Advertisement

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

04:08 PM Jan 15, 2025 | Team Udayavani |

ಮಾನವ ಪ್ರಜ್ಞಾವಂತ ನಾಗರಿಕನಾಗಿ ಬಾಳಲು ಮೊದಲು ಅಕ್ಷರಸ್ಥನಾಗಬೇಕು. ಇದಕ್ಕಾಗಿಯೇ ಶಿಕ್ಷಣ ಎಲ್ಲರೂ ಜನ್ಮಸಿದ್ಧ ಹಕ್ಕು ಎಂಬ ಕಾನೂನು ಜಾರಿಯಲ್ಲಿದೆ. ಕಲಿಯುವ ಸಮಯದಲ್ಲಿ ಕಲಿಯಬೇಕು ಆಟವಾಡುವ ಸಮಯದಲ್ಲಿ ಆಡಬೇಕು ಎನ್ನುವುದು ನಿಜ. ಕಲಿಯುವ ಮನಸಿದ್ದರೆ ಎಂತಹ ಕಷ್ಟದಲ್ಲು ಸಹ ಕಲಿಯುತ್ತಾನೆ, ಅದೇ ಉದಾಸೀನತೆ ತೋರುವವರು ಕಾರಣಗಳನ್ನು ಹುಡುಕುತ್ತಾ ಕೂರುತ್ತಾರೆ.

Advertisement

ಮೊದಲು ಶಿಕ್ಷಣ ಕ್ಷೇತ್ರದಲ್ಲಿ ಕಠಿನ ನಿಯಮಗಳಿತ್ತು. ಒಂದನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಗೊಳಿಸಲು ಅವಕಾಶವಿತ್ತು. ಆದರೆ ಸಮಯ ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲೂ ಅನೇಕ ಕ್ರಾಂತಿ, ಅಭಿವೃದ್ಧಿ, ಬದಲಾವಣೆಗಳು ಆಗುತ್ತಿರುವುದನ್ನು ಕಾಣಬಹುದು. ಹಿಂದಿನ ಕಾಲದಲ್ಲಿ ಎಷ್ಟೋ ಕಷ್ಟಗಳನ್ನು ಕಂಡು, ಊಟಕ್ಕೆ ಗತಿ ಇಲ್ಲದೆ ಪರದಾಡಿ, ಎÇÉೆಲ್ಲೂ ಕೆಲಸ ಮಾಡಿ ಒಂದು ಚಿಕ್ಕ ಮೊತ್ತವನ್ನು ಸಂಪಾದನೆ ಮಾಡಿ ಓದಿದ ಅದೆಷ್ಟೋ ವ್ಯಕ್ತಿಗಳ ಬಾಳನ್ನು ಶಿಕ್ಷಣವು ನಂದಾದೀಪವಾಗಿ ಬೆಳಗಿದ ಸಾಕಷ್ಟು ಉದಾಹರಣೆಯನ್ನು ನಾವು ನೋಡಬಹುದು.

ಮನುಷ್ಯ ಬದಲಾಗುವುದಿದ್ದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಆದರಿಂದ ಹುಟ್ಟಿದ ಮಗುವಿಗೆ ಮೊದಲ ಆದ್ಯತೆ ಉತ್ತಮ ಶಿಕ್ಷಣ ಕೊಡಿಸುವುದಾಗಿರಲಿ. ಇಂದಿನ ಆಧುನಿಕ ಯುಗದಲ್ಲಿ ಭಾರತದಲ್ಲಿರುವ ಯುವ ಪೀಳಿಗೆ ಅಕ್ಷರಸ್ಥರಾಗಲಿ ಎನ್ನುವ ಉದ್ದೇಶದೊಂದಿಗೆ ಅದೆಷ್ಟೋ ಹೊಸ ಹೊಸ ಯೋಜನೆಗಳು, ನಲಿ ಕಲಿ ಪದ್ಧತಿ, ಮಕ್ಕಳಿಗೆ ತಿನ್ನಲು ಮೊಟ್ಟೆ, ಕುಡಿಯಲು ಹಾಲು, ಚಿಕ್ಕಿ, ವಿದ್ಯಾರ್ಥಿ ವೇತನ, ಹಾಗೇ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆ ತರಲು ಮೀನ ತಂಡ, ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಲು ತರಗತಿ ಕೊಠಡಿಗಳ ಅಭಿವೃದ್ಧಿ, ಉಚಿತ ಚಪ್ಪಲಿ, ಕಲಿಯದಿದ್ದರು ಒಂದರಿಂದ ಹತ್ತನೇ ತರಗತಿವರೆಗೆ ಉತ್ತೀರ್ಣ, ಉಚಿತ ಪುಸ್ತಕ ಎಜ್ಯುಸ್ಯಾಟ್‌ ಯೋಜನೆ , ಇಂತಹ ಅದೆಷ್ಟೋ ಸೌಲಭ್ಯಗಳು ಸರಕಾರದಿಂದ ಸಿಗುವಾಗ ಏಕೆ ಯುವ ಜನತೆ ಶಿಕ್ಷಣದಿಂದ ವಂಚಿತರಾಗಬೇಕು ಎನ್ನುವುದು ನನ್ನ ಪ್ರಶ್ನೆ?.

ಎಲ್ಲರಿಗೂ ಸಮಾನ ಹಾಗೂ ಉಚಿತ ಶಿಕ್ಷಣ ಎನ್ನುವ ಕಾನೂನಿನ ಅಡಿಯಲ್ಲಿ ಸರಕಾರ ಶಿಕ್ಷಣಕ್ಕೆ ಬೇಕಾಗುವಂತಹ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬರುತ್ತಿದೆ. ಹಿಂದಿನ ಕಾಲದಲ್ಲಿ ಕಲಿಯಲು ಮನಸಿದ್ದರು ಆರ್ಥಿಕ ಕಷ್ಟದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಕಲಿಯುವ ಮನಸಿದ್ದರು ಕಲಿಯಲಾಗದೆ ಸಾಕಷ್ಟು ಜನ ಏಳನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿ ಕುಲ ವೃತ್ತಿಯನ್ನು ಕಲಿತು ಜೀವನ ನಡೆಸುತಿದ್ದರೆಂದ ಮಾತ್ರಕ್ಕೆ ಅದೆ ಕೆಲಸವನ್ನು ನಾವು ಕಲಿತು ಬಾಳುತ್ತೇವೆ ಎನ್ನುವುದಿದ್ದರೆ ಅದು ಅಕ್ಷರಶಃ ಸುಳ್ಳು. ಏಕೆಂದರೆ ಈಗ ನೋಟಿನ ಹಣಕ್ಕಿರುವಷ್ಟು ಬೆಲೆ ಚಿಲ್ಲರೆಗಿಲ್ಲ. ಒಂದು ಅಂಗಡಿಗೆ ಹೋದರೆ 500 ರೂ. ಇದ್ದರು ಒಂದು ಚೀಲ ದಿನಸಿ ಸಾಮಾನು ಸಿಗುವುದಿಲ್ಲ. ಅದಕ್ಕೆ ನಾವು ಹೇಗಿರಬೇಕು ಎಂದರೆ ಟಂಕಿಸುವ ನಾಣ್ಯಗಳಗಾದೆ ಎಣಿಸುವಂತಹ ನೋಟುಗಳಾಗಬೇಕು.

ಆದ್ದರಿಂದ ಯುವ ಜನತೆ ಶಿಕ್ಷಣದಿಂದ ವಂಚಿತರಾಗಬೇಡಿ. ನಿಮ್ಮ ಸುಸ್ಥಿರ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಕಲಿಯುವ ಮನಸಿರುವವರಿಗೆ ಕಲಿಸುವವರು ಸಹ ಸದಾ ಜತೆಗಿರುತ್ತಾರೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಹಣಕ್ಕೆ ಬೆಲೆ ಕೊಡದೆ ಮಕ್ಕಳಲ್ಲಿ ಜ್ಞಾನ ಅಭಿವೃದ್ಧಿಯಾಗುವಂತೆ ಶ್ರಮಿಸುತ್ತಾರೆ. ಎಲ್ಲ ಶಾಲೆಗಳಲ್ಲಿ ದೊರಕುವ ಶಿಕ್ಷಣ ಸಹ ಒಂದೆ. ಆದರಿಂದ ಎಲ್ಲವು ಉಚಿತವಾಗಿ ಕೈಗೆ ಎಟಕುತ್ತಿರುವಾಗ ಶಿಕ್ಷಣವು ಸಹ ನಿಮ್ಮ ಕೈವಶವಾಗಲಿ.

Advertisement

ಶಿಕ್ಷಣದಿಂದ ವಂಚಿತರಾದರೆ ಮುಂದೆ ಬದುಕಿನಲ್ಲಿ ಎಷ್ಟು ಜಷ್ಟ ಪಡಬೇಕಾಗುತ್ತದೆ ಎಂಬುದಕ್ಕೆ ನಮ್ಮ ತಂದೆ ತಾಯಿ  ಅವರೇ ಉದಾಹರಣೆಯಾಗಿ ಕಾಣಸಿಗುತ್ತಾರೆ. ಇದೇ ಕಾರಣಕ್ಕೆ ಅಲ್ಲವೇ ಜಗತ್ತಿನ ಎಲ್ಲ ಪಾಲಕರು ಪೋಷಕರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ಕೊಡುತ್ತಿರುವುದು. ನಮ್ಮಂತೆ ನಮ್ಮ ಮಕ್ಕಳಾಗಬಾರದೆನ್ನುವುದು ಪ್ರತಿಯೊಬ್ಬ ಪಾಲಕರ ಆಸೆ. ಪಾಲಕರ ಮನಸಿಗೆ ನಿರಾಸೆ ಮಾಡದಿರಿ. ಯುವ ಪೀಳಿಗೆ ಬಾಳಿನ ಸತ್ಯವನ್ನು ಅರಿತು ಮುಂದೆ ಸಾಗಿ ದಾಗ ಭಾರತ ಸಾಕ್ಷರತೆಯತ್ತ ಸಾಗುತ್ತದೆ.

ಕಾರ್ತಿಕ್‌ ಹಂಗಾರಕಟ್ಟೆ

ಶ್ರೀ ಗೋಕರ್ಣನಾಥೇಶ್ವರ

ಶಿಕ್ಷಣ ಮಹಾ ವಿದ್ಯಾಲಯ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.