Advertisement
ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದ ನಾಹೇಲ್ ಪೆರೆಜ್ ಬಿಸ್ಕರ್ಯಾತ್ ಅತ್ಯುತ್ತಮ ನಟ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ. ಅತ್ಯುತ್ತಮ ಚಿತ್ರ ನಿರ್ದೇಶನಕ್ಕೆ ನೀಡಲಾಗುವ ಪ್ರಶಸ್ತಿ ಚೀನಾದ ಚಿತ್ರ ಏಂಜಲ್ಸ್ ವೇರ್ ವೈಟ್ ನಿರ್ದೇಶಿಸಿದ ವಿವಿಯನ್ ಕೂ ಅವರ ಪಾಲಾಗಿದೆ.
Related Articles
Advertisement
ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ, ಕೇಂದ್ರ ಸಚಿವೆ ಸ್ಮತಿ ಇರಾನಿ, ಕೇಂದ್ರ ಸಚಿವರಾದ ಕಿರಣ್ ರಿಜುಜು, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಭಾರತೀಯ ಚಿತ್ರ ನಿರ್ದೇಶಕರಾದ ಜಾನು ಬರುವಾ, ನಾಗೇಶ್ ಕುಕನೂರ್ ಮತ್ತಿತರರು ಭಾಗವಹಿಸಿದ್ದರು. 9 ದಿನಗಳ ಉತ್ಸವದಲ್ಲಿ 195 ಸಿನಿಮಾಗಳು ಪ್ರದರ್ಶನಗೊಂಡಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ಪೃಥ್ವಿ ಕೊಣನೂರು ಅವರ ರೈಲ್ವೆ ಚಿಲ್ಡ್ರನ್ ಚಿತ್ರ ಪ್ರದರ್ಶನಗೊಂಡಿತು.
ಬಾಲಿವುಡ್ ಮಯ?: ಇಡೀ ಉತ್ಸವ ಪೂರ್ತಿ ಬಾಲಿವುಡ್‌ನಿಂದ ಆವರಿಸಿಕೊಂಡಿದ್ದು, ದಕ್ಷಿಣ ಭಾರತದ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಹೊರತುಪಡಿಸಿದಂತೆ ಉಳಿದಾವ ಪ್ರಮುಖರೂ ಭಾಗವಹಿಸಿದಂತೆ ತೋರಲಿಲ್ಲ. ಇದಕ್ಕೆ ಬದಲಾಗಿ ಕಳೆದೆಲ್ಲ ವರ್ಷಗಳಿಗಿಂತ ಈ ಬಾರಿ ಹೆಚ್ಚು ಮಂದಿ ಬಾಲಿವುಡ್ ನಟ-ನಟಿಯರು ಉತ್ಸವದಲ್ಲಿ ಭಾಗವಹಿಸಿದ್ದರು. ಶಾರೂಖ್ ಖಾನ್, ಅಕ್ಷಯ್ ಕುಮಾರ್, ಶ್ರೀದೇವಿ, ಸಲ್ಮಾನ್ ಖಾನ್, ಕತ್ರಿನಾ ಕೈಫ್, ಕಂಗನಾ ರಣೌತ್, ಪೂಜಾ ಹೆಗ್ಡೆ, ಉಮಾ ಖುರೇಶಿ, ಅಲಿಯಾ ಭಟ್, ನಿರ್ದೇಶಕರಾದ ಸುಭಾಷ್ ಘಾಯ್, ಶೇಖರ್ ಕಪೂರ್ ಮತ್ತಿತರರು ಭಾಗವಹಿಸಿದ್ದರು.
ಪ್ರದರ್ಶನವಾಗದ ಎಸ್ ದುರ್ಗಾ: ಸನಲ್ ಕುಮಾರ್ ಶಶಿಧರನ್ ಅವರ ಎಸ್ ದುರ್ಗಾ ಚಿತ್ರದ ಪ್ರದರ್ಶನ ಕೊನೆಗೂ ಸಾಧ್ಯವಾಗಲಿಲ್ಲ. ಭಾರತೀಯ ಪನೋರಮಾ ವಿಭಾಗದಡಿ ಆ ಚಿತ್ರ ಆಯ್ಕೆಯ ಅಂತಿಮ ಸುತ್ತಿಗೆ ಹೋಗಿತ್ತಾದರೂ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಕೊನೇ ಹಂತದಲ್ಲಿ ಕೈಬಿಡಲಾಯಿತು. ಇದನ್ನು ಪ್ರಶ್ನಿಸಿ ಸನಲ್ ಕುಮಾರ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರಲ್ಲದೇ, ನ್ಯಾಯಾಲಯ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಸೂಚಿಸಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸೇರಿದಂತೆ ಹಲವು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ದೊರೆಯಲಿಲ್ಲ.
* ಅರವಿಂದ ನಾವಡ