Advertisement

ಎಡಮಂಗಲ ಜಾತ್ರೆ ಸಂಭ್ರಮ: ಮಹಾರಥೋತ್ಸವ

05:17 PM Mar 31, 2018 | |

ಕಡಬ: ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನೆರವೇರಿದ ಎಡಮಂಗಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಮಹಾರಥೋತ್ಸವ ಜರಗಿತು.

Advertisement

ರಾತ್ರಿ ದೇವರ ಬಲಿ ಹೊರಟು ಉತ್ಸವ, ಮಹಾ ರಥೋತ್ಸವ ನಡೆಯಿತು. ಮರೋಳಿ ಶ್ರೀ ಶಿರಾಡಿ ದೈವ ಮತ್ತು ಶ್ರೀ ಕ್ಷೇತ್ರದ ಉದ್ರಾಂಡಿ ದೈವಗಳ ಓಲೆ ಸವಾರಿ, ಪಾಟಾಲಿ ಕಟ್ಟೆ ಪೂಜೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ದೇವರ ಉತ್ಸವ ಬಲಿಯೊಂದಿಗೆ ಕೋಲಾಟ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ, ಶ್ರೀ ದೇವರ ಶಯನೋತ್ಸವ, ಕವಾಟ ಬಂಧನ ನೆರವೇರಿತು. ಶುಕ್ರವಾರ ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭೀಷೇಕ, ಪಂಚಾಮೃತಭಿಷೇಕ, ಕಲಶಾಭಿಷೇಕ, ಮಹಾಪೂಜೆ ಯಾತ್ರಾಹೋಮ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್‌ ದೈವದ ನೇಮ ಜರಗಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಯಲ್ಲಿ ಸಾರ್ವಜನಿಕ ಕಟ್ಟೆಪೂಜೆ, ಬಿಲ್ವಪತ್ರೆ ಕಟ್ಟೆಪೂಜೆ, ನೂಚಿಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಟ್ಟೆಪೂಜೆ ಹಾಗೂ ಕುಮಾರಧಾರಾ ಭಂಡಾರಗಯದಲ್ಲಿ ಅವಭೃಥ ಸ್ನಾನ ನಡೆದು ಧ್ವಜಾವರೋಹಣ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಹರಿ ಎಸ್‌.ಎಸ್‌. ನೂಚಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌. ಸೀತಾರಾಮಯ್ಯ ಕೇಂಜೂರು, ಪ್ರಧಾನ ಕಾರ್ಯದರ್ಶಿ ಗಿರೀಶ್‌ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಮಾಲೆಂಗ್ರಿ, ಅಧ್ಯಕ್ಷ ಚಂದ್ರಶೇಖರ ಮರಕ್ಕಡ, ಕೋಶಾಧಿಕಾರಿ ವೈ.ಎ. ಈಶ್ವರ ಗೌಡ ಏನಡ್ಕ, ಪ್ರಧಾನ ಕಾರ್ಯದರ್ಶಿ ತ್ಯಾಗರಾಜ ಎಚ್‌.ಎಸ್‌. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಡಾ| ಮೋಹನ್‌ಕುಮಾರ್‌ ಬಳಕ್ಕಬೆ, ರವೀಂದ್ರ ದೇರಳ, ಚಂದ್ರಶೇಖರ ಪರ್ಲ, ಎಸ್‌.ಎಸ್‌. ಮಹಾದೇವಿ ಏನಡ್ಕ, ಗೀತಾ ಡಿ. ಕುಕ್ಕುತ್ತಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next