Advertisement

ಈಜಿಪ್ಟ್: ಭೂಮಿಯಡಿಯಲ್ಲಿ 250 ಮಮ್ಮಿಗಳು ಪತ್ತೆ! 150ಕ್ಕೂ ಅಧಿಕ ಕಲಾಕೃತಿಗಳು

01:02 AM Jun 01, 2022 | Team Udayavani |

ಕೈರೋ: ಪಿರಮಿಡ್‌ಗಳ ನಾಡಾದ ಈಜಿಪ್ಟ್ ನಲ್ಲಿ ಭೂಮಿಯೊಳಗೆ ಹೂತಿಡಲಾಗಿದ್ದ 250 ಶವಪೆಟ್ಟಿಗೆಗಳು, 150ಕ್ಕೂ ಅಧಿಕ ಕಲಾಕೃತಿಗಳು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ.

Advertisement

ಈಜಿಪ್ಟ್ ರಾಜಧಾನಿ ಕೈರೋದ ಸನಿಹದಲ್ಲಿರುವ ಸಕ್ಕಾರಾ ಶ್ಮಶಾನದಲ್ಲಿ ಈ ಶವ ಪೆಟ್ಟಿಗೆಗಳು ಪತ್ತೆಯಾಗಿವೆ. ಶವ ಪೆಟ್ಟಿ ಗೆಗಳು ವಿಶೇಷ ಬಣ್ಣಗಳಲ್ಲಿದ್ದು, ಅವು ಗಳೆಲ್ಲದರಲ್ಲೂ ಮಮ್ಮಿಗಳು ಇರುವುದಾಗಿ ತಿಳಿಸಲಾಗಿದೆ.

ಒಂದು ಮಮ್ಮಿಯ ಮೇಲೆ ಚಿತ್ರ ಕಲಾಕೃತಿಗಳಿದ್ದು, ಅದರ ಬಗ್ಗೆ ಹೆಚ್ಚಿನ ಅಧ್ಯಯನ ಆರಂಭಿಸಲಾಗಿದೆ.

ಈಗ ಪತ್ತೆ ಯಾಗಿರುವ ಶವಪೆಟ್ಟಿಗೆಗಳು ಹಾಗೂ ಹಲವು ಕಲಾಕೃತಿಗಳು ಕ್ರಿ.ಪೂ. 500ರ ಕಾಲ ದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next