Advertisement

ಪರಿಣಾಮಕಾರಿಯಾಗಿದೆ ಸುಧಾರಿತ ಗಸ್ತು ವ್ಯವಸ್ಥೆ

04:48 PM Jul 07, 2017 | |

ಹುಕ್ಕೇರಿ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳನ್ನು ತಡೆಯುವುದರ ಜತೆಗೆ ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಸುಧಾರಿತ ಗಸ್ತು ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಗೋಕಾಕ ಡಿಎಸ್ಪಿ ಈ.ಎಸ್‌. ವೀರಭದ್ರಪ್ಪ ಹೇಳಿದರು. 

Advertisement

ಪಟ್ಟಣದ ವಿಶ್ವರಾಜ ಭವನದಲ್ಲಿ ಗುರುವಾರ ಸಂಜೆ ಹುಕ್ಕೇರಿ ಪೊಲೀಸ್‌ ಠಾಣೆ ಏರ್ಪಡಿಸಿದ್ದ ಸುಧಾರಿತ ಗಸ್ತು ವ್ಯವಸ್ಥೆ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. 

ಮಹಿಳೆ ಮತ್ತು ಮಕ್ಕಳ ರಕ್ಷಣೆ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ದಿಸೆಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆ ಸಾಕಷ್ಟು ಪರಿಣಾಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. 

2015 ರಲ್ಲಿ ಈ ಸುಧಾರಿತ ಬೀಟ್‌ ವ್ಯವಸ್ಥೆಯ ರೂಪರೇಷೆ ಸಿದ್ಧಪಡಿಸಲಾಯಿತು. ಬಳಿಕ 2016 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಈ ವ್ಯವಸ್ಥೆ 2017 ರಲ್ಲಿ ಇಡೀ ರಾಜ್ಯದ ಎಲ್ಲ ಜಿಲ್ಲೆಗಳೂ ವಿಸ್ತರಣೆಯಾಗಿದೆ. ಈ ವ್ಯವಸ್ಥೆ ಮಾದರಿಯಾಗಿದ್ದು ಅನ್ಯ ರಾಜ್ಯಗಳೂ ಈ ರೀತಿಯ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಿವೆ ಎಂದು ಅವರು ಹೇಳಿದರು. 

ಸಿಪಿಐ ಸಂದೀಪ ಮುರಗೋಡ, ಪಿಎಸ್‌ ಐಗಳಾದ ರವಿ ಯಡವನ್ನವರ, ಬಾಳಪ್ಪಾ ತಳವಾರ, ಮುಖಂಡರಾದ ಉದಯ ಹುಕ್ಕೇರಿ, ಗುರು ಕುಲಕರ್ಣಿ, ಅಶೋಕ ಅಂಕಲಗಿ, ಎಸ್‌. ಕೆ.ಮಕಾನದಾರ, ಪ್ರಕಾಶ ದೇಶಪಾಂಡೆ, ಬಸವರಾಜ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next