Advertisement

ಮೃತ ಪಟ್ಟು 7 ತಿಂಗಳ ಬಳಿಕ ವಾಕ್ಸಿನ್ ಕೊಟ್ಟ ಇಲಾಖೆ!

07:36 PM Jan 06, 2022 | Team Udayavani |

ಶಿರಸಿ: ವ್ಯಕ್ತಿಯೋರ್ವ ಮೃತ‌ಪಟ್ಟ 7  ತಿಂಗಳ ಬಳಿಕ ಆರೋಗ್ಯ ಇಲಾಖೆ ಕೋವಿಡ್ ನಿರೋಧಕ ಲಸಿಕೆ ಕೊಟ್ಟ ಪ್ರಸಂಗ ನಡೆದಿದೆ.

Advertisement

ನಗರದ ಪ್ರಮುಖ ವರ್ತಕರ ತಂದೆಯೊಬ್ಬರು‌ ಕಳೆದ‌ ಮೇ 5 ರಂದು ನಿಧನ ಹೊಂದಿದ್ದರು. ಮೃತ ಪಟ್ಟವವರಿಗೆ ಕೋವಿಡ್‌ ಲಸಿಕೆ ಹಾಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಎದ್ದಿದೆ. ಮೊದಲ ಡೋಸ್ ಏಪ್ರಿಲ್ ನಲ್ಲಿ ಕೋವಿಶೀಲ್ಡ್ ನೀಡಲಾಗಿತ್ತು, ನಂತರ ಕೋವಿಡ್ ಸೋಂಕಿನಿಂದ 78 ವರ್ಷದ ವೃದ್ಧ ಮೃತ ಪಟ್ಟಿದ್ದರು.

ಅಚ್ಚರಿಯೆಂದರೆ ಕಳೆದ‌ ಡಿಸೆಂಬರ್ 28 ಕ್ಕೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ‌ ಎಂದು ಅವರ‌ ಮಗನ ಮೊಬೈಲ್ ಗೆ ಮೆಸೇಜ್ ‌ಬಂದಿದೆ. ಇಲ್ಲದ ಅಪ್ಪನಿಗೆ ಲಸಿಕೆ ಹಾಕಿದ್ದು ಹೇಗೆ? ಎಂಬ ಪ್ರಶ್ನೆ ಮೂಡಿದೆ. ಅಪ್ಪನೇ ಇಲ್ಲದ‌ ಮೇಲೆ ಅವರ ಹೆಸರಿನ ಮೆಸೇಜ್ ಪಡೆದುಕೊಂಡು ಏನು ಮಾಡಲಿ ಎಂದು ಮಕ್ಕಳು ಕೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next