Advertisement
1)ಬೇಕಾದ ಸಾಮಗ್ರಿಗಳು:
3 ತಾಜಾ ಹಸಿ ಮೊಟ್ಟೆಗಳು, 2 ದೊಡ್ಡ ಗಾತ್ರದ ಈರುಳ್ಳಿ, ಚಿಟಿಕೆ ಉಪ್ಪು, ಅರ್ಧ ಸ್ಪೂನ್ ಖಾರಪುಡಿ, 200 ಗ್ರಾಂ ಮೈದಾಹಿಟ್ಟು, 5 ಗ್ರಾಂ ಶೇಂಗಾ ಎಣ್ಣೆ, 3ಗ್ರಾಂ ಜೀರಿಗೆ, 3 ಗ್ರಾಂ ಸಾಸಿವೆ, ಕರಿಯಲು 1ಲೀಟರ್ ಎಣ್ಣೆ .
ಮೊಟ್ಟೆಗಳನ್ನು ಒಡೆದು ರಸವನ್ನು ಬಾಣಲೆಯಲ್ಲಿ ಸಂಗ್ರಹಿಸಿ ಚೆನ್ನಾಗಿ ಕಟೆದುಕೊಳ್ಳಿ. ಈರುಳ್ಳಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಶೇಂಗಾ ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ ಸಾಸಿವೆ ಒಗ್ಗರಣೆ ಹಾಕಿ. ಅವು ಸಿಡಿಯತೊಡಗಿದಾಗ, ಹೆಚ್ಚಿಕೊಂಡ ಈರುಳ್ಳಿ ತುಂಡುಗಳನ್ನು ಹಾಕಿ ಮೆತ್ತಗಾಗುವವರೆಗೆ ಬಾಡಿಸಿ. ಅದಕ್ಕೆ ಮೊಟ್ಟೆರಸ ಸೇರಿಸಿ ಚೆನ್ನಾಗಿ ಕದಡಿ. ಮೊಟ್ಟೆಯ ಅಂಶ ಗಟ್ಟಿಯಾಗುವವರೆಗೆ ತಿರುವಿಕೊಳ್ಳಿ. ಮೈದಾಹಿಟ್ಟನ್ನು ನೀರು ಸೇರಿಸಿ ಪೂರಿಯ ಹದಕ್ಕೆ ನಾದಿಕೊಳ್ಳಿ. ನಂತರ ಹಿಟ್ಟನ್ನು ಉಂಡೆ ಮಾಡಿ ಪೂರಿಯ ಅಗಲಕ್ಕೆ ಲಟ್ಟಿಸಿಕೊಂಡು ಅದರಲ್ಲಿ ಮೇಲೆ ತಯಾರಿಸಿದ ಮೊಟ್ಟೆ ರಸಾಯನವನ್ನು ಇಟ್ಟು ಸಮೋಸಾ ರೀತಿಯಲ್ಲಿ ತ್ರಿಕೋನಾಕಾರದಲ್ಲಿ ಮಡಚಿಕೊಳ್ಳಿ. ಅಗಲವಾದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಮೋಸಾಗಳನ್ನು ಹದವಾಗಿ ಕರಿದುಕೊಳ್ಳಿ. ತಯಾರಿಸಿದ ಸಮೋಸಾಗಳನ್ನು ಪುದೀನ ಚಟ್ನಿಯೊಂದಿಗೆ ಸಾಯಂಕಾಲದ ಚಹದೊಂದಿಗೆ ಸವಿಯಿರಿ. 2)
ಬೇಕಾದ ಸಾಮಗ್ರಿಗಳು: ಬೇಯಿಸಿ ಸಿಪ್ಪೆ ತೆಗೆದ 3 ಮೊಟ್ಟೆಗಳು, 2 ಮಧ್ಯಮ ಗಾತ್ರದ ಈರುಳ್ಳಿಗಳು, 3 ಹಸಿಮೆಣಸಿನಕಾಯಿ, 5 ಗ್ರಾಂ ಶೇಂಗಾ ಎಣ್ಣೆ, 3ಗ್ರಾಂ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, 200ಗ್ರಾಂ ಮೈದಾಹಿಟ್ಟು, ಕರಿಯಲು ಎಣ್ಣೆ.
Related Articles
ಮೈದಾ ಹಿಟ್ಟನ್ನು ಪೂರಿ ಆಕಾರಕ್ಕೆ ಲಟ್ಟಿಸಿ ಅದರ ಮೇಲೆ ಬೇಯಿಸಿದ ಮೊಟ್ಟೆ ರಸಾಯನವನ್ನು ಇಟ್ಟು ಸಮೋಸದ ಆಕಾರದಲ್ಲಿ ಮಡಚಿ ಅಗಲವಾದ ತಟ್ಟೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಮೋಸಗಳನ್ನು ಕರಿಯಿರಿ.
Advertisement
3)ಬೇಕಾದ ಸಾಮಗ್ರಿಗಳು:
ಬೇಯಿಸಿ ಸಿಪ್ಪೆ ತೆಗೆದ 3 ಮೊಟ್ಟೆಗಳು, 5ಗ್ರಾಂ ಖಾರಪುಡಿ, 2 ದೊಡ್ಡ ಗಾತ್ರದ ಈರುಳ್ಳಿಗಳು, 5 ಗ್ರಾಂ ಶೇಂಗಾ ಎಣ್ಣೆ, 3 ಗ್ರಾಂ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, 250ಗ್ರಾಂ ಮೈದಾ ಹಿಟ್ಟು, ಕರಿಯಲು ಎಣ್ಣೆ. ಮಾಡುವ ವಿಧಾನ:
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮೊಟ್ಟೆಗಳನ್ನು ಎಗ್ ಸ್ಲೆ„ಸರ್‌ನಲ್ಲಿ ಸ್ಲೆ„ಸ್ ಮಾಡಿಕೊಳ್ಳಿ. ಮೈದಾ ಹಿಟ್ಟನ್ನು ಪೂರಿ ಹದಕ್ಕೆ ನಾದಿಕೊಳ್ಳಿ. ಶೇಂಗಾ ಎಣ್ಣೆಯನ್ನು ಕಾಯಿಸಿ ಜೀರಿಗೆ ಒಗ್ಗರಣೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳಿ, ಖಾರಪುಡಿ, ಉಪ್ಪು ಸೇರಿಸಿ ಹದವಾಗಿ ಬೇಯಿಸಿ ಈರುಳ್ಳಿ ಪಲ್ಯ ತಯಾರಿಸಿರಿ. ನಾದಿಕೊಂಡ ಮೈದಾ ಹಿಟ್ಟನ್ನು ಪೂರಿಯ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಅದರ ಮೇಲೆ ಸ್ವಲ್ಪ ಈರುಳ್ಳಿ ಪಲ್ಯ ಹರಡಿ, ಅದರ ಮೇಲೆ ಮೊಟ್ಟೆ ಸ್ಲೆ„ಸ್ ಇಡಿ. ಅದರ ಮೇಲೆ ಮತ್ತೆ ಸ್ವಲ್ಪ ಈರುಳ್ಳಿ ಪಲ್ಯ ಹರಡಿ ಸಮೋಸಾ ಆಕಾರಕ್ಕೆ ಮಡಚಿ ಎಣ್ಣೆಯಲ್ಲಿ ಕಾಯಿಸಿ. ಆನಂತರ ಕಾದ ಎಣ್ಣೆಯಲ್ಲಿ ಸಮೋಸಾಗಳನ್ನು ಗರಿಗರಿಯಾಗಿ ಕರಿಯಿರಿ. ಶರಣಾಂಬಾ ಬ. ಹುಡೇದಗಡ್ಡಿ