Advertisement

430ಕೆ.ಜಿ ಚಿನ್ನ, ಬೆಳ್ಳಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

08:10 PM Sep 14, 2022 | Team Udayavani |

ಮುಂಬೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಚಿನ್ನಾಭರಣ ಮಾರಾಟ ಸಂಸ್ಥೆಗೆ ಸೇರಿದ ಲಾಕರ್‌ನಿಂದ 47 ಕೋಟಿ ರೂ. ಮೌಲ್ಯದ 430 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಹೊತ್ತಿರುವ ಸಂಸ್ಥೆಯ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆ ಹೊಂದಿರುವ 761 ಲಾಕರ್‌ಗಳ ಕೀ ಸಿಕ್ಕಿತ್ತು. ಅವುಗಳ ಪೈಕಿ 3ನ್ನು ತೆರೆದು ಪರಿಶೀಲಿಸಿದಾಗ 91.5 ಕೆ.ಜಿ. ಚಿನ್ನ ಹಾಗೂ 152 ಕೆ.ಜಿ ಬೆಳ್ಳಿ ಸಿಕ್ಕಿದೆ.

ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಜಾಗದಲ್ಲಿ 188 ಕೆ.ಜಿ. ಬೆಳ್ಳಿ ಸಿಕ್ಕಿದೆ. ಇವುಗಳ ಮೌಲ್ಯ ಒಟ್ಟು 47.76 ಕೋಟಿ ರೂ. ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next