Advertisement

ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥ

03:06 PM Jan 09, 2022 | Team Udayavani |

ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥಬೀದರ: ಉತ್ತಮ ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮಾನವೀಯ ಮೌಲ್ಯಗಳಲ್ಲಿ ಅಡಗಿದೆ. ಮನಸ್ಸು ಮಲ್ಲಿಗೆಯಾದರೆ ಮಾತಲ್ಲಿ ಪರಿಮಳ ಬರುತ್ತದೆ. ವಿದ್ಯಾರ್ಥಿಗಳ ಮನಸ್ಸು ಮಲ್ಲಿಗೆಯಂತಾಗಿರಲಿ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಿಲ್ಪಾ ಬಹೇನ್‌ ಹೇಳಿದರು.

Advertisement

ನಗರದ ಸಿದ್ದಾರ್ಥ ಪದವಿ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವ ನಿಮಿತ್ತ ಆಯೋಜಿಸಿದ್ದ “ಶಿಕ್ಷಣದಲ್ಲಿ ಮೌಲ್ಯಗಳು’ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಮೋಸ ವಂಚನೆ, ಅನ್ಯಾಯ ಅತ್ಯಾಚಾರಗಳಂತಹ ಅಮಾನವೀಯ ಕೃತ್ಯಗಳು ಉನ್ನತ ಶಿಕ್ಷಣ ಪಡೆದವರಿಂದಲೇ ನಡೆಯುತ್ತಿವೆ. ಅವರಲ್ಲಿನ ಉತ್ತಮ ಶಿಕ್ಷಣ ಮೌಲ್ಯಗಳ ಬಗೆಗಿನ ತಿಳಿವಳಿಕೆಯ ಕೊರತೆಯೇ ಕಾರಣ. ಹಾಗಾಗಿ ಆತ್ಮವಿಶ್ವಾಸ, ಧೈರ್ಯ, ಸವಿನಯತೆ, ವಿದ್ಯೆ, ಪ್ರಮಾಣಿಕತೆ, ಮಧುರವಾದ ಮಾತುಗಳಂಥ ಉತ್ತಮ ಶಿಕ್ಷಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಹುರುದೇವಿ ಅಕ್ಕ ಮಾತನಾಡಿ, ಜೀವನ ಸಾರ್ಥಕತೆಗೆ ಉತ್ತಮ ಮೌಲ್ಯಗಳ ಅವಶ್ಯಕತೆ ಇದೆ ಎಂದರು. ಪ್ರಾಚಾರ್ಯ ಪ್ರೊ| ವಿಜಯಕುಮಾರ ದೊಡ್ಡಗಾಣಿಗೇರ್‌ ಅಧ್ಯಕ್ಷತೆ ವಹಿಸಿ, ಜೀವನ ಮೌಲ್ಯ, ಮಾನವೀಯ ಮೌಲ್ಯಗಳು ಹಾಗೂ ಶಿಕ್ಷಣ ಮೌಲ್ಯಗಳು ಅವಿಭಾಜ್ಯಗಳಾಗಿವೆ. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಗುರಿ, ಸಾ ಧಿಸುವ ಛಲ, ಪ್ರಮಾಣಿಕ ಮತ್ತು ನಿರಂತರ ಪ್ರಯತ್ನ, ದೃಢವಾದ ಭಕ್ತಿ ಇವುಗಳಿದ್ದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎಂದು ಹೇಳಿದರು.

ಸಾಂಸ್ಕೃತಿಕ ವಿಭಾಗದ ಸಂಯೋಜಕ ಪ್ರೊ| ರಾಜಕುಮಾರ ಸಿಂಧೆ ಸ್ವಾಗತಿಸಿದರು. ಪ್ರೊ  ಬಸವರಾಜ ಸ್ವಾಮಿ ನಿರೂಪಿಸಿದರು. ಪ್ರೊ| ಗೋಪಾಲ ಬಡಿಗೇರ್‌ ವಂದಿಸಿದರು. ಕಾಲೇಜಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next