Advertisement
ಕಳೆದೊಂದು ತಿಂಗಳಿಂದ ಪೂರ್ವ ಲಡಾಖ್ ಪ್ರಾಂತ್ಯಗಳ ಬಳಿ ಚೀನಿ ಸೇನೆ ತೋರುತ್ತಾ ಬಂದ ಆಕ್ರಮಣಕಾರಿ ವರ್ತನೆ ಒಂದು ಹಂತಕ್ಕೆ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ.
Related Articles
Advertisement
ಭಾರತದ ಪ್ರದೇಶಗಳಲ್ಲಿ ಬಿಕ್ಕಟ್ಟು ಸೃಷ್ಟಿಸುವುದು ಹಾಗೂ ಇದರ ಜಾಡಲ್ಲಿ ಭಾರತದ ಮೇಲೆ ಒತ್ತಡ ಹೇರುವುದು ಚೀನದ ಹಳೆಯ ರಣನೀತಿಯಾಗಿದೆ. ಆದರೆ ಈಗ ಭಾರತದ ಯಾವುದೇ ಪ್ರದೇಶವನ್ನೂ ಕೈವಶ ಮಾಡಿಕೊಳ್ಳುವುದು ಸುಲಭವಲ್ಲ ಎನ್ನುವುದನ್ನು ಚೀನಿ ಆಡಳಿತ ಹಾಗೂ ಸೇನೆ ಸ್ಪಷ್ಟವಾಗಿ ಅರಿತಿವೆ. ಭಾರತವೀಗ 1962ರ ದೇಶವಾಗಿ ಉಳಿದಿಲ್ಲ.
ಸತ್ಯವೇನೆಂದರೆ, ಈ ಬಾರಿ ಚೀನದ ದುರ್ವರ್ತನೆಯ ಹಿಂದೆ ಅನ್ಯ ಕಾರಣವೂ ಇದೆ. ಭಾರತವು ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರು ವುದು ಚೀನದ ನಿದ್ದೆಗೆಡಿಸಿದೆ. ಪ್ಯಾಂಗಾಂಗ್ ತ್ಸೋ ಲೇಕ್ ಸನಿಹದ ಪ್ರದೇಶದಲ್ಲಿ ಭಾರತವು ರಣಾಂಗಣ ದೃಷ್ಟಿಯಿಂದ ಮಹತ್ವ ಪೂರ್ಣ ರಸ್ತೆಯನ್ನು ನಿರ್ಮಿ ಸಿರುವುದು ಚೀನವನ್ನು ಹೆಚ್ಚು ಕಾಡುತ್ತಿರುವ ವಿಷಯ. ಇನ್ನು ಗಲವಾನ್ ಕಣಿವೆಯಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆಯೂ ಚೀನ ಅಪಸ್ವರವೆತ್ತುತ್ತಿದೆ.
ನಿಸ್ಸಂದೇಹವಾಗಿಯೂ ಭಾರತ ನಿರ್ಮಿಸುತ್ತಿರುವ ರಸ್ತೆಯ ಇಂಚಿಂಚೂ ಕೂಡ ಚೀನಕ್ಕೆ ಬೆಟ್ಟದಷ್ಟು ಚಿಂತೆ ಹೆಚ್ಚಿಸುತ್ತಲೇ ಇದೆ. ಗಲವಾನ್ ಕಣಿವೆಯಲ್ಲಿ ಭಾರತೀಯ ಸೈನ್ಯದ ಉಪಸ್ಥಿತಿಯು ಹೆಚ್ಚಾದರೆ, ಚೀನಿ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸುಲಭವಾಗುತ್ತದೆ. ಚೀನ ಎಷ್ಟೇ ಅಸಮಾಧಾನ ವ್ಯಕ್ತಪಡಿಸಿದರೂ ಭಾರತ ತಾನಿಡುತ್ತಿರುವ ಹೆಜ್ಜೆಯಿಂದ ಹಿಂದೆ ಸರಿಯುತ್ತಿಲ್ಲ. ಈ ಕಾರಣಕ್ಕಾಗಿಯೇ, ಚೀನ ಸದ್ಯಕ್ಕೆ ಸುಮ್ಮನಾದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಕ್ಕಟ್ಟನ್ನಂತೂ ಸೃಷ್ಟಿಸಲಿದೆ. ಈ ಬಗ್ಗೆ ಭಾರತ ಜಾಗರೂಕತೆಯಿಂದಿರಬೇಕು.