Advertisement

ಅನಾಥರ ಶೈಕ್ಷಣಿಕ ದತ್ತು: ಕಲ್ಗದ್ದೆ

12:44 PM Mar 13, 2022 | Team Udayavani |

ಗುರಮಠಕಲ್‌: ಮಾದ್ವಾರ ಗ್ರಾಮದ ಇಬ್ಬರು ಅನಾಥ ಮಕ್ಕಳನ್ನು ಶೈಕ್ಷಣಿಕ ವಿಚಾರದಲ್ಲಿ ಕರ್ನಾಟಕ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದ್ದೆ ದತ್ತು ಪಡೆದಿದ್ದಾರೆ.

Advertisement

ಇಬ್ಬರು ವಿದ್ಯಾರ್ಥಿಗಳು ಚಿಕ್ಕವರಾಗಿದ್ದಾಗಲೇ ಪೋಷಕರನ್ನು ಕಳೆದುಕೊಂಡು ಮನೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದ ಕಲ್ಗದ್ದೆ, ಈ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚ ಭರಿಸುವುದಾಗಿ ಹಾಗೂ ಇವರಿಬ್ಬರ ವಿದ್ಯಾಭ್ಯಾಸ ಪೂರ್ಣಗೊಳ್ಳುವವರೆಗೂ ಶೈಕ್ಷಣಿಕವಾಗಿ ದತ್ತು ಪಡೆಯುವುದಾಗಿ ತಿಳಿಸಿದ್ದಾರೆ.

ವಿಶ್ವಮಾನವ ಫೌಂಡೇಶನ್‌ ಸಂಸ್ಥಾಪಕಿ ಚಂದ್ರಾವತಿ ಈ ಇಬ್ಬರು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಶ್ವಮಾನವ ಫೌಂಡೇಶನ್‌ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

ಗುರುಮಠಕಲ್‌ ತಾಲೂಕಿನ ಯಲಸತ್ತಿ, ಕೊಂಕಲ, ಚೆಲೇರಿ ಗ್ರಾಮಗಳಿಗೆ ಭೇಟಿ ನೀಡಿ ಹಿಂದುಳಿದ ಜಾತಿಗಳ ಜನರ ಅಹವಾಲು ಸ್ವೀಕರಿಸಿ ಕುಂದು ಕೊರತೆ ವಿಚಾರಿಸಿದರು.

ಚಲೇರಿ ಗ್ರಾಮದ ಬಹುದಿನಗಳ ಸಮಸ್ಯೆಯಾದ ಗಡಿ ಒತ್ತುವರಿ ಮತ್ತು ದೌರ್ಜನ್ಯದಿಂದ ತೆಲಂಗಾಣದವರು ಅಕ್ರಮ ಮರಳು ಸಾಗಾಣಿಕೆ ನಿಲ್ಲಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇದಕ್ಕೆ ಸಂಬಂಧಿಸಿದ ಉಸ್ತುವಾರಿ ಸಚಿವರು ಹಾಗೂ ಅಧಿ ಕಾರಿಗಳ ಜೊತೆಯಲ್ಲಿ ಮನವಿ ಮಾಡುತ್ತೇನೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಎಂದರು.

Advertisement

ಈ ವೇಳೆ ವ್ಯವಸ್ಥಾಪಕ ಪ್ರಕಾಶ ಮೊಗವೀರ, ಅಶ್ವಿ‌ತ್‌ ಪೂಜಾರಿ ಉಪ್ಪಳ, ಶಂಕರ ಕಂದಕೂರ, ಶ್ರೀನಿವಾಸಗೌಡ ನಂದೆಪಲ್ಲಿ, ಶ್ರೀನಿವಾಸ ಕೇಶ್ವಾರ, ಶಿವಶಂಕರ ಯಲಸತ್ತಿ, ಜಲ್ಲಪ್ಪ ಚಿಂತನಹಳ್ಳಿ, ಪ್ರಭುಲಿಂಗ ಗೊಂದೆಡಗಿ, ಆಂಜನೇಯ ಕಟ್ಟಿಮನಿ ರಾಂಪೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next