Advertisement

ಬೆಂಗಳೂರಲ್ಲಿ ಐಫೆಲ್‌ ಟವರ್‌

12:14 PM May 07, 2017 | Team Udayavani |

ಬೆಂಗಳೂರು: ಪ್ಯಾರೀಸ್‌ನಲ್ಲಿರುವ “ಐಫೆಲ್‌ ಟವರ್‌’ ಕಣ್ತುಂಬಿಕೊಳ್ಳಬೇಕು, ಸೆಲ್ಫಿàಗೆ ಫೋಸು ಕೊಡಬೇಕು ಎಂಬ ಆಸೆಯೇ? ಡೋಂಟ್‌ ವರಿ.. ಒಮ್ಮೆ ನಗರದ ಸೆಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಮೈದಾನಕ್ಕೆ ಭೇಟಿ ಕೊಟ್ಟರೆ ನಿಮ್ಮ ಆಸೆ ಈಡೇರಿಸಿಕೊಳ್ಳಬಹುದು! 

Advertisement

ಹೌದು, ಕಳೆದ 3 ದಿನಗಳಿಂದ ನಡೆ­ಯುತ್ತಿ­ರುವ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಬರೋ­ಬ್ಬರಿ 90 ಅಡಿ ಎತ್ತರದ ಮಿನಿ ಐಫೆಲ್‌ ಟವರ್‌ ನಿಮಾರ್ಣಗೊಂಡಿದ್ದು, ಸಾರ್ವಜನಿ­ಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ತಮಿಳು­ನಾಡಿನ ಕಲಾವಿದ ಶೇಖರ್‌ ಅವರ ನೇತೃತ್ವದ 25 ತಂತ್ರಜ್ಞರ ತಂಡದ ಪರಿಶ್ರಮದಿಂದ ರೂಪು­ಗೊಂ­ಡಿ­ರುವ ಐಫೆಲ್‌ ಟವರ್‌ ಮೇಳದ ಸೊಬಗು ಹೆಚ್ಚಿಸಿದೆ.

ಟವರ್‌ನ ಕೆಳಗಡೆ ನೀರಿನ ಕಾರಂಜಿ ವಿದ್ಯುತ್‌ ಅಲಂಕಾರದಿಂದ ಕಂಗೊಳಿಸುತ್ತಿರು­ವುದು ಮತ್ತಷ್ಟು ಮೆರುಗು ನೀಡಿದೆ. ಶನಿವಾರ ಮೇಳಕ್ಕೆ ಆಗಮಿಸಿದ್ದ ಸಾವಿರಾರು ಮಂದಿ, ಈ ಮಿನಿ ಐಫೆಲ್‌ ಟವರ್‌ ಕಣ್ತುಂಬಿಕೊಳ್ಳುವುದರ ಜೊತೆಗೆ ಸೆಲ್ಫಿà ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ದಂಡಕಾರಣ್ಯದ ಅನುಭವ!: ಐಫೆಲ್‌ ಟವರ್‌ ಜೊತೆಗೆ ಈ ಬಾರಿ ದಂಡಕಾರಣ್ಯದ ಪ್ರಾಣಿಗಳನ್ನು ನೋಡುವ ಅವಕಾಶವೂ ಸಾರ್ವಜನಿಕರಿಗೆ ಲಭ್ಯ­ವಾ­ಗುತ್ತಿದೆ. “ಪ್ರಾಣಿಗಳ ಸಾಮ್ರಾಜ್ಯ’ ಹೆಸರಿನಲ್ಲಿ ಕಾಡಿನ ಮಾದರಿ ಸೃಷ್ಟಿಸಿದ್ದು,  ಆನೆ, ಹುಲಿ, ಸಿಂಹ, ಡಾಲ್ಫಿನ್‌, ಬಿಳಿ ನವಿಲು, ಮೊಸಳೆ, ಕರಡಿ, ಹೆಬ್ಟಾವು, ಕಿಂಗ್‌ಕಾಂಗ್‌ ಸೇರಿದಂತೆ 25ಕ್ಕೂ ಹೆಚ್ಚು ಪ್ರತಿ­ಕೃತಿಗಳು ಹಾಗೂ ನವಿಲು, ಗಿಳಿ ಸೇರಿದಂತೆ ಹಲವು ಜಾತಿಯ ಪಕ್ಷಿಗಳನ್ನು ಇಡಲಾಗಿದೆ.ಥೇಟ್‌ ಅರಣ್ಯಾನುಭಾವ ಒದಗಿಸುವ ಸಲುವಾಗಿ ಪ್ರಾಣಿ­ಗಳ  ಚೀರಾಟ, ಗರ್ಜನೆಯ ಸೌಂಡ್‌ ವ್ಯವಸ್ಥೆ ಮಾಡಿ ಕಲಾವಿದರು ಸೃಜನಾತ್ಮಕತೆ ಮೆರೆದಿದ್ದಾರೆ.

ಜೀವಂತ ಪ್ರಾಣಿಗಳಂತೆ ಹೋಲುವ ಹೆಬ್ಟಾವು, ಆನೆ, ಡಾಲ್ಫಿನ್‌, ಠೇಂಕರಿಸುವ ಹುಲಿ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು ಸೇರಿದಂತೆ ಇನ್ನಿತರೆ ಪ್ರಾಣಿ ಪಕ್ಷಿಗಳನ್ನು ಜನ ಕುತೂಹಲದಿಂದ ವೀಕ್ಷಿಸಿದರು. ಅಲ್ಲದೆ ಪುಟ್ಟ ಮಕ್ಕಳಂತೂ ತಮ್ಮ ಪೋಷಕರ ಜೊತೆ ಪ್ರಾಣಿಗಳ ಪ್ರತಿಕೃತಿಗಳ  ಜೊತೆ ಫೋಸ್‌ ನೀಡುತ್ತಾ ಸಂಭ್ರಮಿಸಿದರು. 

Advertisement

ಗ್ರಾಹಕ ಮೇಳದಲ್ಲಿ ಏನೆಲ್ಲಾ ಇದೆ?: ಐಫೆಲ್‌ ಟವರ್‌ ಹಾಗೂ ದಂಡಕಾರಣ್ಯದ ಅನುಭವ ಪಡೆದು­ಕೊಳ್ಳುವ ಸಾರ್ವಜನಿಕರಿಗೆ ರಿಲ್ಯಾಕ್ಸ್‌ ಆಗಿ ಶಾಪಿಂಗ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ. ಗೃಹೋಪಯೋಗಿ ವಸ್ತುಗಳು, ಪಾಶ್ಚಾತ್ಯ ಹಾಗೂ ದೇಸಿ ಬಟ್ಟೆಗಳು, ಅಲಂಕಾರಿಕ ವಸ್ತುಗಳ ಮಳಿಗೆಗಳು,  ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ವಿವಿಧ ಮಾದರಿಯ ಪೀಠೊಪಕ­ರಣಗಳು, ತರಹೇವಾರಿ ತಿಂಡಿ ತಿನಿಸುಗಳು ಅಂಗಡಿಗಳನ್ನು ತೆರೆಯಲಾಗಿದೆ.

“ಈ ಬಾರಿಯ ಗ್ರಾಹಕ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಕಳೆದ ಮೂರು ದಿನಗಳಿಂದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ದ್ದಾರೆ. ಮೇ 21ರವರೆಗೆ  ಪ್ರತಿ ದಿನ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ  ಮೇಳ ನಡೆಯ ಲಿದ್ದು, ಐಫೆಲ್‌ ಟವರ್‌, ಅರ ಣ್ಯದ ಅನುಭವ, ಶಾಪಿಂಗ್‌ ಮಾಡಲು ಅವಕಾಶವಿದೆ’
-ಗೌತಮ್‌, ಗ್ರಾಹಕ ಮೇಳದ ನಿರ್ದೇಶಕ 

Advertisement

Udayavani is now on Telegram. Click here to join our channel and stay updated with the latest news.

Next