Advertisement

ವಾದ್ರಾ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯದ ಹೊಸ ಕೇಸು

10:07 AM Jan 07, 2019 | Team Udayavani |

ಹೊಸದಿಲ್ಲಿ : ಹರಿಯಾಣ ಗುರ್ಗಾಂವ್‌ ನಲ್ಲಿ 2008ರಲ್ಲಿ ನಡೆದಿರುವ ಭೂ ಅಕ್ರಮ ಮತ್ತು ಶಂಕಿತ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಮತ್ತು ಇತರ ಕೆಲವರ ವಿರುದ್ಧ  ಕೇಸು ದಾಖಲಿಸಿದೆ ಎಂದು ಅಧಿಕಾರಿಗಳು ಇಂದು ಸೋಮವಾರ ತಿಳಿಸಿದ್ದಾರೆ.

Advertisement

ಅನುಷ್ಠಾನ ಮಾಹಿತಿ ವರದಿ ಎಂದು ಕರೆಯಲ್ಪಡುವ ಕ್ರಿಮಿನಲ್‌ ಎಫ್ಐಆರ್‌ ಅನ್ನು ದಾಖಲಿಸಿರುವ ಜಾರಿ ನಿರ್ದೇಶನಾಲಯ ಕಳೆದ ವರ್ಷ ವಾದ್ರಾ ಜತೆ ನಂಟು ಹೊಂದಿದ್ದ ಮೂವರ ವಿರುದ್ಧ ದಾಳಿ ಕಾರ್ಯಾಚರಣೆ ನಡೆಸಿತ್ತು. 

ಕೆಲವೊಂದು ಶಂಕಿತ ರಕ್ಷಣಾ ವಹಿವಾಟುಗಳಲ್ಲಿ ಕಮಿಷನ್‌ ಸ್ವೀಕರಿಸಲಾದ ಸಂಬಂಧ ಜಾರಿ ನಿರ್ದೇಶನಾಲಯ ಶಂಕಿತರ ವಿರುದ್ಧ  ಶೋಧ ಕಾರ್ಯಾಚರಣೆ ನಡೆಸಿತ್ತು. ಹರಿಯಾಣ ಪೊಲೀಸರು ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ದಾಖಲಿಸಿದ್ದ ಎಫ್ಐಆರ್‌ ಆಧರಿಸಿ ಜಾರಿ ನಿರ್ದೇಶನಾಯ ಈ ಹೊಸ ಆಪಾದನೆಗಳನ್ನು ಮಾಡಿ ಕೇಸು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next