ಶಿರಸಿ: ಮಕ್ಕಳನ್ನು ಶಾಲೆಗೆ ಸೇರಿಸುವದು ಮುಖ್ಯವಲ್ಲ. ಪಾಲಕರು ನಿತ್ಯ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಶಿರಸಿಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಒಂದು ದಿನ ಶಾಲೆಗೆ ಮಗು ರಜೆ ಮಾಡಿದರೆ ಮತ್ತೆ ಆ ದಿನ ಮಕ್ಕಳಿಗೆ ಸಿಗುವದಿಲ್ಲ. ಶಾಲೆಯಲ್ಲಿ ಎಲ್ಲ ಮೂಲಭೂತ ಸೌಲಭ್ಯ ನೀಡುತ್ತಿದ್ದೇವೆ. ಶಾಲೆಗಳಿರುವ ಸಮಯದಲ್ಲಿ ಮಕ್ಕಳನ್ನು ಪಾಲಕರು ನೆಂಟರಿಷ್ಟರ ಮನೆಗೆ ಕರೆದೋಯ್ದರೆ ಆ ಮಗುವಿನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ವಿವರಿಸಿದರು.
ಶಾಲೆಗೆ ಮಗು ಬಂದರೆ ಶಾಲೆಗೂ, ಇಲಾಖೆಗೂ, ಸರಕಾರಕ್ಕೂ ಗೌರವ. ನಮ್ಮ ಮಕ್ಕಳು ದೇಶದ ಭವಿಷ್ಯ ಎಂದ ಸಚಿವರು, ಪ್ರತಿಭಾ ಕಾರಂಜಿಗೆ ಕೊಡುವ ಹಣ ಕಡಿಮೆ ಇದ್ದು ಅದನ್ನು ಹೆಚ್ಚಿಸುವ ಕಾರ್ಯ ಮಾಡಲು ಚಿಂತಿಸಿದ್ದೇವೆ. ವಿಧಾನ ಸಭಾ ಕ್ಷೇತ್ರಕ್ಕೆ ತಕ್ಷಣ ಐದಾರು ಪಬ್ಲಿಕ್ ಶಾಲೆ ಕೊಡುವ ಕಾರ್ಯ ಮಾಡಲಿದ್ದೇವೆ. ಪಬ್ಲಿಕ್ ಶಾಲೆಯಲ್ಲಿ ಕ್ರೀಡೆ, ಕಲಾ ಶಿಕ್ಷಕರೂ ಸಿಗಲಿದ್ದಾರೆ. ಮುಂದಿನ ವರ್ಷದಿಂದ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ ನೀಡುವ ತರಗತಿಯನ್ನೂ ವಾರಕ್ಕೊಮ್ಮೆ ನೀಡಲಿದ್ದೇವೆ ಎಂದರು.
ಶಾಸಕ ಭೀಮಣ್ಣ ನಾಯ್ಕ, ಎಸಿ ಕಾವ್ಯರಾಣಿ, ಡಿಡಿಪಿಐ ಬಸವರಾಜ್ ಪಿ, ಬಿಇಓ ನಾಗರಾಜ ನಾಯ್ಕ, ತಹಸೀಲ್ದಾರ ಶ್ರೀಧರ ಮುಂದಲಮನಿ ಇತರರು ಇದ್ದರು.
ಇದನ್ನೂ ಓದಿ: Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು