಬೋ ಸೇರಿ ಮೂರು ನಗರಗಳಲ್ಲಿ ಉಗ್ರರು 8 ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದು, ಮಂಗಳೂರಿನ ಮಹಿಳೆ ಸೇರಿ ಕನಿಷ್ಠ 162 ಮಂದಿ ಪ್ರಾಣ ಕಳೆದುಕೊಂಡಿದ್ದು , 400ಕ್ಕೂ ಹೆಚ್ಚಿನ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಕೊಲಂಬೋಗೆ ಪ್ರವಾಸಕ್ಕೆ ತೆರಳಿದ್ದ ರಝೀನಾ ಖಾದರ್‌ ಕುಕ್ಕಾಡಿ (58)ಎಂಬ ಮಹಿಳೆ ಸಾವನ್ನಪ್ಪಿರುವ ಬಗ್ಗೆ ವಿವರಗಳು ಲಭ್ಯವಾಗಿದ್ದು, ಮೃತ ಮಹಿಳೆ ಪತಿ ರಝಾಕ್‌ ದುಬೈನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗ್ಗೆ 6ಕಡೆಗಳಲ್ಲಿ ನಡೆದ ಸರಣಿ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಮಧ್ಯಾಹ್ನ ಕೊಲಂಬೋದ ಇನ್ನೆರಡು ಸ್ಥಳಗಳಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.

ಕೊಲಂಬೋ ಸೇರಿದಂತೆ ಶ್ರೀಲಂಕಾದೆಲ್ಲೆಡೆ ಹೈ ಅಲರ್ಟ್‌ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣಗಳು, ಬಸ್‌ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಬೆಳಗ್ಗೆ ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲ್‌ಗ‌ಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಮಧ್ಯಾಹ್ನ ಕೊಲಂಬೋದ ದೆಹಿವಾಲಾ ಮತ್ತು ಡೆಮೊಟಗೋಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

Advertisement

ದೆಹಿವಾಲಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಬಟ್ಟಿಕಾಲೋಯಾದ ಚರ್ಚ್‌ನಲ್ಲಿ ಮೊದಲ ನ್ಪೋಟ ಸಂಭವಸಿದ್ದು, ಬಳಿಕ ಕೊಲಂಬೋದ ಕೊಚ್ಚಿಕೊಡೆಯ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿದೆ.

ಕೊಲಂಬೋ ನಗರದಲ್ಲಿ ಸೇನಾ ಪಡೆಗಳ ತುಕಡಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಭದ್ರತಾ ಸಿಬಂದಿಗಳ ರಜೆ ಕಡಿತಗೊಳಿಸಲಾಗಿದೆ.

ಸಾಮಾಜಿಕ ತಾಣಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿದೆ.

ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರು ಭದ್ರತಾ ಸಮಿತಿಯ ತುರ್ತು ಸಭೆಯನ್ನು ಕರೆದು ಸ್ಫೋಟಗಳ ಬಗ್ಗೆ ವಿವರ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next