Advertisement

ಧರ್ಮನಿಂದನೆ ಸುಳಿಗೆ 8 ರ ಬಾಲಕ!

11:52 PM Aug 09, 2021 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಕೇವಲ 8 ವರ್ಷದ ಹಿಂದೂ ಬಾಲಕನೊಬ್ಬನ ಮೇಲೆ ಧರ್ಮನಿಂದನೆ ಆರೋಪ ಹೊರಿಸಲಾಗಿದೆ.

Advertisement

ಈ ಹುಡುಗ ಈಗ ಪಾಕ್‌ ಪೊಲೀಸರ ರಕ್ಷಣೆಯಲ್ಲಿದ್ದು, ದೇಶದಲ್ಲೇ ಧರ್ಮನಿಂದನೆ ಆರೋಪ ಹೊತ್ತ ಅತೀ ಕಿರಿಯ ವ್ಯಕ್ತಿಯಾಗಿದ್ದಾನೆ. ಪಂಜಾಬ್‌ ಪ್ರಾಂತ್ಯದ ರಹಿಮ್‌ ಯಾರ್‌ಖಾನ್‌ ಸಂಪ್ರದಾಯವಾದಿ ಜಿಲ್ಲೆಯೊಂದರಲ್ಲಿ ಕಳೆದ ತಿಂಗಳು, ಧಾರ್ಮಿಕ ಗ್ರಂಥಗಳನ್ನು ಇಟ್ಟಿರುವ ಮದರಸಾದ ಕಾರ್ಪೆಟ್‌ ಮೇಲೆ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಈತನ ಮೇಲಿದೆ.

ಪಾಕ್‌ ಕಾನೂನಿನಂತೆ ಈ ಅಪರಾಧಕ್ಕೆ ಮರಣದಂಡನೆ ವಿಧಿಸಬಹುದಾಗಿದೆ. ಕಳೆದ ವಾರ ಬಾಲಕನಿಗೆ ಜಾಮೀನು ಸಿಕ್ಕಿತ್ತು. ಆತನಿಗೆ ಧರ್ಮನಿಂದನೆ ಬಗ್ಗೆ ಗೊತ್ತಿಲ್ಲ. ಅಪರಾಧವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next