Advertisement

ಶಾಂತಿ-ಸಾಮರಸ್ಯದ ಸಂಕೇತ ಈದ್‌ ಮಿಲಾದ್‌

04:24 PM Oct 09, 2022 | Team Udayavani |

ಗಜೇಂದ್ರಗಡ: ಆಧ್ಯಾತ್ಮಿಕತೆಯ ಸನ್ಮಾರ್ಗದ ಮೂಲಕ ಸಮಾಜದಲ್ಲಿನ ಮೌಡ್ಯತೆ, ಕಂದಾಚಾರ ತೊಲಗಿಸಿ ವಿಶ್ವ ಭ್ರಾತೃತ್ವ ಹಾಗೂ ಮಾನವೀಯ ಮೌಲ್ಯಗಳ ಬೀಜಮಂತ್ರದ ಪ್ರತಿಪಾದನೆಯೊಂದಿಗೆ ಮುಸ್ಲಿಂ ಧರ್ಮ ಸಂಸ್ಥಾಪಿಸಿ, ಭಾವೈಕ್ಯತೆಯ ಹರಿಕಾರರೆನಿಸಿದ ಪ್ರವಾದಿ ಹಜರತ್‌ ಮಹಮ್ಮದ ಪೈಗಂಬರ್‌ (ಸ.ಅ) ಅವರ ಜನ್ಮದಿನವನ್ನು ಪಟ್ಟಣ ಸೇರಿದಂತೆ ವಿಶ್ವಾದ್ಯಂತ ಮುಸಲ್ಮಾನರು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಸಂಭ್ರಮದಿಂದ ಆಚರಿಸುತ್ತಾರೆ.

Advertisement

ಮಾನವನ ದೈನಂದಿನ ಜೀವನದ ಶಿಷ್ಟಾಚಾರಗಳಲ್ಲಿ ವ್ಯತ್ಯಾಸ ಕಂಡಾಗ ಸೃಷ್ಟಿಕರ್ತನು ಸೂಫಿ ಶರಣ, ಸಂತರಂತಹ ಮಹಾತ್ಮರನ್ನು ಸೃಷ್ಟಿಸಿ ಮಾನವನ ಸಕಲ ಭೌತಿಕ ಪರಿಶುದ್ಧತೆಗೆ ಅಗತ್ಯಗಳನ್ನು ಪೂರೈಸುತ್ತಾನೆಂಬುದು ನಂಬಿಕೆ. ಅಂತಹ ಮಹಾನ್‌ ಶರಣರ ಸಾಲಿನಲ್ಲಿರುವ ಪ್ರವಾದಿ ಎಂದೇ ಕರೆಯಿಸಿಕೊಂಡು ಅಂಧತ್ವದಲ್ಲಿ ಬೆಂದಿದ್ದ ಮುಸ್ಲಿಂ ಸಮುದಾಯದ ಕಣ್ಣು ತೆರೆಯಿಸಿ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಮಾರ್ಗದೆಡೆಗೆ ಕರೆದೊಯ್ದ ಮಹಾನ್‌ ಚೇತನ ಹಜರತ್‌ ಮಹಮ್ಮದ್‌ ಪೈಗಂಬರ್‌.

ಪ್ರವಾದಿ ಜನನ: ಕ್ರಿ.ಶ. 571ರ ರಬಿ ಉಲ್‌ ಅವ್ವಲ್‌ ಮಾಸದ 12ನೇ ದಿನವಾದ ಸೋಮವಾರದಂದು ಅರಬ್‌ ರಾಷ್ಟ್ರದ ಮಕ್ಕಾ ಪಟ್ಟಣದಲ್ಲಿ ಜನಿಸಿದರೆಂಬ ಇತಿಹಾಸವಿದೆ. ಆದ್ದರಿಂದ, ಸಹಜವಾಗಿಯೇ ಈ ದಿನದ ಜತೆ ಆ ಮಾಸದಲ್ಲಿ ಮುಸಲ್ಮಾನ್‌ ಬಾಂಧವರು ಮೌಲೂದ್‌ ಷರೀಫ್‌ ಈದ್‌ ಮಿಲಾದ್‌ ಮತ್ತು ಈದ್‌ ಮಿಲಾದುನ್ನಬಿ ಅಲ್ಲದೇ, ಅರಬ್ಬಿ ಭಾಷೆಯಲ್ಲಿ “ಮಿಲಾದ್‌’ ಎಂದರೆ ಹುಟ್ಟುವ ಸಮಯ. “ನಬಿ’ ಎಂದರೆ ಪೈಗಂಬರ್‌ ಅಥವಾ ದೇವದೂತ. “ಮಿಲಾದುನ್ನಬಿ’ ಎಂದರೆ ಪೈಗಂಬರರು ಜನಿಸಿದ ದಿನವೆಂಬ ಅರ್ಥ.

ಇಸ್ಲಾಂ ಎಂಬ ಅಭಿದಾನ ಶಾಂತಿ ಮತ್ತು ಅನುಸರಣೆಯನ್ನು ಸೂಚಿಸುತ್ತದೆ. ಇಸ್ಲಾಂ ಧರ್ಮದ ಅನುಗ್ರಹ ಮಾನವೀಯತೆಯ ಐಕ್ಯತೆಯಾಗಿದೆ. ಜಾಗತಿಕ ಶಾಂತಿ, ಮಾನವ ಸಹೋದರತೆ ಮತ್ತು ವಿಶ್ವ ಬಂಧುತ್ವದ ಅಮರ ಸಂದೇಶವನ್ನು ನೀಡಿ ಮನು ಕುಲಕ್ಕೆ ಶಾಂತಿ, ಸನ್ಮಾರ್ಗ ತೋರಿದ ಮಹಮ್ಮದ ಪೈಗಂಬರರ ತತ್ವ ಇಂದಿಗೂ ಅಮರ.

-ಡಿ.ಜಿ. ಮೋಮಿನ್‌

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next