ಉಡುಪಿ: ಜೀವನದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣ ಮುಖ್ಯ. ಶಿಕ್ಷಣವಿಲ್ಲದೆ ಏನು ಸಾಧಿಸಲು ಸಾಧ್ಯವಿಲ್ಲ ಹಣ,ಆಸ್ತಿ ಬರುತ್ತದೆ ಹೋಗುತ್ತದೆ ಆದರೆ ಶಿಕ್ಷಣ ಸಾಯುವವರೆಗೆ ನಮಲ್ಲಿ ಶಾಶ್ವತವಾಗಿರುತ್ತದೆ ಎಂದು ಜಿ.ಪಂ. ಸದಸ್ಯ ಜನಾರ್ದನ್ ತೋನ್ಸೆ ಹೇಳಿದರು.
ಅವರು ಮೇ 12ರಂದು ಕೆಮ್ಮಣ್ಣು ಗುಜ್ಜರಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗಡುವಾಡು ಇದರ ವತಿಯಿಂದ ಸುಮಾರು 70 ಸಾವಿರ ರೂ ವೆಚ್ಚದಲ್ಲಿ ಉನ್ನತ ಶಿಕ್ಷಣ ಮತ್ತು 1ತರಗತಿಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಶಾಲಾ ಬ್ಯಾಗ್, ವೈದ್ಯಕೀಯ ಚಿಕಿತ್ಸೆಗಾಗಿ 1.5ಲಕ್ಷ ರೂ.ಯನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ಕೂಡ ಅಗತ್ಯ ಇದರಿಂದ ಮಾನಸಿಕ,ದೈಹಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಶಾಂತಿನೀಕೇತನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ದಿನೇಶ ಕಿಣಿ ಹೇಳಿದರು.
ಗಡುವಾಡು ಗುರಿಕಾರ ಸಂಜೀವ ಕರ್ಕೇರ ಅಧ್ಯಕ್ಷತೆ ವಹಿಸಿದರು.ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ ,ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವೆಂಕಟೇಶ ಕುಂದರ್,ನಿತ್ಯಾನಂದ ಕೆಮ್ಮಣ್ಣು, ತೋನ್ಸೆ ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರಾವ್,ಮಲ್ಪೆ ಪರ್ಸಿನ್ ಮೀನುಗಾರಿಕೆ ಸಂಘದ ಪ್ರದಾನ ಕಾರ್ಯದರ್ಶಿ ಕೃಷ್ಣ ಸುವರ್ಣ,ಗುಡ್ಮಿ ಸೆಕ್ರೆಟರಿ ಮಹಮ್ಮದೀಯ ಎಜುಕೇಶನ್ ಟ್ರಸ್ಟ್‌ನ ಇಮಿ¤ಯಾಜ್ ಹೂಡೆ, ಗಡುವಾಡು ಮಾತೃ ಮಂಡಳಿ ಅಧ್ಯಕ್ಷೆ ಶಕುಂತಳ ಹಾಗೂ ಸಮಿತಿಯ ಸದಸ್ಯರು,ಗುರಿಕಾರರು,ಹತ್ತುಸಮಸ್ತರು ಉಪಸ್ಥಿತರಿದ್ದರು.ಶಿಕ್ಷಕ ಸುಧಾಕರ ಮಾಸ್ತರ್ ಸ್ವಾಗತಿಸಿ,ವಂದಿಸಿದರು.ಶಿಕ್ಷಕ ಪ್ರಶಾಂತ್ ಶೆಟ್ಟಿ ನಿರೂಪಿಸಿದರು.