Advertisement

ಬಡತನ ನಿರ್ಮೂಲನೆಗೆ ಶಿಕ್ಷಣ ಅಗತ್ಯ : ಪ್ರೊ|ಪಿ.ಎಲ್‌. ಧರ್ಮ

08:01 PM Mar 08, 2020 | Sriram |

ಮಡಿಕೇರಿ: ಬಡತನವನ್ನು ಮೀರಿ ಜೀವನದಲ್ಲಿ ಸಾಧನೆ ಮಾಡಿ ಗುರಿ ತಲುಪಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಶಾಂತಿ, ಪ್ರೀತಿಯಿಂದ ಎಲ್ಲರನ್ನು, ಎಲ್ಲಾ ಧರ್ಮ ಸಮುದಾಯಗಳನ್ನು ಗೌರವಿಸುವ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಇರಬೇಕು. ಸಮಾಜದಲ್ಲಿ ಸಮುದಾಯ ಮತ್ತು ಜನರ ಹೃದಯಗಳನ್ನು ಕಟ್ಟುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಪ್ರೊ| ಪಿ.ಎಲ್‌.ಧರ್ಮ ಅವರು ಹೇಳಿದ್ದಾರೆ.

Advertisement

ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ನಡೆದ 71ನೇ ವರ್ಷದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮುದಾಯ ಮತ್ತು ಜನರ ಹೃದಯಗಳನ್ನು ಕಟ್ಟುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಸಿಗ¾ ನೆಟ್‌ವರ್ಕ್ಸ್ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಅವರೆಮಾದಂಡ ಶರಣ್‌ ಪೂಣಚ್ಚ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಫೀ| ಮಾ| ಕಾರ್ಯಪ್ಪ ಕಾಲೇಜು ಸಾಕಷ್ಟು ನೀಡಿದೆ. ವಿದ್ಯಾರ್ಜನೆಗೆ ಅಗತ್ಯವಾದ ವಾತಾವರಣ ಕಾಲೇಜಿನಲ್ಲಿದೆ. ಇವೆಲ್ಲವನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಮುಂದಿನ ಪೀಳಿಗೆಗೆ ಕಾಲೇಜನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರದ ಜಗತ್‌ ತಿಮ್ಮಯ್ಯ ಅವರು, ಕಾಲೇಜಿನ ವಿದ್ಯಾಭ್ಯಾಸ ಮುಗಿಸಿದ ನಂತರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಕಾಲೇಜು ಶಿಸ್ತಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಸಿಗ¾ ನೆಟ್‌ವರ್ಕ್ಸ್ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಅವರೆಮಾದಂಡ ಶರಣ್‌ ಪೂಣಚ್ಚ ಅವರು ಕಾಲೇಜಿಗೆ ಲ್ಯಾಪ್‌ಟಾಪ್‌ ಕೊಡುಗೆಯಾಗಿ ನೀಡಿದರು. ಪಠ್ಯ ವಿಷಯಗಳಲ್ಲಿ, ಕ್ರೀಡೆ ಮತ್ತು ಎನ್‌.ಸಿ.ಸಿ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕಗಳನ್ನು ಪ್ರಧಾನ ಮಾಡಲಾಯಿತು. ವಿವಿಧ ವಿಭಾಗಗಳ ದತ್ತಿ ಬಹುಮಾನವನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.

Advertisement

ವಿದ್ಯಾರ್ಥಿ ಸಂಘದ ಅಧ್ಯಕ್ಷ‌ ಪ್ರತೀಕ್‌ ಶೆಟ್ಟಿ ಬಿ.ಎಸ್‌., ಕಾರ್ಯದರ್ಶಿಗಳಾದ ಲಿಶಾಲ್‌ ಬೆನ್ನಿ, ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ್‌ ಪಿ.ಆರ್‌, ಸುಚಿತ್‌ ಟಿ.ಆರ್‌., ಅಜಿತ್‌ ಎಂ.ಎಸ್‌. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕರಾದ ಮೇ| ರಾಘವ್‌ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ| ಈ ತಿಪ್ಪೇಸ್ವಾಮಿ ಅವರು 2019-20 ನೇ ಸಾಲಿನ ಕಾಲೇಜಿನ ವಾರ್ಷಿಕ ವಿವರಗಳನ್ನು ಓದಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಮೊನಿಷ ಜಿ ಅವರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಲೀನಾ ಕೆ.ಎಲ್‌ ವಂದಿಸಿದರು.

ವಿದ್ಯಾರ್ಥಿಯಾಗಿದ್ದೆ
34 ವರ್ಷದ ಹಿಂದೆ ಇದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಇಂದು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಸಂತಸ ತಂದಿದೆ. ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಸಾರ್ವಜನಿಕರು ಬಾಹ್ಯವಾಗಿ ಕಾಲೇಜನ್ನು ಗಮನಿಸುತ್ತಿರುತ್ತಾರೆ. ಪರಂಪರೆ ಯನ್ನು ಉಳಿಸಿ ಬೆಳೆಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಪ್ರೊ| ಪಿ.ಎಲ್‌.ಧರ್ಮ ಹೇಳಿದರು. ವೃತ್ತಿಗಳಲ್ಲಿ ಮೇಲು ಕೀಳು ಎಂಬುದಿಲ್ಲ ಎಂದರು.

ಎಲ್ಲ ವೃತ್ತಿಗಳನ್ನೂ ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತರಗತಿಯಲ್ಲಿ ಬಹಳ ಕುತೂಹಲದಿಂದ ಪಾಠ ಪ್ರವಚನಗಳನ್ನು ಕೇಳಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಇರಬೇಕು. ಇಲ್ಲದಿದ್ದರೆ. ಸಾಧನೆಯ ಹಾದಿ ಕಠಿನವಾಗಿರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next