ಹುಬ್ಬಳ್ಳಿ: ಅಪರಿಚಿತನು ಧಾರವಾಡದ ವಿದ್ಯಾರ್ಥಿನಿಯೊಬ್ಬರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿಕೊಂಡು ಅವುಗಳಿಗೆ ನಗ್ನ ವಿಡಿಯೋ ಎಡಿಟ್ ಮಾಡಿ ವಾಟ್ಸ್‌ಆ್ಯಪ್ ಮೂಲಕ ಉಪನ್ಯಾಸಕರ ಮೊಬೈಲ್‌ಗೆ ಕಳುಹಿಸಿ ಮಾನಸಿಕ ತೊಂದರೆ ಕೊಡುತ್ತಿರುವ ಬಗ್ಗೆ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪರಿಚಿತನು ವಿದ್ಯಾರ್ಥಿನಿಯ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿ, ನೀವು ಸಾಲ ಪಡೆದುಕೊಂಡಿದ್ದೀರಿ. ಅದನ್ನು ಮರಳಿ ತುಂಬಿರಿ. ಇಲ್ಲವಾದರೆ ನಿಮ್ಮ ವೈಯಕ್ತಿಕ ಸಂಖ್ಯೆಗಳಿಗೆ ನಿಮ್ಮ ಬಗ್ಗೆ ಶೇರ್ ಮಾಡುತ್ತೇನೆಂದು ಹೇಳಿದ್ದಾನೆ.
ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯ ಉಪನ್ಯಾಸಕರ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಅವಳ ನಗ್ನ ವಿಡಿಯೋ ಎಡಿಟ್ ಮಾಡಿ ಕಳುಹಿಸಿ ಮಾನಸಿಕ ತೊಂದರೆ ಕೊಟ್ಟಿದ್ದಲ್ಲದೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ದುರುಪಯೋಗ ಪಡಿಸಿಕೊಂಡಿದ್ದಾನೆ. ಈ ಬಗ್ಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆವೈಸಿ ಅಪ್‌ಡೇಟ್ ಹೆಸರಲ್ಲಿ 51,999 ರೂ. ವಂಚನೆ
ನಗರದ ನಿವೃತ್ತರೊಬ್ಬರಿಗೆ ಅಪರಿಚಿತನು ಬ್ಲಾಕ್ ಆದ ಸಿಮ್ ಕೆವೈಸಿ ಅಪ್‌ಡೇಟ್ ಮಾಡುವುದಾಗಿ ನಂಬಿಸಿ, ಅವರ ಎಟಿಎಂ ಕಾರ್ಡ್ ಸಂಖ್ಯೆ, ಅವಧಿ ಮುಗಿಯುವ ದಿನಾಂಕ, ಒಟಿಪಿ ಮಾಹಿತಿ ಪಡೆದುಕೊಂಡು ಹಂತ ಹಂತವಾಗಿ ಆನ್‌ಲೈನ್ ಮೂಲಕ 51,999ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.