Advertisement

ಐಫೆಲ್ ಟವರ್: ತಾಜ್‌ ಮಹಲ್‌ ನಂತೇ ಒಂದು ಪ್ರೀತಿಯ ಸಂಕೇತ!

05:15 PM Oct 30, 2022 | ದಿನೇಶ ಎಂ |

ಐಫೆಲ್‌ ಟವರ್‌ ತಾಜ್‌ ಮಹಲ್‌ ನಂತಹ ರೋಚಕ ಕಥೆಗಳನ್ನು ಹೊಂದಿರದಿದ್ದರೂ ಆಧುನಿಕ ರಚನೆಯ ಐಫೆಲ್ ಟವರ್ ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಈ ವಿಭಿನ್ನ ಕಲಾ ವಿನ್ಯಾಸ ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿದೆ. ಈ ಗೋಪುರವು ಪ್ಯಾರಿಸ್‌ ನ ಪ್ರಸಿದ್ದ ಹೆಗ್ಗುರುತು ಮಾತ್ರ ಆಗಿರುವುದು ಮಾತ್ರವಲ್ಲದೆ, ಇದರ ಕೆಳಗೆ ಪ್ರತಿ ವರ್ಷ ನಡೆಯುವ ಹಲವಾರು ವಿವಾಹ ನಿಶ್ಚಿತಾರ್ಥಗಳ ಕಾರಣ ಇದು ಪ್ರಪಂಚದಾದ್ಯಂತದ ಜೋಡಿಗಳಿಗೆ “ಸಿಂಬಲ್ ಆಫ್ ಲವ್” ಅಥವಾ “ಪ್ರೀತಿಯ ಸಂಕೇತ” ಎಂದು ಕರೆಯಲಾಗಿದೆ.

Advertisement

ತಾಜ್‌ ಮಹಲ್‌ ಕುರಿತಾಗಿ:

ತಾಜ್‌ಮಹಲ್ ಐದನೇ ಮೊಘಲ್ ದೊರೆ ಷಹಜಹಾನ್‌ ನಿರ್ಮಿಸಿದ್ದಾಗಿ ಇತಿಹಾಸ ಹೇಳುತ್ತದೆ ಮತ್ತು ಅದು ಜಗತ್ತಿನಲ್ಲಿ ಪ್ರೀತಿಯ ಪ್ರತೀಕವಾಗಿ ಪ್ರಸಿದ್ದವಾಗಿದೆ. ಷಹಜಹಾನ್ 1628 ರಿಂದ 1658 ರವರೆಗೆ ಭಾರತವನ್ನು ಆಳಿದರು. ಷಹಜಹಾನ್ ತನ್ನ ಎಲ್ಲಾ ಹೆಂಡತಿಯರಲ್ಲಿ, ತನ್ನ ಪ್ರೀತಿಯ ಹೆಂಡತಿ ಮುಮ್ತಾಜ್ ಮಹಲ್ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.

ತಾಜ್ ಮಹಲ್ ಅನ್ನು “ಮುಮ್ತಾಜ್ ಸಮಾಧಿ” ಎಂದೂ ಕರೆಯುತ್ತಾರೆ. ಮುಮ್ತಾಜ್ ಮಹಲ್ ಅವರ ಮರಣದ ನಂತರ, ಷಹಜಹಾನ್ ಬಹಳ ಅಸಹನೀಯರಾದರು. ನಂತರ ಅವರು ತಮ್ಮ ಪ್ರೀತಿಯನ್ನು ಜೀವಂತವಾಗಿಡಲು ಪತ್ನಿಯ ನೆನಪಿಗಾಗಿ ತಾಜ್ ಮಹಲ್ ನಿರ್ಮಿಸಲು ನಿರ್ಧರಿಸಿದರು ಎನ್ನಲಾಗಿದೆ. ಇಡೀ ತಾಜ್ ಮಹಲ್ ಅನ್ನು 1653 ರಲ್ಲಿ ಸುಮಾರು 320 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಯಿತು, ಇದು ಇಂದು 52.8 ಬಿಲಿಯನ್ ರೂಪಾಯಿ (827 ಮಿಲಿಯನ್ ಡಾಲರ್) ಮೌಲ್ಯದ್ದಾಗಿ ಹೊಂದಿದೆ.

ಮೊಘಲ್ ಕುಶಲಕರ್ಮಿ ಉಸ್ತಾದ್ ಅಹ್ಮದ್ ಲಾಹೋರಿ ಅವರ ನಿರ್ಮಾಣದಲ್ಲಿ 20,000ಕ್ಕೂ ಹೆಚ್ಚು ಕುಶಲಕರ್ಮಿಗಳು ಕೆಲಸ ಮಾಡಿದರು ಮತ್ತು ಇದರ ನಿರ್ಮಾಣದ ನಂತರ, ಷಹಜಹಾನ್ ತನ್ನ ಎಲ್ಲಾ ಕುಶಲಕರ್ಮಿಗಳ ಕೈಗಳನ್ನು ಕತ್ತರಿಸಿದನೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

Advertisement

ಐಫೆಲ್‌ ಟವರ್‌ ವಿಶೇಷತೆ:

ಆದರೆ ಇತ್ತೀಚೆಗೆ ಪ್ರೀತಿಯ ಸಂಕೇತವಾಗಿ ಗುರುತಿಸಲ್ಪಡುತ್ತಿರುವ ಐಫೆಲ್ ಟವರ್ 300 ಮೀಟರ್ ಅಂದರೆ 984 ಅಡಿ ಎತ್ತರವಾಗಿದ್ದು, 5 ಮೀಟರ್ ಅಂದರೆ 17 ಅಡಿ ಎತ್ತರದ ಅಡಿಪಾಯವನ್ನು ಹೊಂದಿದೆ. ಐಫೆಲ್‌ ಟವರ್ ನ ಮೇಲೆ ದೂರದರ್ಶನ ಆಂಟೆನಾ ಇದೆ. ಐಫೆಲ್ ಟವರ್ ಪ್ಯಾರಿಸ್ ನ ಏಕಮಾತ್ರ ಸುಂದರ ಗೋಪುರವಾಗಿದೆ ಮಾತ್ರವಲ್ಲದೆ ಇದು ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್‌ ನ ಅದ್ಭುತ ರಚನೆ ಎನ್ನಬಹುದು.

ಫ್ರೆಂಚ್ ಕ್ರಾಂತಿಯ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಚಾಂಪ್ ಡಿ ಮಾರ್ಸ್ ನಲ್ಲಿ ನಿರ್ಮಿಸಲಾಗಿರುವ “ಕಬ್ಬಿಣದ ರಚನೆ”ಗಾಗಿ ಗುಸ್ಟೇವ್ ಐಫೆಲ್ ಎಂಬ ಹೆಸರಿನ ವಿನ್ಯಾಸವನ್ನು ಆಯ್ಕೆ ಮಾಡಲಾಯಿತು. ನಂತರ 1889 ರ ಸಾರ್ವತ್ರಿಕ ಪ್ರದರ್ಶನದ ಸಮಯದಲ್ಲಿ ಈ ಐಫೆಲ್‌ ಟವರ್‌ ನ ರಚನೆಯನ್ನು ತಾತ್ಕಾಲಿಕವಾಗಿ ರಚಿಸಲಾಗಿದ್ದರೂ, ಇದು ಇಂದಿಗೂ ಶಾಶ್ವತವಾಗಿ ಪ್ಯಾರಿಸ್ ಅನ್ನು ಖ್ಯಾತಿಗೊಳಿಸಿದೆ.

ಕಲಾ ಸಮುದಾಯವು ಮೊದಲು ಐಫೆಲ್ ಟವರ್ ಅನ್ನು ಕಟುವಾಗಿ ಟೀಕಿಸಿತು. ಆದರೆ, ಕಾಲಾನಂತರ ಇದು ರೇಡಿಯೋ ಆಂಟೆನಾ ಟವರ್ ಆಗಿಯೂ ಉಪಯೋಗಿಸಲ್ಪಡುತ್ತಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಮಿಲಿಟರಿ ಸಂವಹನಗಳಿಗೆ ನಿರ್ಣಾಯಕವಾಗಿಯೂ ಸೇವೆ ಸಲ್ಲಿಸಿದ ಇದು ಫ್ರೆಂಚ್ ಇತಿಹಾಸದ ಪ್ರಮುಖ ಭಾಗವಾಗಿದೆ. ಯುನೈಟೆಡ್ ಸ್ಟೇಟ್ಸ್ನ ಓಟಿಸ್ ಎಲಿವೇಟರ್ ಕಂಪನಿಯು ರಚಿಸಿದ ಗಾಜಿನ ಪಂಜರದ ಎಲಿವೇಟರ್ಗಳು ಈ ರಚನೆ ಮತ್ತಷ್ಟು ಸುಂದರವಾಗಿ ಕಾಣಲು ಕಾರಣವಾದವು ಮತ್ತು ವಿಶ್ವದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದೆನಿಸಿತು.

ಇದು ವಿಶ್ವದ ಅತ್ಯಂತ ಜನಪ್ರಿಯ ಪೇಯ್ಡ್ ವಿಸಿಟರ್ಸ್ ಆಕರ್ಷಣೆಯಾಗಿದೆ. ಅದ್ಭುತವಾದ ಐಫೆಲ್ ಟವರ್‌ನ ತೂಕ 10,000 ಟನ್‌ಗಳು ಮತ್ತು ಐಫೆಲ್ ಟವರ್ 5 ಬಿಲಿಯನ್ ದೀಪಗಳನ್ನು ಹೊಂದಿದೆ. ಈ ಗೋಪುರವನ್ನು ಫ್ರೆಂಚ್ ಭಾಷೆಯಲ್ಲಿ ಲಾ ಡೇಮ್ ಡಿ ಫೆರ್ ಅಥವಾ “ಐರನ್ ಲೇಡಿ” ಎಂದು ಕರೆಯಲಾಗುತ್ತದೆ. 108 ಅಂತಸ್ತುಗಳು ಮತ್ತು 1,710 ಮೆಟ್ಟಿಲುಗಳು ಐಫೆಲ್ ಟವರ್ ಹೊಂದಿದೆ. ಇದರ ಜೊತೆಗೆ ಐಫೆಲ್ ಟವರ್ ಶಿಖರದಲ್ಲಿ ಒಂದು ಗುಪ್ತ ಅಪಾರ್ಟ್ಮೆಂಟ್ ಕೂಡ ಇದೆ. ಒಮ್ಮೆ ಹಿಟ್ಲರ್ ಹಿಟ್ಲರ್ ಐಫೆಲ್ ಟವರ್ ಅನ್ನು ಕೆಡವಲು ಆದೇಶ ನೀಡಿದ್ದ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

ಪ್ರತಿ ವರ್ಷ ಸರಿ ಸುಮಾರು ಏಳು ಮಿಲಿಯನ್ ಜನರು ಈ ಜಗತ್ಪ್ರಸಿದ್ದ ರಚನೆಯನ್ನು ನೋಡಲು ಬರುತ್ತಾರೆ. 1889 ರಲ್ಲಿ ಐಫೆಲ್ ಟವರ್ ಸಾರ್ವಜನಿಕರಿಗೆ ತೆರೆದಾಗಿನಿಂದ, ಪ್ರಪಂಚದಾದ್ಯಂತದ ಸುಮಾರು 300 ಮಿಲಿಯನ್ ಜನರು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ. ಎರಡು ರೆಸ್ಟೋರೆಂಟ್ ಗಳು, ಅನೇಕ ಬಫೆಗಳು, ಒಂದು ಬ್ಯಾಂಕ್ವೆಟ್ ಹಾಲ್, ಒಂದು ಶಾಂಪೇನ್ ಬಾರ್, ಮತ್ತು ಹಲವಾರು ಗಿಫ್ಟ್ ಅಂಗಡಿಗಳು ಗೋಪುರದ ಮೂರು ಪ್ಲಾಟ್ ಫಾರ್ಮ್ ಗಳಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next