Advertisement
ಕಲಾ ಸಂಭ್ರಮಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸೀದಿ, ಮುನ್ವರುಲ್ ಇಸ್ಲಾಂ ಮದ್ರಸಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರವರ ಜನ್ಮ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿದ ಗಾಂಧಿನಗರ ಸಹಾಯಕ ಖತೀಬರಾದ ಬಹು| ಶೌಕತ್ ಅಲಿ ಅಮಾನಿ ವಯನಾಡ್ ಮಾತನಾಡಿ, ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯನ್ನು ಅನುಸರಿಸಿದರೆ ಮಾತ್ರ ಪರಿಪೂರ್ಣ ಮುಸ್ಲಿಂ ಆಗಲು ಸಾಧ್ಯವಿದೆ. ಇಸ್ಲಾಂ ಕಲಿಸಿದ ಶಾಂತಿ ಸಂದೇಶ ಪ್ರವಾದಿ ಅವರು ತೋರಿಸಿದ ಸೌಹಾರ್ದತೆಯ ಪಥ ಇಂದಿನ ಸಮಾಜದ ಅನಿವಾರ್ಯತೆಯಲ್ಲಿ ಒಂದಾಗಿದೆ ಎಂದರು.
Related Articles
ಪುತ್ತೂರು ಡಿ. 1: ಈದ್ ಮಿಲಾದ್ ಹಬ್ಬವನ್ನು ಪುತ್ತೂರು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ ಸೋಮವಾರ ಸಂಜೆ ಈದ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು.
Advertisement
ಉಪ್ಪಿನಂಗಡಿ, ಸವಣೂರು, ಮುಕ್ವೆ, ಕೋಡಿಂಬಾಡಿ, ಬಜತ್ತೂರು, ಕಡಬ, ನೆಲ್ಯಾಡಿ, ಆತೂರು ಸೇರಿದಂತೆ ಹಲವಾರು ಕಡೆಗಳಲ್ಲಿ ರ‍್ಯಾಲಿ ನಡೆದವು. ಮಸೀದಿಗಳಲ್ಲಿ ಮಿಲಾದುನ್ನಬೀಯ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.
ಆಯಾ ಮಸೀದಿಗಳಲ್ಲಿ ರ‍್ಯಾಲಿಯ ಬಳಿಕ ಧಾರ್ಮಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆದವು. ಜಿಲ್ಲಾ ಯುವ ಜನ ಪರಿಷತ್ ಪುತ್ತೂರು ಘಟಕ ಮತ್ತು ಈದ್ ಮಿಲಾದ್ ಪುತ್ತೂರು ವತಿಯಿಂದ ಕಬಕದಿಂದ ಪುತ್ತೂರು ತನಕ ವಾಹನ ಜಾಥಾ ಸಾಗಿ ಅನಂತರ ಕಿಲ್ಲೆ ಮೈದಾನದಲ್ಲಿ ಧಾರ್ಮಿಕ ಸಭೆ ನಡೆಯಿತು.
ಮೌಲೂದ್ ಪಾರಾಯಣಎಲ್ಲ ಮಸೀದಿಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೌಲೂದ್ ಪಾರಾಯಣ ಮುಸ್ಲಿಂ ಧರ್ಮಗುರುಗಳಿಂದ ನಡೆಸಲ್ಪಟ್ಟಿತು. ಮಿಲಾದುನ್ನಬಿ ಆಚರಣೆಯಲ್ಲಿ ಮೌಲೂದ್ ಪಾರಾಯಣದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮೌಲೂದ್ ಪಾರಾಯಣ ಎಂದರೆ ಪ್ರವಾದಿಯವರ ಹಿರಿಮೆಯನ್ನು ಕೊಂಡಾಡುವ ಕಾರ್ಯಕ್ರಮ ಆಗಿದೆ.