ನವದೆಹಲಿ: ಇತ್ತೀಚಿಗಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂಬಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಯಾಕೆಂದರೆ ಆ ಎರಡೂ ಕ್ಷೇತ್ರಗಳು ತುಂಬಾ ದುಬಾರಿಯಾಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಮೋಹನ್ ಭಾಗ್ವತ್ ತಿಳಿಸಿದ್ದಾರೆ.
ಅವರು ಆತ್ಮ ಮನೋಹರ ಜೈನ್ ದೇವಸ್ಥಾನದ ಕರ್ನಾಲ್ ಸಂಕೀರ್ಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವ್ಯವಹಾರದಂತೆ ನಡೆಯುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಈ ಹಿಂದೆ ಈ ಕ್ಷೇತ್ರಗಳು ವ್ಯಾಪಾರೀಕರಣಗೊಂಡಿಲ್ಲವಾಗಿತ್ತು ಎಂದರು.
ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಕಂಪನಿಗಳಾಗಿ ಬದಲಾಗಿವೆ ಎಂದು ವಿಷಾದಿಸಿದ ಭಾಗ್ವತ್ ಅವರು, ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣ ಸಿಗುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಅಷ್ಟೇ ಅಲ್ಲ ನಮ್ಮ ದೇಶವನ್ನು ಬ್ರಿಟಿಷರು ಆಕ್ರಮಣ ಮಾಡುವ ಮೊದಲೇ ಶೇ.70ರಷ್ಟು ಭಾರತೀಯರು ಶಿಕ್ಷಣ ಪಡೆದಿದ್ದರು. ನಂತರ ಅವರು ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ದೂಷಿಸಿದ್ದರು ಎಂದು ಭಾಗ್ವತ್ ಹೇಳಿದರು.
Related Articles
ನಮ್ಮ ದೇಶದ ಶೇ.70ರಷ್ಟು ಜನರು ವಿದ್ಯಾವಂತರಾಗಿದ್ದರು. ಅಂದು ನಿರುದ್ಯೋಗ ಇರಲಿಲ್ಲವಾಗಿತ್ತು. ಆದರೆ ಇಂಗ್ಲೆಂಡ್ ನಲ್ಲಿ ಕೇವಲ 17 ಪ್ರತಿಶತ ಜನರು ಮಾತ್ರ ವಿದ್ಯಾವಂತರಾಗಿದ್ದರು. ಆದರೆ ಇಂದು ಅವರ ಶಿಕ್ಷಣದ ಮಾದರಿ ನಮ್ಮ ದೇಶದಲ್ಲಿದೆ ಎಂದರು.