ಮೈಸೂರು: ಧರ್ಮ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ. ಕಲ್ಪನೆ ಆಧಾರಿತ ವಿದ್ಯೆ ಕಲಿಸಲು ಮುಂದಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ಸಮತಿಯ ಬಹುತೇಕರು ಆರ್ ಎಸ್ಎಸ್ ನವರು. ಭಾರತದ ವಿವಿಧತೆಗೆ ಧ್ವನಿಯಾಗಬಲ್ಲ ಸದಸ್ಯರ ನೇಮಕವಾಗಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಕೈಬಿಡಲಾಗಿದೆ. ಬದಲಿಗೆ 12ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನ ಕುಲಕಸುಬುಗಳಿಗೆ ಮರಳಿಸುವ ಷಡ್ಯಂತ್ರ. ಪ್ರಾಚೀನ ಸಂಸ್ಕೃತಿಗೆ, ಸಂಸ್ಕೃತ ಭಾಷೆ ಕಲಿಕೆಗೆ ಅನಗತ್ಯವಾಗಿ ಒತ್ತುನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ:ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!
ರಾಷ್ಟ್ರೀಯ ಶಿಕ್ಷಣ ನೀತಿ 20210 ರಾಜ್ಯಕ್ಕೆ ಮಾರಕವಾಗಲಿದೆ. ಆತುರಾತುರವಾಗಿ ಜಾರಿಗೊಳಿಸಲು ಮುಂದಾಗಿದೆ. ಇದು ಹಿಮ್ಮುಖವಾಗಿ ತೆಗೆದುಕೊಂಡು ಹೋಗುತ್ತದೆ. ಇದು ಯೋಜನಾ ಬದ್ದವಾಗಿಲ್ಲ ಕೇಸರೀಕರಣಗೊಂಡಿದೆ. ಯಾವುದೇ ಚರ್ಚೆ ಆಗದೆ ಕೂಡಲೇ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಅದರಲ್ಲೂ ಕರ್ನಾಟಕದಲ್ಲೇ ಮೊದಲು ಜಾರಿಗೊಳಿಸಲು ಮುಂದಾಗಿದ್ದಾರೆ. ಮೊದಲು ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪುರಾಣ ಕಲ್ಪನೆ ಆಧಾರದಲ್ಲಿ ರೂಪಿಸಲು ಸಾಧ್ಯವಿಲ್ಲ ಎಂದು ಆರ್ ಧ್ರುವನಾರಾಯಣ್ ಹೇಳಿದರು