Advertisement

“ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದಾಗ ಸತ್ಪಲ ಲಭ್ಯ’

01:00 AM Mar 01, 2019 | Team Udayavani |

ಉಡುಪಿ: ಕ್ರೈಸ್ತ ಯುವಜನತೆ ಉದ್ಯೋಗಕ್ಕಾಗಿ ಗಲ್ಫ್ ಸಹಿತ ವಿವಿಧ ದೇಶಗಳಿಗೆ ತೆರಳುತ್ತಾರೆ. ಅವರಿಗೆ ಭಾರತದಲ್ಲಿಯೇ ಉದ್ಯೋಗ ಮಾಡಲು ಮಾರ್ಗದರ್ಶನ ನೀಡಬೇಕು. ಇಲ್ಲಿ ಅವರು ಪರಿಶ್ರಮ
ಹಾಗೂ ಪ್ರಾಮಾಣಿಕತೆಯಿಂದ ದುಡಿದರೆ ಸತ#ಲದೊಂದಿಗೆ ಯಶಸ್ಸು ಲಭಿಸಲಿದೆ ಎಂದು ಉಡುಪಿ ಧರ್ಮ
ಪ್ರಾಂತದ ಬಿಷಪ್‌ ರೈ| ರೆ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಕ್ರೈಸ್ತ ಉದ್ಯಮಿಗಳಿಗೆ ಕರೆ ನೀಡಿದರು. 

Advertisement

ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ರವಿವಾರ ನಡೆದ ಕರಾವಳಿ ಕ್ರಿಶ್ಚಿಯನ್‌ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ , ಕೆಥೋಲಿಕ್‌ ಸಭೆ ಉಡುಪಿ ಪ್ರದೇಶ್‌ ಆಯೋಜಿಸಿದ ಪ್ರೇರಣ-ಕ್ರೈಸ್ತ ಉದ್ಯಮಿಗಳ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕರಾವಳಿ ಕ್ರಿಶ್ಚಿಯನ್‌ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಅಧ್ಯಕ್ಷ ಡಾ| ಜೆರಿ ವಿನ್ಸೆಂಟ್‌ ಡಾಯಸ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎಂಸಿಸಿ ಬ್ಯಾಂಕಿನ ಚೇರ್‌ಮನ್‌ ಅನಿಲ್‌ ಲೋಬೊ ದಿಕ್ಸೂಚಿ ಭಾಷಣಗೈದರು.
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಆದಾಯ ತೆರಿಗೆ ಇಲಾಖೆ ಉಡುಪಿಯ ಜಂಟಿ ನಿರ್ದೇಶಕ ಎ.ಇ.ಎಫ್. ದುಕೊರಿಯ, ಮಂಗಳೂರಿನ ಆದಾಯ ತೆರಿಗೆ ಅಧಿಕಾರಿ ನತಾಲಿಯಾ ಹೆಲೆನ್‌ ಲೋಬೊ, ಜಿಲ್ಲಾ ಸಣ್ಣ ಕೈಗಾರಿಕೆ ಸಂಘಟನೆ ಅಧ್ಯಕ್ಷ ಐ.ಆರ್‌. ಫೆರ್ನಾಂಡಿಸ್‌, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಾಲ್ಟರ್‌ ಸಾಲ್ಡಾನ ಉಪಸ್ಥಿತರಿದ್ದರು.

ಸಮ್ಮಾನ-ಪ್ರಶಸ್ತಿ ಪ್ರದಾನ   
ಸಮಾಜ ಸೇವಕ, ಹ್ಯೂಮ್ಯಾನಿಟಿ ಸಂಸ್ಥೆಯ ಅಧ್ಯಕ್ಷ ರೋಶನ್‌ ಬೆಳ್ಮಣ್‌ ಅವರನ್ನು ಸಮ್ಮಾನಿಸಲಾಯಿತು. ಜೋಯಲ್‌ ವಿವಿಯನ್‌ ಮಥಾಯಸ್‌ ಕಾರ್ಕಳ ಅವರಿಗೆ “ಪ್ರೇರಣ-ಯುವ ಉದ್ಯಮಿ’, ಶರ್ಮಿಳಾ ಬಥೆಲ್ಲೊ ಕುಂದಾಪುರ ಅವರಿಗೆ “ಪ್ರೇರಣ-ಮಹಿಳಾ ಉದ್ಯಮಿ’, ಜೋನ್‌ ಆರ್‌. ಡಿ’ಸಿಲ್ವಾ  ಕಾರ್ಕಳ ಅವರಿಗೆ “ಪ್ರೇರಣ-ಉದ್ಯಮಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

 ಕೆಥೋಲಿಕ್‌ ಸಭೆ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಸ್ವಾಗತಿಸಿದರು. ಲಾರÕನ್‌ ಡಿ’ಸೋಜಾ ನಿರೂಪಿಸಿ, ಡೊಲ್ಪಿ ಲುವಿಸ್‌ ವಂದಿಸಿದರು. ಅನಿಲ್‌ ಡೇ’ಸಾ ಮತ್ತು ಬಳಗದವರಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next