Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ನಾನು ಕೂಡ ತೀವ್ರವಾಗಿ ಖಂಡಿಸುತ್ತೇನೆ. ವೈಚಾರಿಕ ಭಿನ್ನಾಭಿಪ್ರಾಯ ಏನೇ ಇರಲಿ ಯಾರು ಲಕ್ಷ್ಮಣ ರೇಖೆ ದಾಟಬಾರದು, ಹಿಂಸಾಮಾರ್ಗ ಹಿಡಿಯಬಾರದು.ಇಂತಹ ಸಂಸ್ಕೃತಿ ಸಹಿಸಲಾಗದು. ಬಿಜೆಪಿ ಒಪ್ಪುವುದಿಲ್ಲ ಎಂದರು.
ರಾಯಚೂರು ಜಿಲ್ಲೆ ತೆಲಂಗಾಣ ಸೇರಲು ಸಜ್ಜಾಗಿದೆ ಎಂಬ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಹೇಳಿಕೆ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.ಜವಾಬ್ದಾರಿ ಸ್ಥಾನದಲ್ಲಿರುವ ಕೆಸಿಆರ್, ಒಕ್ಕೂಟ ವ್ಯವಸ್ಥೆ , ಭಾಷಾ ಬಾಂಧವ್ಯ ಕ್ಕೆ ಧಕ್ಕೆ ತರುವ ಯತ್ನ ಸಿಎಂ ಸ್ಥಾನದಲ್ಲಿದ್ದವರು ಮಾಡುವುದು ಸರಿಯಲ್ಲ.ನಮ್ಮದೇ ಪಕ್ಷ ರಾಯಚೂರು ಶಾಸಕರು ವರ್ಷದ ಹಿಂದೆ ಲಘು ದಾಟಿಯಲ್ಲಿ ಹೇಳಿದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸಿಎಂ ಸ್ಥಾನದಲ್ಲಿದ್ದವರು ಗಂಭೀರ ರೀತಿಯ ಹೇಳಿಕೆ ಸರಿಯಲ್ಲ.
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ ಅವರ ಹೇಳಿಕೆಯನ್ನು ಆಗಲೇ ಖಂಡಿಸಿದ್ದೆ. ಈಗಲೂ ಹೇಳುವೆ ಸೂಕ್ಷ್ಮ ವಾದ ವಿಚಾರದಲ್ಲಿ ಲಘುವಾದ ಹೇಳಿಕೆ ಬೇಡ ಎಂಬುದು ನನ್ನ ಸಲಹೆಯಾಗಿದೆ ಎಂದರು.