Advertisement

2 ಆಟೋ ರಿಕ್ಷಾಗಳಿಗೆ ಟ್ರಕ್‌ ಢಿಕ್ಕಿ: 8 ಸಾವು, ಐವರಿಗೆ ಗಾಯ

12:36 PM Apr 07, 2018 | Team Udayavani |

ಕತ್ನಿ, ಮಧ್ಯ ಪ್ರದೇಶ : ಮಧ್ಯ ಪ್ರದೇಶದ ಕತ್ನಿ ಜಿಲ್ಲೆಯ ಮಝಗವನ್‌ ಎಂಬಲ್ಲಿ ಇಂದು ಬೆಳಗ್ಗೆ ಎರಡು ಆಟೋ ರಿಕ್ಷಾಗಳಿಗೆ ಟ್ರಕ್‌ ಒಂದು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟು ಇತರ ಐವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಇಂದು ಬೆಳಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ಈ ಅವಘಡ ಸಂಭವಿಸಿತು. ಎರಡು ಆಟೋ ರಿಕ್ಷಾಗಳಲ್ಲಿದ್ದ ಎಂಟು ಮಂದಿ ಪ್ರಯಾಣಿಕರು ಟ್ರಕ್‌ ಢಿಕ್ಕಿಯ ರಭಸಕ್ಕೆ ಅಸುನೀಗಿದರು. ಐವರು ಗಾಯಗೊಂಡರು ಎಂದು ಸ್ಥಳಕ್ಕೆ ಧಾವಿಸಿರುವ ಕತ್ನಿ ಜಿಲ್ಲಾಧಿಕಾರಿ ಕೆವಿಎಸ್‌ ಚೌಧರಿ ಮತ್ತು ಪೊಲೀಸ್‌ ಸುಪರಿಂಟೆಂಡೆಂಟ್‌ ಅತುಲ್‌ ಸಿಂಗ್‌  ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next