Advertisement

ಶಿಕ್ಷಣ -ನೀರಾವರಿಗೆ ಮೊದಲಾದ್ಯತೆ: ಆಚಾರ್‌

05:12 PM Nov 23, 2022 | Team Udayavani |

ಯಲಬುರ್ಗಾ: ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ತಮ್ಮ ಮತವನ್ನು ಪಡೆಯುವಾಗ ಶಿಕ್ಷಣ,ನೀರಾವರಿ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದೆ, ಅದೇ ರೀತಿ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಎರಡಕ್ಕೂ ಪ್ರಮುಖ ಆದ್ಯತೆ ನೀಡಿರುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಯಲಬುರ್ಗಾ ಪಟ್ಟಣಕ್ಕೆ ಪ್ರತ್ಯೇಕ ಮಹಿಳಾ ಪಪೂ ಕಾಲೇಜು ಮಂಜೂರು ಮಾಡಿಸಿರುವೆ. ಕುಕನೂರು ಪಟ್ಟಣದಲ್ಲಿ ಇದುವರೆಗೂ ಒಂದು ಸರಕಾರಿ ಕಾಲೇಜುಗಳು ಇರಲಿಲ್ಲ. ಅಲ್ಲಿಯೂ ಒಂದು ಕಾಲೇಜು ಮಂಜೂರು ಮಾಡಿಸಿದ್ದೇನೆ. ಯಲಬುರ್ಗಾ ಪಿಜಿ ಸೆಂಟರ್‌ಗೆ ಸುಸ್ಸಜ್ಜಿತ ಜಾಗ ಹುಡುಕಿ ಕಟ್ಟಡ ನಿರ್ಮಿಸಿ ರಸ್ತೆಯನ್ನು ಸಹ ಮಾಡಲಾಗಿದೆ. ಗ್ರಾಮದ ಪ್ರೌಢಶಾಲೆಗೆ ಕಟ್ಟಡಗಳ ಸಮಸ್ಯೆ ಇರುವುದನ್ನು ಮನಗಂಡು 15 ಶಾಲಾ ಕಟ್ಟಡಗಳಿಗೆ ಅನುದಾನ ನೀಡಿದ್ದೇ ಅವುಗಳು ಸಕಾಲಕ್ಕೆ ಪೂರ್ಣಗೊಂಡು ಇಂದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿವೆ. ಗ್ರಾಮದ ಕೆರೆಯ ಅಭಿವೃದ್ಧಿ 40 ಲಕ್ಷ ರೂ. ಅನುದಾನ ನೀಡಿದ್ದೇನೆ. ಈ ಹಿಂದೆ ಕೆರೆ ಅಭಿವೃದ್ಧಿಗೆ ಹಣ ನೀಡಿ ಅದನ್ನು ಕಳಪೆ ಕಾಮಗಾರಿಯನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಒಡೆದು ಹೋಯಿತು. ಇದು ಕಾಂಗ್ರೆಸ್‌ನವರ ಆಡಳಿತದ ಹಣೆಬರಹ ಎಂದು ಟೀಕಿಸಿದರು.

ಕಾಂಗ್ರೆಸ್ಸಿನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ನೀರಾವರಿ ಯೋಜನೆಯ ಫೈಲ್‌ಗೆ ಸಹಿ ಹಾಕದೇ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಿಜೆಕ್ಟ್ ಮಾಡಿದೆ. ಇದೀಗ ನನ್ನ ಪ್ರಯತ್ನದಿಂದ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಈಗ ಕಾಂಗ್ರೆಸ್‌ ನಾಯಕ ಉಲ್ಟಾ ಹೊಡೆಯುತ್ತಿದ್ದಾರೆ. ವಿಪರೀತ ಮಳೆಗಾಲದಿಂದ ಕೆರೆ ತುಂಬಿಸುವ ಯೋಜನೆ ಸ್ವಲ್ಪ ವಿಳಂಬವಾಯಿತು. ಈಗಾಗಲೇ ಪೈಪ್‌ ಲೈನ್‌ ಆಗಿದ್ದು ವಿದ್ಯುತ್‌ ಕಾಮಗಾರಿಗಳು ಬಾಕಿ ಇವೆ. ಚುನಾವಣೆಗೂ ಮುನ್ನ ಕೃಷ್ಣಾ ನೀರು ಹಾಕುವುದು ಶತಸಿದ್ಧ ಎಂದರು.

ಮಾಜಿ ಸಚಿವ ಕ್ಷೇತ್ರದಲ್ಲಿ ಹೇಳವರ ರೀತಿ ಪುಸ್ತಕ ತಂದು ಜನತೆ ದಿಕ್ಕು ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದು, ಅವರಿಗೆ ಶೋಭೆ ತರುವಂತಹದಲ್ಲ. ಈ ಹಿಂದೆ ಭೂ ಸೇನಾ ನಿಗಮದಲ್ಲಿ 70 ಕೋಟಿ ಅವ್ಯವಹಾರ ಆಗಿದೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನಾನೊನº ರೈತನ ಮಗ ಇಂದಿಗೂ ದನದ ಪಡಸಾಲೆಯಲ್ಲಿ ಮಲಗುತ್ತೇನೆ ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಜನಪರ ಆಡಳಿತ ನೀಡಲು ಮುಂದಾಗಿದ್ದಾರೆ. ಇಡೀ ವಿಶ್ವವೇ ಭಾರದತ್ತ ನೋಡುವಂತಾಗಿದೆ. ದೇಶ ಆರ್ಥಿಕವಾಗಿ ಶಿಸ್ತಿನಿಂದ ಕೂಡಿದೆ. ಮನೆಮನೆಗ ಕುಡಿಯುವ ನೀರು ಪೂರೈಕೆ, ಮಹಿಳೆಯರಿಗೆ ಉಜ್ವಲ ಯೋಜನೆಯ ಗ್ಯಾಸ್‌ ನೀಡಲಾಗಿದೆ. ಭಾರತ ಜೋಡೋ ಯಾತ್ರೆ ರಾಜಕೀಯ ಗಿಮಿಕ್‌ ಆಗಿದೆ. ಕಾಂಗ್ರೆಸ್ಸಿನವರು ಒಂದುಗೂಡಿಸುವ ಕೆಲಸ ಮೊದಲು ಮಾಡಲಿ, ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಡ್ರೇಸ್‌ ಇಲ್ಲದಂತಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಕೆಂಚಮ್ಮ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರಣಪ್ಪ ಕುಡಗುಂಟಿ, ಗ್ರೇಡ್‌-2 ತಹಶೀಲ್ದಾರ್‌ ನಾಗಪ್ಪ ಸಜ್ಜನ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಸಣ್ಣನೀರಾವರಿ ಇಲಾಖೆಯ ಮುರಳಿಧರ ಪಾಟೀಲ, ಲೋಕೋಪಯೋಗಿ ಇಲಾಖೆಯ ಶರಣಬಸಪ್ಪ, ಮಹಾದೇವಪ್ಪ ಪತ್ತಾರ, ಮುಖಂಡರಾದ ಬಸವ ಲಿಂಗಪ್ಪ ಭೂತೆ, ಶಿವಶಂಕರಾವ್‌ ದೇಸಾಯಿ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ವಿಶ್ವನಾಥ ಮರಿಬಸಪ್ಪನವರ, ಕೊಟ್ರಪ್ಪ ತೋಟದ, ಕಳಕಪ್ಪ ತಳವಾರ, ಶಿವಪ್ಪ ವಾದಿ, ರತನ ದೇಸಾಯಿ, ಮಂಜುನಾಥ ಗಟ್ಟೆಪ್ಪನವರ, ಸುಧಾಕರ ದೇಸಾಯಿ, ಬಸಯ್ಯ ಮ್ಯಾಗಳಮಠ, ಶರಣಕುಮಾರ ಅಮರಗಟ್ಟಿ, ಕರಿಯಪ್ಪ ಗುರಿಕಾರ, ಪಿಡಿಒ ವೆಂಕಟೇಶ ನಾಯಕ, ಪ್ರಾಚಾರ್ಯ ಶಿವಪ್ಪ ಬೇಲೇರಿ, ಕುಮಾರಗೌಡ ಪಾಟೀಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next