Advertisement

ಗುಣಮಟ್ಟದ ಸೇವೆಯಿಂದ ಜಿ.ಎಲ್‌. ಬ್ರಾಂಡ್ ಮನೆಮಾತು: ಎಡನೀರು ಶ್ರೀ

11:21 PM Apr 02, 2023 | Team Udayavani |

ಪುತ್ತೂರು: ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಗ್ರಾಹಕರ ಹಿತಕ್ಕೆ ತಕ್ಕಂತೆ ಸೇವೆ ನೀಡುತ್ತಿರುವ ಜಿ.ಎಲ್‌.ಸಂಸ್ಥೆಯ ಹೊಸ ಕೊಡುಗೆ ಜಿ.ಎಲ್‌.ಒನ್‌. ಶಾಪಿಂಗ್‌ ಮಾಲ್‌ ನಂಬರ್‌ ವನ್‌ ಆಗಿ ಪ್ರಸಿದ್ಧಿ ಪಡೆಯಲಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

Advertisement

ಜಿ.ಎಲ್‌. ಪ್ರಾಪರ್ಟೀಸ್‌ ಪ್ರವರ್ತಿತ ಜಿ.ಎಲ್‌.ಒನ್‌. ಶಾಪಿಂಗ್‌ ಮಾಲ್‌ ಅನ್ನು ಎ. 2ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಎಲ್‌.ಆಚಾರ್ಯರ ಕನಸಿ ನಂತೆ ಪ್ರಾರಂಭಗೊಂಡ ಸಂಸ್ಥೆ ಅನ್ನು ಮೂರನೇ ತಲೆಮಾರು ಮುನ್ನಡೆ ಸು ತ್ತಿದೆ. ಬಲರಾಮ ಆಚಾರ್ಯ ಅವರು ಜಿ.ಎಲ್‌.ಅನ್ನು ಬ್ರಾಂಡ್ ಆಗಿ ಪರಿವರ್ತಿಸಿದ್ದಾರೆ. ಆ ಮುಕಟಕ್ಕೆ ಸುಸಜ್ಜಿತ ಮಾಲ್‌ ಕೂಡ ಸೇರ್ಪಡೆಯಾಗಿದೆ. ಜಿ.ಎಲ್‌.ಸಂಸ್ಥೆಯು ತನ್ನ ಪರಿಧಿಯನ್ನು ರಾಜ್ಯ, ದೇಶದೆಲ್ಲೆಡೆ ವಿಸ್ತರಿಸುವಂತಾಗಲಿ ಎಂದರು.

ಶ್ರೀ ಧರ್ಮಸ್ಥಳ ಕ್ಷೇತ್ರದ ಡಿ. ಹರ್ಷೇಂದ್ರ ಕುಮಾರ್‌ ಅವರು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಜಿ.ಎಲ್‌.ಒನ್‌. ಮಾಲ್‌ ಅಪೂರ್ವ ಕೊಡುಗೆ ಎನ್ನಬಹುದು. ಅತ್ಯುತ್ತಮ ವಿನ್ಯಾಸ, ಪಾರ್ಕಿಂಗ್‌ ವ್ಯವಸ್ಥೆಗಳೊಂದಿಗೆ ಈ ಮಾಲ್‌ ಗ್ರಾಹಕ ಸ್ನೇಹಿಯಾಗಿ ನಿರ್ಮಾ ಣ ಗೊಂಡಿದೆ ಎಂದು ಶ್ಲಾಘಿಸಿದರು.

ಲಾಂಛನವನ್ನು ಅನಾವರಣ ಗೊಳಿಸಿದ ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮಾತನಾಡಿ, ಪರಿವರ್ತನೆ ಅನ್ನುವುದು ಪ್ರಗತಿಯ ಸಂಕೇತ. ಗುಣಮಟ್ಟದಲ್ಲಿ ನಂಬರ್‌ ವನ್‌ ಸ್ಥಾನ ಹೊಂದಿರುವ ಜಿ.ಎಲ್‌. ಸಂಸ್ಥೆಯು ನಮ್ಮತನವನ್ನು ಉಳಿಸಿ ಕೊಂಡು ಪ್ರಗತಿಗೆ ಪೂರಕವಾದ ಕೊಡುಗೆ ನೀಡಿರುವುದಕ್ಕೆ ಜಿ.ಎಲ್‌.ಒನ್‌ ಮಾಲ್‌ ನಿದರ್ಶನ. ಸರಳತೆಯ ಬದುಕಿನೊಂದಿಗೆ ಕೊಡುಗೆ ನೀಡುತ್ತಿರುವ ಜಿ.ಎಲ್‌.ಆಚಾರ್ಯ ಕುಟುಂಬದ ವ್ಯಕ್ತಿತ್ವ ಸಮಾಜಕ್ಕೆ ಆದರ್ಶ ಪ್ರಾಯ ಎಂದರು.

Advertisement

ಮಂಗಳೂರು ಭಾರತ್‌ ಸಮೂಹ ಸಂಸ್ಥೆಯ ನಿರ್ದೇಶಕ ಆನಂದ್‌ ಪೈ ಮಾತನಾಡಿ, ಇದೊಂದು ದೂರದೃಷ್ಟಿಯುಳ್ಳ ಯೋಜನೆ. ಪುತ್ತೂರಿಗೆ ಅಭಿವೃದ್ಧಿಗೂ ಇದು ಮಹತ್ವದ ಕೊಡುಗೆ ಎಂದರು.

ಪುತ್ತೂರಿನ ಪ್ರಗತಿಗೆ ಪೂರಕ
ಜಿ.ಎಲ್‌.ಸಮೂಹ ಸಂಸ್ಥೆಗಳ ಚೇರ್ಮನ್‌ ಜಿ.ಎಲ್‌.ಬಲರಾಮ ಆಚಾರ್ಯ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಮಾಲ್‌ ಪರಿಕಲ್ಪನೆ ಇಂದು ಉದ್ಘಾಟನೆಗೊಳ್ಳುತ್ತಿರುವುದು ಅತೀವ ಸಂತಸ ತಂದಿದೆ. ಯಾವುದೇ ನಗರ ಬೆಳೆಯಬೇಕೆಂದರೆ ಅಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗಬೇಕು. ಅದರ ಭಾಗವಾಗಿಯೇ ಈ ಮಾಲ್‌ ಅನುಷ್ಠಾನಿಸಲಾಗಿದೆ ಎಂದರು.

ಗೌರವಾರ್ಪಣೆ
ಮಾಲ್‌ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಕೈ ಜೋಡಿಸಿದ ಮಹಾಬಲ ಎಂ, ಶಶಿಧರ ಪೈ, ಸಂದೀಪ್‌, ನಿತಿನ್‌, ಸಂದೀಪ್‌ ಭಂಡಾರಿ, ಸೂರಜ್‌ ರೈ, ಅಜಿತ್‌ ಪೈ, ಅಜಿತ್‌ ಕುಮಾರ್‌, ವಾಮನ ಪೈ, ವಿಶ್ವಾಸ್‌ ಶೆಣೈ, ಪ್ರೇಮನಾಥ, ಜಿತನ್‌, ಪ್ರಶಾಂತ್‌ ಶೆಣೈ, ರಾಜೇಶ್‌, ಪಶುಪತಿ ಶರ್ಮಾ, ಶಶಿಧರ, ಯೋಗನಾಥ, ಮೋನಿಕಾ ಕಾಮತ್‌, ಸುರೇಶ್‌ ಪೈ ಅವರನ್ನು ಸಮ್ಮಾನಿಸಲಾಯಿತು.

ಪುತ್ತೂರು ಎಸ್‌ಜಿ ಕಾರ್ಪೊರೇಟ್ಸ್‌ ಚೇರ್ಮನ್‌ ಕೆ.ಸತ್ಯಶಂಕರ್‌, ಪುತ್ತೂರು ಛೇಂಬರ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ ಅಧ್ಯಕ್ಷ ಜಾನ್‌ ಕುಟಿನ್ಹಾ, ಪುತ್ತೂರು ಅನ್ಸಾರುದ್ದಿನ್‌ ಜಮಾತ್‌ ಸಮಿತಿ ಅಧ್ಯಕ್ಷ ಎಲ್‌.ಟಿ.ಅಬ್ದುಲ್‌ ರಝಾಕ್‌, ಜಿ.ಎಲ್‌.ಪರಿವಾರ ರಾಜೀ ಬಲರಾಮ ಆಚಾರ್ಯ, ಸಂಸ್ಥೆಯ ನಿರ್ದೇಶಕ ಸುಧನ್ವ ಆಚಾರ್ಯ ವೇದಿಕೆಯಲ್ಲಿದ್ದರು. ಪವಿತ್ರಾ ಪ್ರಾರ್ಥಿಸಿದರು. ನಿರ್ದೇಶಕ ಲಕ್ಷ್ಮೀ ಕಾಂತ್‌ ಆಚಾರ್ಯ ವಂದಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು.
ಸಭಾ ಕಾರ್ಯಕ್ರಮಗಳ ಬಳಿಕ ಮ್ಯೂಸಿಕ್‌ ಪರ್ಬ ಪ್ರದರ್ಶನ ಗೊಂಡಿತು.

ಹಲವು ವಿಶೇಷತೆಗಳ ಜಿ.ಎಲ್‌.ಒನ್‌. ಮಾಲ್‌
ಪುತ್ತೂರಿನ ಮುಖ್ಯಬಸ್‌ ನಿಲ್ದಾಣದಿಂದ 500 ಮೀಟರ್‌ ದೂರದಲ್ಲಿ ನಿರ್ಮಾಣಗೊಂಡಿರುವ ಈ ಮಾಲ್‌ 1 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಒಟ್ಟು ಐದು ಅಂತಸ್ತುಗಳಿವೆ. ವಿಶಾಲ ಪಾರ್ಕಿಂಗ್‌, ರಾಷ್ಟ್ರೀಯ, ಅಂತಾರಾಷ್ಟ್ರೀಯ ಬ್ರಾಂಡ್ ನ‌ ರಿಟೈಲ್‌ ಶಾಪ್‌, ಭಾರತ್‌ ಸಿನೆಮಾಸ್‌ನ 3 ಸ್ಕ್ರೀನ್‌ಗಳ ಮಲ್ಟಿಪ್ಲೆಕ್ಸ್‌ ಥಿಯೇಟರ್‌, ಮಕ್ಕಳ ಮನರಂಜನೆಗಾಗಿ ಗೇಮಿಂಗ್‌ ವಲಯ, ಆಕರ್ಷಕ ಫುಡ್‌ ಕೋರ್ಟ್‌ ಇತ್ಯಾದಿ ಸೌಲಭ್ಯಗಳಿದೆ. ಮೂರು ಲಿಫ್ಟ್‌, 2 ಎಲವೇಟರ್‌, ಪ್ರತಿ ಮಹಡಿಯಲ್ಲಿ ಶೌಚಾಲಯ, ಕ್ಲೀನ್‌ ಎನರ್ಜಿ-ಗ್ರೀನ್‌ ಎನರ್ಜಿ ಪರಿಕಲ್ಪನೆಯಲ್ಲಿ ಸೋಲಾರ್‌ ಪ್ಲ್ರಾಂಟ್‌, ನೀರಿನ ಮರು ಬಳಕೆ, ಪವರ್‌ ಎಫೀಶಿಯೇಟ್‌ ಏರ್‌ ಕಂಡಿಷನ್‌, ಪ್ರತಿ ಮಹಡಿಯಲ್ಲಿ ಸಣ್ಣ ಗಾತ್ರ ಕಿಯೋಕ್ಸ್‌, ವಿಶಾಲ ಪಾರ್ಕಿಂಗ್‌ ಇತ್ಯಾದಿ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಆಧುನಿಕ ಬ್ರಾಂಡ್ ನ‌ ಶಾಪಿಂಗ್‌ ಅನುಭವ ನೀಡಲು ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next