Advertisement

Panaji: ಧರ್ಮ ಸಂಸ್ಕಾರಗಳನ್ನು ಉಳಿಸುವ ಪ್ರಯತ್ನ ಮಾಡಬೇಕು

02:02 PM Jan 05, 2024 | Team Udayavani |

ಪಣಜಿ: ಇತ್ತೀಚೆಗೆ ಗೋವಾದಲ್ಲಿ ವೀರಶೈವ ಲಿಂಗಾಯತರು ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮರೆಯುತ್ತಿದ್ದಾರೆ. ಆದ್ಧರಿಂದ ಧರ್ಮಜಾಗೃತಿ ಮಾಡಿಸುವುದಕ್ಕಾಗಿ ವರ್ಷಕ್ಕೆ ಒಬ್ಬರನ್ನಾದರೂ ಧರ್ಮಗುರುಗಳನ್ನು ಕರೆಸಿ ಧರ್ಮ ಸಂಸ್ಕಾರಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಡದಯ್ಯ ಹಿರೇಮಠ ಹೇಳಿದರು.

Advertisement

ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ಮಡಗಾಂವ ಗೋವಾ ವತಿಯಿಂದ ಜುವಾರಿನರದಲ್ಲಿ ಶ್ರೀ ಸಚ್ಚಿದಾನಂದ ಮಠದ ಸಭಾಗೃಹದಲ್ಲಿ ಸಮಾಜದ ಜುವಾರಿನಗರ ಉಪಸಮೀತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡದಯ್ಯ ಹಿರೇಮಠ ಮಾತನಾಡಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ  ಮಲ್ಲಿಕಾರ್ಜುನ ಫರ್ತಾಬಾದ್ ಮಾತನಾಡಿ, ಜುವಾರಿನರ ಬಿರ್ಲಾದಲ್ಲಿ ವೀರಶೈವ ಲಿಂಗಾಯತ ಧರ್ಮದ ಅಜಾಗರೂಕತೆಯಿಂದಾಗಿ ಹಲವರು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.

ಮಕರ ಸಂಕ್ರಾತಿಯ ಅಂಗವಾಗಿ ಜಗದ್ಗುರುಗಳನ್ನು ಗೋವಾಕ್ಕೆ ಬರಮಾಡಿಕೊಂಡು ಧರ್ಮಜಾಗೃತಿ ಮಾಡಲು  ಸರ್ವಾನುಮತದಿಂದ ಪೂರ್ವಭಾವಿ ಸಭೆ ನಡೆಸಲಾಯಿತು.

ಕಾಶಿ ಜಗದ್ಗುರುಗಳು ಹಾಗೂ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಮಿಗಳ ದಿವ್ಯ ಸಾನಿಧ್ಯದಲ್ಲಿ ಫೆ. 4 ರ ರವಿವಾರ ಜುವಾರಿನಗರದಲ್ಲಿ ಸಂಕ್ರಾಂತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.

Advertisement

ಸಭೆಯಲ್ಲಿ ಮಲ್ಲಪ್ಪಾ ಕೋರಿ, ಮಹಾದೇವಪ್ಪ ಬೆಳವಾಡಿ, ವಿರೇಶ ಬಾದರದಿನ್ನಿ, ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು. ಪಡದಯ್ಯಾಸ್ವಾಮಿ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ಶಂಕರ ಹೊಸ್ಮನಿ ವಂದಿಸಿದರು.

ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾಸಮೀತಿಗೆ ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನ ಫರ್ತಾಬಾದ್, ಅಧ್ಯಕ್ಷರಾಗಿ ರುದ್ರಯ್ಯಸ್ವಾಮಿ ಹಿರೇಮಠ, ಉಪಾಧ್ಯಕ್ಷರಾಗಿ ಹನುಮಂತ ಉಮಚಗಿ, ಕಾರ್ಯದರ್ಶಿಯಾಗಿ ಶಿವನಗೌಡ ಪಾಟೀಲ್, ಸಹಕಾರ್ಯದರ್ಶಿಯಾಗಿ ಮಹೇಶ ಆಲೂರ, ಕೋಶಾಧಿಕಾರಿಯಾಗಿ ರಮೇಶಗೌಡ ಗೌಡರ್, ಸಹ ಕೋಶಾಧಿಕಾರಿಯಾಗಿ ಸಿದ್ಧನಗೌಡ ಗೌಡರ್, ಮಾಧ್ಯಮ ಸಲಹೆಗಾರರಾಗಿ ಬಾಪುಗೌಡ ಮ್ಯಾಗೇರಿ ಹಾಗೂ ಸಿದ್ಧರಾಮ ಬಿರಾದರ್ ಆಯ್ಕೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next