Advertisement

ಮಠಗಳಿಂದ ಶಿಕ್ಷಣ ಕ್ರಾಂತಿ: ಶ್ರೀರಾಮುಲು

12:37 PM Feb 03, 2020 | Suhan S |

ಖಾನಾಪುರ: ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ಕರ್ನಾಟಕದ ಮಠಗಳು ಶಿಕ್ಷಣ, ಸಾಮಾಜಿಕ, ಕಾರ್ಯಗಳನ್ನು ಮಾಡುತ್ತಿವೆ ಎಂದು ಸಚಿವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ರವಿವಾರ ನಡೆದ ಬ್ರಹ್ಮಲೀನ ಸದಾಶಿವಾನಂದ ಮಹಾಸ್ವಾಮೀಜಿ 10ನೇ ಪುಣ್ಯಸ್ಮರಣೆ ದಶಮಾನೋತ್ಸವದ ಅಂಗವಾಗಿ ಅಖೀಲ ಕರ್ನಾಟಕ 40ನೇ ಬೃಹತ್‌ ವೇದಾಂತ ಪರಿಷತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಎಲ್ಲ ಧರ್ಮಗಳು ಒಂದೇ ಎನ್ನುವ ತತ್ವಗಳನ್ನು ಸಾರುತ್ತಿವೆ. ಸತ್ಯ ಮತ್ತು ಧರ್ಮಗಳು ನಮ್ಮ ಜೊತೆ ಶಾಶ್ವತವಾಗಿ ಬರಬೇಕು. ಮಠ ಮಾನ್ಯಗಳು ಸರಕಾರ ಮಾಡದ ಜನಪರ ಕಾರ್ಯಗಳನ್ನು ಮಾಡುತ್ತಿವೆ ಎಂದರು. ಬಂಗಾರಮಕ್ಕಿಯ ವೀರಾಂಜನೇಯ ಕ್ಷೇತ್ರದ ಮಾರುತಿ ಗುರೂಜಿ, ಆರೂಢ ಮಠದ ಶಿವಪುತ್ರ ಶ್ರೀಗಳು, ಜೋಡಕುರಳಿ ಸಿದ್ಧಾರೂಢ ಮಠದ ಚಿದ್ಗನಾನಂದ ಶ್ರೀಗಳು, ಬಿಜೆಪಿ ಮುಖಂಡರಾದ ವಿಠಲ ಹಲಗೇಕರ, ಬಾಬಣ್ಣ ಪಾಟೀಲ, ತಾಪಂ ಸದಸ್ಯ ಶ್ರೀಕಾಂತ ಇಟಗಿ, ಮಾಜಿ ತಾಪಂ ಸದಸ್ಯ ಮಲ್ಲಪ್ಪ ಮಾರಿಹಾಳ, ಜಿಲ್ಲಾ ಆರೋಗ್ಯಾಧಿಕಾರಿ ವಿ.ಎಸ್‌.ಮುನಿಹಾಳ ಸೇರಿದಂತೆ ಇತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next