ದೋಟಿಹಾಳ: ನೇಕಾರರ ಬದುಕು ದುಸ್ಥಿತಿಯಲ್ಲಿ ಇದೆ. ಹೀಗಾಗಿ ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಹೊಂದಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಕರೆ ನೀಡಿದರು.
ಗ್ರಾಮದ ದೇವಾಂಗ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ದೇವಾಂಗ ಸಂಘ, ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ಗಾಯಿತ್ರಿ ಮಹಿಳಾ ಸಂಘ ದೋಟಿಹಾಳ ಇವರ ಸಹಯೋಗದಲ್ಲಿ ನಡೆದ ದೇವಲ ಮಹರ್ಷಿಗಳ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಘದ ರಜತ ಮಹೋತ್ಸವ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ನಮ್ಮ ಸಮಾಜದಲ್ಲಿ ಜಾತಿ ಯಾವುದೇ ಆಗಿರಲಿ ಆದರೆ ಅವರು ಸಮಾಜಕ್ಕೆ ನೀಡುವ ಕೊಡುಗೆ ಮಾತ್ರ ಮಹೊನ್ನತವಾಗಿರುತ್ತದೆ. ಅನಾದಿ ಕಾಲದಿಂದಲು ಮಗ್ಗ, ಲಾಳಿ, ಲಡಿ ಹಿಡಿದುಕೊಂಡು ಬೆಳೆಯುತ್ತಿರುವ ನಮ್ಮ ನೇಕಾರ ಮಕ್ಕಳಿಗೆ ಉನ್ನತ ಶಿಕ್ಷಣ ಎಂಬುದು ಮರೀಚಿಕೆಯಾಗಿದೆ. ಸದ್ಯ ನೇಕಾರರ ಸ್ಥಿತಿ ಚಿಂತಾಜನಕವಾಗಿದೆ. ಈಗ ನಮಗಿರುವುದು ಒಂದೇ ದಾರಿ, ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು. ಅದಕ್ಕಾಗಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಉಚಿತ ತರಬೇತಿ ನೀಡುವಂತಹ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತೆ ಭಾಗ್ಯಶ್ರೀ ರಾಮಚಂದ್ರ ಹುಗ್ಗಿ ಗಾಯಿತ್ರಿ ಮಹಿಳಾ ಸಂಘವನ್ನು ಉಧ್ಘಾಟಿಸಿದರು.
Related Articles
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ದಯಾನಂದಪುರಿ ಸಂಘದವರು ರಚನಾತ್ಮಕ ಕಾರ್ಯಗಳನ್ನು ಮಾಡುವುದರ ಮೂಲಕ ಈ ಸಂಘ ಮತ್ತು ಸಮಾಜ ತಾಲೂಕಿನಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ದಯಾನಂದಪುರಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಖಿಲ ಭಾರತ ದೇವಾಂಗ ಸಮಾಜದ ಜಗದ್ಗುರು, ಶ್ರೀ ಗಾಯಿತ್ರಿ ಪೀಠಾಧ್ಯಕ್ಷ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ನಾರಾಯಣಸ್ವಾಮಿ ದೇವಾಂಗಮಠ, ರುದ್ರಮುನಿಸ್ವಾಮಿ ದೇವಾಂಗಮಠ, ಈಶ್ವರಸ್ವಾಮಿ ದೇವಾಂಗಮಠ, ಗ್ರಾಪಂ ಅಧ್ಯಕ್ಷ ಲಕ್ಷ್ಮವ್ವ ಕುಷ್ಟಗಿ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಮಾಜಿ ತಾಪಂ ಸದಸ್ಯ ಮಹಾಂತೇಶ ಬಾದಾವಿ, ಸಂಡೂರ ಅಬಕಾರಿ ಎಸ್.ಐ ಬಸವರಾಜ ಗುಗ್ಗರಿ, ಹುನಗುಂದ ಬಿಇಓ ವೆಂಕಟೇಶ ಕೊಂಕಲ್, ಗ್ರಾಪಂ ಸದಸ್ಯರಾದ ದೇವರಾಜ ಕಟ್ಟಿಮನಿ, ಮಹೇಶ ಕಾಳಗಿ, ಲಕ್ಷ್ಮೀಬಾಯಿ ಸಕ್ರಿ, ಮುಖಂಡರಾದ ರಾಮಚಂದ್ರ ಹುಗ್ಗಿ, ಶಿವಶಂಕರ ಕರಡಕಲ್, ಹಿರೇಣ್ಯಪ್ಪ ಸಕ್ರಿ, ರಾಮನಗೌಡ ಬಿಜ್ಜಲ್, ಶಿವಪುತ್ರಪ್ಪ ಮಾಳಗಿ, ಬಾಳಪ್ಪ ಅರಳಿಕಟ್ಟಿ, ಅಮರೇಗೌಡ ಬಿಜ್ಜಲ್, ಪಂಪಾಪತಿ ಅರಳೀಕಟ್ಟಿ, ಸಮಾಜದ ಮುಖಂಡರು, ಯುವಕರು, ಮಹಿಳೆಯರು, ಗಾಯಿತ್ರಿ ಮಹಿಳಾ ಸಂಘದವರು ಮತ್ತು ದಯಾನಂದಪುರಿ ಸಂಘದ ಸದಸ್ಯರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿರ‍್ದಿದರು.
ಶಿಕ್ಷಕ ಉಮಾಪತಿ ಮಾಳಗಿಯವರು ನಿರೂಪಿಸಿ, ನಾಗರಾಜ ಕಾಳಗಿ ವಂದಿಸಿದರು.